AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆ ನವೀಕರಣ!

ಭಾರತ ರತ್ನ ಸರ್​. ವಿಶ್ವೇಶ್ವರಯ್ಯನವರು ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಯೊಂದು ನಿರ್ವಹಣೆ ಕೊರತೆಯಿಂದ ಬಳಲುತ್ತಿತ್ತು. ಇದನ್ನು ಗಮನಿಸಿದ ಖ್ಯಾತ ತೆಲುಗು ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ ಅಭಿಮಾನಿಗಳು, ಅವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆ ನವೀಕರಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆ ನವೀಕರಣ!
ನವೀಕರಣದ ನಂತರ ಕಂದವಾರ ಸರ್ಕಾರಿ ಶಾಲೆ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Sep 04, 2025 | 10:13 AM

Share

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 4: ಭಾರತ ರತ್ನ ಸರ್​ಎಂ ವಿಶ್ವೇಶ್ವರಯ್ಯ (Sir M Visvesvaraya) ಪ್ರಾಥಮಿಕ ಶಿಕ್ಷಣ ಪಡೆದ ಚಿಕ್ಕಬಳ್ಳಾಪುರ ನಗರದ ಕಂದವಾರ ಸರ್ಕಾರಿ ಶಾಲೆ (Government School) ಇತ್ತೀಚೆಗೆ ಸೂಕ್ತ ನಿರ್ವಹಣೆ ಹಾಗೂ ಮೂಲಸೌಕರ್ಯಗಳಿಲ್ಲದೆ ಶಿಥಿಲಗೊಂಡಿತ್ತು. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಹಾಗೂ ಉದಾಸೀನದಿಂದ ಬರಗೆಟ್ಟಿತ್ತು. ಇದನ್ನು ಗಮನಿಸಿದ ಖ್ಯಾತ ತೆಲುಗು ನಟ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pavan Kalyan) ಅಭಿಮಾನಿಗಳು, ಪವನ್ ಕಲ್ಯಾಣ್​ರ ಹುಟ್ಟು ಹಬ್ಬದ ಪ್ರಯುಕ್ತ ಸದರಿ ಶಾಲೆಯನ್ನು ನವೀಕರಣ ಮಾಡಿದ್ದಾರೆ. ಶಾಲೆಯ ಆವರಣ, ಕಟ್ಟಡಗಳ ಸುತ್ತಮುತ್ತ ಸೇರಿದಂತೆ ಕೊಠಡಿಗಳ ಸ್ವಚ್ಛತೆ, ನವೀಕರಣ ಮಾಡಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರೇರಣೆಯಿಂದ ಕೆಲವರು ದೊಡ್ಡ ದೊಡ್ಡ ಉದ್ಯಮಿಗಳು, ಖ್ಯಾತ ಇಂಜಿನಿಯರ್​ಗಳಾಗಿ ರೂಪುಗೊಂಡಿದ್ದಾರೆ. ಯುವ ಪೀಳಿಗೆಗೆ ವಿಶ್ವೇಶ್ವರಯ್ಯನವರ ಮೌಲ್ಯಗಳನ್ನು ಪರಿಚಯ ಮಾಡಲು ಅವರು ವಿದ್ಯಾಭ್ಯಾಸ ಮಾಡಿದ ಶಾಲೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಬೇಕಿತ್ತು. ಅದನ್ನು ಮಾಡವುದು ಹಾಗಿರಲಿ, ಶಾಲಾ ಶಿಕ್ಷಣ ಇಲಾಖೆ ಕನಿಷ್ಠ ನಿರ್ವಾಹಣೆಯನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ಪವನ್ ಕಲ್ಯಾಣ್ ಅಭಿಮಾನಿಗಳು ನವೀಕರಣ ಕಾರ್ಯ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Chikkaballapur Govt School Renovation

ವಿಶ್ವೇಶ್ವರಯ್ಯನವರು ವಿದ್ಯಾಭ್ಯಾಸ ಮಾಡಿದ್ದ ಈ ಶಾಲೆ ಈಗ ಎರಡು ತಿಂಗಳ ಹಿಂದೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು. ಹೆಂಚುಗಳು ಇಲ್ಲದೆ, ಕಟ್ಟಡವೂ ಶಿಥಿಲಾವಸ್ಥೆಗೆ ಬಂದು ತರಗತಿಗೆ ಹೆಜ್ಜೆ ಇಡಲಾಗದ ಪರಿಸ್ಥಿತಿ ಇತ್ತು. ಆಗ ಕರ್ನಾಟಕ ರೈತ ಜನಸೇನಾದ ಸಂಸ್ಥಾಪಕ ಅಧ್ಯಕ್ಷರಾದ ಸುಷ್ಮಾ ಶ್ರೀನಿವಾಸ್ ಹಾಗೂ ಧನಗೋಪಾಲ್ ಅವರು ಶ್ರದ್ಧಾ ಭಕ್ತಿಯಿಂದ ನವೀಕರಣ ಕಾರ್ಯ ಮಾಡಿ ಮಾದರಿಯಾಗಿದ್ದಾರೆ ಎಂದು ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ ಹೇಳಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಅವರು ಆರೋಪಿಸಿದ್ದು, ಇಂಥ ದುಃಸ್ಥಿತಿ ಸರ್ಕಾರಿ ಶಾಲೆಗಳಿಗೆ ಬರಬಾರದು ಎಂದಿದ್ದಾರೆ.

ಇದನ್ನೂ ಓದಿ: ನಂದಿಗಿರಿಧಾಮ ಪ್ರವಾಸ ಹೋಗ್ತೀರಾ? ಈ ವಿಚಾರ ತಿಳಿದಿರಲೇಬೇಕು: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಖ್ಯಾತ ತೆಲುಗು ನಟರೂ ಆಗಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅಭಿಮಾನಿಗಳು, ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ವಿದ್ಯಾಭ್ಯಾಸ ಮಾಡಿದ ಸರ್ಕಾರಿ ಶಾಲೆಯನ್ನು ನವೀಕರಣ ಮಾಡಿದ್ದು ಇತರರಿಗೆ ಮಾದರಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ
ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ
ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ