Adiyogi Statue: ಚಿಕ್ಕಬಳ್ಳಾಪುರದ 112 ಅಡಿ ಆದಿಯೋಗಿ ಪ್ರತಿಮೆ ಮೇಲೆ 3ಡಿ ಲೇಸರ್ ಶೋ, ಶಿವನ ದಿವ್ಯದರ್ಶನಕ್ಕೆ ಭಕ್ತರು ಫಿದಾ

ಚಿಕ್ಕಬಳ್ಳಾಪುರದ 112 ಅಡಿ ಆದಿಯೋಗಿ ಪ್ರತಿಮೆಯನ್ನು ಭಾನುವಾರ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ.

Adiyogi Statue: ಚಿಕ್ಕಬಳ್ಳಾಪುರದ 112 ಅಡಿ ಆದಿಯೋಗಿ ಪ್ರತಿಮೆ ಮೇಲೆ 3ಡಿ ಲೇಸರ್ ಶೋ, ಶಿವನ ದಿವ್ಯದರ್ಶನಕ್ಕೆ ಭಕ್ತರು ಫಿದಾ
ಚಿಕ್ಕಬಳ್ಳಾಪುರದ 112 ಅಡಿ ಆದಿಯೋಗಿ ಪ್ರತಿಮೆ
Follow us
| Updated By: ಆಯೇಷಾ ಬಾನು

Updated on:Jan 16, 2023 | 8:13 AM

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 112 ಅಡಿಯ ಆದಿಯೋಗಿ(Adiyogi) ಶಿವನ ಪ್ರತಿಮೆ ನಿರ್ಮಾಣ ಮಾಡಿದ್ದು, ನಾಡಿನ ದೊರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಆದಿಯೋಗಿ ಪ್ರತಿಮೆಯನ್ನು ಭಾನುವಾರ ಸಂಜೆ ಉದ್ಘಾಟನೆ ಮಾಡಿದ್ದಾರೆ. ಇನ್ನೂ ಆದಿಯೋಗಿ ಪ್ರತಿಮೆಯ ಮೇಲೆ ನಡೆಸಿದ ಲೇಸರ್ ಶೋಗೆ ನೆರೆದಿದ್ದ ಜನರು ಫಿದಾ ಆಗಿದ್ದಾರೆ. ಮತ್ತೊಂದೆಡೆ ಆದಿಯೋಗಿ ಉದ್ಘಾಟನೆ ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ರೋಮಾಂಚನವನ್ನುಂಟು ಮಾಡಿತ್ತು.

ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇಶಾ ಪೌಂಡೇಷನ್ ನೂತನ ಆಶ್ರಮ ನಿರ್ಮಾಣ ಮಾಡ್ತಿದ್ದು ನೂತನ ಆಶ್ರಮದಲ್ಲಿ ರಾಜ್ಯದಲ್ಲೆ ಮೊದಲ ಬಾರಿಗೆ 112 ಅಡಿಯ ಆದಿಯೋಗಿ ಶಿವನ ವಿಗ್ರಹ ನಿರ್ಮಾಣ ಮಾಡಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಸಂಜೆ ಆಶ್ರಮಕ್ಕೆ ಆಗಮಿಸಿ ಬೃಹತ್ ಆದಿಯೋಗಿ ಪ್ರತಿಮೆ ಉದ್ಘಾಟನೆ ಮಾಡಿದ್ರು. ಸಚಿವರುಗಳಾದ ಡಾ.ಕೆ.ಸುಧಾಕರ್, ನಾಗೇಶ್, ಸಿಸಿ ಪಾಟೀಲ್ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದ್ರು. ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಜನರಿಗೆ ಸಂಕ್ರಾಂತಿಯ ಶುಭಾಶಯ ಕೋರಿದ್ರು. ಶಿವಾ ವಿಸ್ಮಯ ಮೂರ್ತಿ, ಶಿವನನ್ನು ಅರ್ಥ ಮಾಡಿಕೊಂಡರೆ ಸೃಷ್ಟಿಯನ್ನು ಅರ್ಥ ಮಾಡಿಕೊಂಡಂತೆ ಸದ್ಗುರು ಜಗ್ಗಿ ವಾಸುದೇವ್ ಆದಿಯೋಗಿ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗು ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಆದಿಯೋಗಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ತಮ್ಮ ಕ್ಷೇತ್ರಕ್ಕೆ ಜಗ್ಗಿ ವಾಸುದೇವ್ ಆಗಮಿಸಿ ನೂತನ ಆಶ್ರಮ ಹಾಗೂ ಪ್ರತಿಮೆ ನಿರ್ಮಾಣ ಮಾಡಿರುವುದು ನಮ್ಮ ಸುದೈವ. ಅವರ ಜೊತೆ ತಾವು ಇರುವುದಾಗಿ ಭರವಸೆ ನೀಡಿದ್ರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಗ್ರೀನ್​ ಸಿಗ್ನಲ್

ಇನ್ನೂ ಆದಿಯೋಗಿ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಆದಿಯೋಗಿ ಪ್ರತಿಮೆ ಮೇಲೆ ನಡೆಸಿದ ಲೇಸರ್ ಶೋ ನೆರೆದಿದ್ದ ಜನರನ್ನು ಭಕ್ತಿಯ ಲೋಕದಲ್ಲಿ ಮುಳುಗಿಸಿತ್ತು. ಸದ್ಗುರು ಜಗ್ಗಿ ವಾಸುದೇವ್ ಮಗಳ ರಾಧೆ ನಡೆಸಿಕೊಟ್ಟ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೊರೆಗೊಂಡವು. ಬಳಿಕ ಮಾತನಾಡಿದ ಜಗ್ಗಿ ವಾಸುದೇವ್, ತಮ್ಮ ತಾಯಿಯ ತವರು ಮನೆ ಚಿಕ್ಕಬಳ್ಳಾಪುರ ಆಗಿದ್ದು ತಾವು ಚಿಕ್ಕಂದಿನಲ್ಲೆ ಅಕ್ಕ ಪಕ್ಕದ ಬೆಟ್ಟಗಳಲ್ಲಿ ತಮ್ಮ ತಾಯಿಯ ಜೊತೆ ಕಾಲ ಕಳೆದಿದ್ದೆವು. ತಮ್ಮ ತಾಯಿ ಆಧ್ಯಾತ್ಮಿಕ ಹಾಗೂ ಯೋಗ ಪಟುವಾಗಿದ್ರು. ತಾವು ಚಿಕ್ಕಬಳ್ಳಾಪುರದಲ್ಲೆ ಬಾಲ್ಯ ಕಳೆದಿದ್ದು, ಆದ್ರೆ ಈಗ ಕೆಲವರು ಬೆಟ್ಟದ ಹೆಸರು ಬದಲಾಯಿಸಿ, ತಮ್ಮ ಸಮಾಜಮುಖಿ ಕಾರ್ಯಕ್ರಮಗಳಿಗೆ ಅಡ್ಡಿಗೆ ಯತ್ನಿಸಿದ್ರು ಎಂದರು.

adiyogi statue

ಓಟ್ನಲ್ಲಿ ತಮಿಳುನಾಡಿನ ಕೊಯಮುತ್ತೂರಿನ ಇಶಾ ಪೌಂಡೇಷನ್ ವರತುಪಡಿಸಿದ್ರೆ ರಾಜ್ಯದಲ್ಲೆ 112 ಅಡಿಯ ಆದಿಯೋಗಿ ಪ್ರತಿಮೆಯನ್ನು ಚಿಕ್ಕಬಳ್ಳಾಪುರದಲ್ಲಿ ಅನಾವರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವಲಗುರ್ಕಿಯ ಇಶಾ ಪೌಂಡೇಷನ್ ಪವಿತ್ರ ತಾಣ ಆಗುವುದರಲ್ಲಿ ಅನುಮಾನ ಇಲ್ಲ.

ವರದಿ: ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಪುರ

Published On - 8:11 am, Mon, 16 January 23

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ