ಹಳೆಯ 5 ರೂಪಾಯಿ ನೋಟಿಗೆ 5 ಲಕ್ಷ ರೂಪಾಯಿ ಆಮಿಷ! ಮೋಸ ಹೋದ ಚಿಕ್ಕಬಳ್ಳಾಪುರದ ಮಹಿಳೆ
ಆಸ್ಮ ಎಸ್ ಗೆ 70058 48463 ಪೋನ್ ನಂಬರ್ ನಿಂದ ಕರೆ ಮಾಡಿದ ವಂಚಕನೊರ್ವ ಹಳೆಯ 5 ರೂಪಾಯಿ ನೊಟನ್ನು ಕಳುಹಿಸಿದರೆ ನಿಮಗೆ 5 ಲಕ್ಷ ರೂಗಳು ಬರುತ್ತೆ ಎಂದು ನಂಬಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಹಳೆಯ 5 ರೂಪಾಯಿ ನೋಟ್ ಇದೆ ಅಂತ ತಿಳಿಸಿ ತನ್ನ ಬಳಿ ಇದ್ದ ಹಳೆ 5 ರೂಪಾಯಿ ನೋಟ್ ನೀಡಲು ಒಪ್ಪಿಕೊಂಡಿದ್ದಾಳೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 6: ನಿಮ್ಮ ಬಳಿ ಹಳೆಯ 5 ರೂಪಾಯಿ ನೋಟ್ ಇದ್ದರೆ ಅದಕ್ಕೆ ಪರ್ಯಾಯವಾಗಿ 5 ಲಕ್ಷ ರೂಪಾಯಿ ನೋಟ್ ಗಳನ್ನು ಕೊಡ್ತಿವಿ ಅನ್ನೊ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ನೋಡಿದ ಮಹಿಳೆಯೊರ್ವಳು ಸುಲಭವಾಗಿ 5 ರೂಪಾಯಿ ಬದಲು 5 ಲಕ್ಷ ರೂಪಾಯಿ ಪಡೆಯುವ ಆಶೆಯಿಂದ ಮನೆಯಲ್ಲಿದ್ದ 35,063/- ರೂಪಾಯಿಗಳನ್ನು ವಂಚಕರಿಗೆ (cheating) ನೀಡಿ ಸುಲಭವಾಗಿ ಮೋಸ ಹೋದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ (Chikkaballapur) ನಗರದ ವಾಪಸಂದ್ರ ಬಡಾವಣೆಯ ನಿವಾಸಿ ಶ್ರೀಮತಿ ಆಸ್ಮ ಎಸ್ ಮೋಸ ಹೋದ ಮಹಿಳೆ (woman).
ಆಸ್ಮ ಎಸ್ ಗೆ 70058 48463 ಪೋನ್ ನಂಬರ್ ನಿಂದ ಕರೆ ಮಾಡಿದ ವಂಚಕನೊರ್ವ ಹಳೆಯ 5 ರೂಪಾಯಿ ನೊಟನ್ನು ಕಳುಹಿಸಿದರೆ ನಿಮಗೆ 5 ಲಕ್ಷ ರೂಗಳು ಬರುತ್ತೆ ಎಂದು ನಂಬಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಹಳೆಯ 5 ರೂಪಾಯಿ ನೋಟ್ ಇದೆ ಅಂತ ತಿಳಿಸಿ ತನ್ನ ಬಳಿ ಇದ್ದ ಹಳೆ 5 ರೂಪಾಯಿ ನೋಟ್ ನೀಡಲು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಕ್ರೂರ-ಅತಿ ದಾರುಣ: ಹತ್ತಾರು ಕೋತಿಗಳಿಗೆ ವಿಷವಿಕ್ಕಿ ಕೊಂದ ಮನುಷ್ಯರು! ಗ್ರಾನೈಟ್ ಬಿಸಿನೆಸ್ ಕಾರಣವಾಯ್ತಾ?
ಆಗ ವಂಚನೆ ಆಟ ಶುರು ಮಾಡಿದ ವಂಚಕ 5 ಲಕ್ಷ ರೂಪಾಯಿ ನೀಡಲು ವಿವಿಧ ತೆರಿಗೆಗಳನ್ನು ಕಟ್ಟಬೇಕು ಅದಕ್ಕೆ 35,063/- ರೂಪಾಯಿ ನೀಡಬೇಕು ಅಂತ ಮಹಿಳೆಯಿಂದ ಹಣ ಪಡೆದು 5 ಲಕ್ಷ ರೂಪಾಯಿ ಹಣ ನೀಡದೆ ವಂಚನೆ ಮಾಡಿದ್ದಾನೆ. ಇದ್ರಿಂದ ಮೋಸ ಹೋದ ಮಹಿಳೆ ಚಿಕ್ಕಬಳ್ಳಾಪುರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.
ಇದನ್ನೂ ಓದಿ: ಐದು ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ಲಕ್ಷಾಧಿಪತಿ ಆಗಬಹುದು, ಈ ನೋಟು ನಿಮ್ಮ ಬಳಿ ಇದ್ಯಾ ನೋಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Fri, 6 October 23