ಚಿಕ್ಕಬಳ್ಳಾಪುರವನ್ನು ಬೆಂಗಳೂರಿಗೆ ಸಮಾನವಾಗಿ ಅಭಿವೃದ್ಧಿಯ ಸ್ಪರ್ಶ: ಕೆ. ಸುಧಾಕರ್
ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ಪ್ರತಿಮೆ ಅನಾವರಣದ ವಿರುದ್ದ ಕೆಲವರು ಹೈಕೋರ್ಟ್ ಮೊರೆ ಹೋಗಿರುವ ವಿಚಾರವಾಗಿ ಮಾತನಾಡಿದ ಅವರು ಯಾರು ಏನೆ ಮಾಡಿದರು ನಾನು ಹಾಗೂ ನಮ್ಮ ಜನ ಇಶಾ ಪೌಂಡೇಶನ್ಗೆ ಬೆಂಬಲ ನೀಡುತ್ತೇವೆ ಎಂದು ಕೆ. ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಾಗಿ 15 ವರ್ಷ ಪೂರೈಸಿದ್ದು, ಮುಂದಿನ 5 ವರ್ಷಗಳಲ್ಲಿ ಬೆಂಗಳೂರಿಗೆ ಸಮಾನವಾಗಿ ಜಿಲ್ಲಾಕೇಂದ್ರವಾಗಿ ಅಭಿವೃದ್ಧಿಯ ಸ್ಪರ್ಶ ನೀಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (K Sudhakar) ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಉತ್ಸವದ ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ಕಲಾವಿದರ ಮೆರವಣಿಗೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ಸವ ಯಶಸ್ಸು ಕಂಡಿರುವುದು ಜನರ ಮೇಲೆ ತಮಗೆ ಧನ್ಯತಾಭಾವ ಮೂಡಿಸಿದೆ. ದಸರಾ ರೀತಿಯಲ್ಲಿ ಉತ್ಸವ ಮಾಡಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ಉತ್ಸವಕ್ಕೆ ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿರುವುದು ಸಂಸತ ತಂದಿದೆ ಎಂದರು.
ಇದನ್ನೂ ಓದಿ: ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುವುದು ಜೆಡಿಎಸ್ ಹವ್ಯಾಸ: ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ವಾಗ್ದಾಳಿ
ದಸರಾ ಸ್ಮರಿಸುವ ರೀತಿಯಲ್ಲಿ ನಗರದಾದ್ಯಂತ ದೀಪಾಲಂಕಾರ ವಿಶೇಷವಾಗಿತ್ತು. ಪ್ರತಿ ರಸ್ತೆಯನ್ನು ವೈಶಿಷ್ಯೃಪೂರ್ಣವಾಗಿ ಅಲಂಕರಿಸಲಾಗಿತ್ತು. ಹೊಸ ಚಿಕ್ಕಬಳ್ಳಾಪುರವನ್ನು ಕಾಣುವಂತಾಯಿತು, ಇತಿಹಾಸ ನಿರ್ಮಿಸುವ ಕೆಲಸವಾಗಿದೆ, ಇನ್ನೇನಿದ್ದರೂ ಭವಿಷ್ಯವನ್ನು ಕಟ್ಟುವ ಕೆಲಸವಾಗಲಿದೆ, ಜನರೇ ಹುಮ್ಮಸ್ಸು ನೀಡುವವರು, ಅವರನ್ನು ಕಂಡರೆ ಆಸಕ್ತಿ ಹೆಚ್ಚಾಗಲಿದೆ, ಇತರೆ ಉತ್ಸವಗಳಿಗಿಂತ ಕಳಪೆ ಇರಬಾರದು, ಗಣಮಟ್ಟ ಕಾಯ್ದುಕೊಳ್ಳಬೇಕು ಎಂಬ ಅನಿಸಿಕೆ ಇತ್ತು ಅದು ಈಡೇರಿದೆ ಎಂದು ಹೇಳಿದರು.
ಯಾರು ಏನೆ ಮಾಡಿದ್ರು ನನ್ನ ಸಂಪೂರ್ಣ ಬೆಂಬಲ ಇಶಾ ಫೌಂಡೇಶನ್ಗೆ
ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ಪ್ರತಿಮೆ ಅನಾವರಣದ ವಿರುದ್ದ ಕೆಲವರು ಹೈಕೋರ್ಟ್ ಮೊರೆ ಹೋಗಿರುವ ವಿಚಾರವಾಗಿ ಮಾತನಾಡಿದ ಅವರು ಯಾರು ಏನೆ ಮಾಡಿದರು ನಾನು ಹಾಗೂ ನಮ್ಮ ಜನ ಇಶಾ ಪೌಂಡೇಶನ್ಗೆ ಬೆಂಬಲ ನೀಡುತ್ತೇವೆ . ದೇಶ ವಿದೇಶದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಗೌರವ ಘನತೆ ಇದೆ. ತಮಿಳುನಾಡು ಬಿಟ್ಟರೆ ವಿಶ್ವದಲ್ಲೆ 112 ಅಡಿಗಳ ಆದಿಯೋಗಿ ಪ್ರತಿಮೆ ನಮ್ಮೂರಲ್ಲಿ ಆಗುತ್ತಿದೆ. ನಮ್ಮೂರು ಬಳಿ ಈಶಾ ಫೌಂಡೇಶನ್ನಿಂದ ಕ್ಷೇತ್ರ ಅಭಿವೃದ್ದಿ ಆಗುತ್ತದೆ. ವಿಶ್ವದ ಪ್ರಸಿದ್ದ ಸಂತರೊಬ್ಬರು ಆಶ್ರಮ ಮಾಡುತ್ತಾರೆ. ಸಹಕಾರ ಕೊಡದಿದ್ದರೂ ಪರವಾಗಿಲ್ಲ ಕಲ್ಲು ಹಾಕಬೇಡಿ ಎಂದು ಮನವಿ ಮಾಡಿಕೊಂಡರು.
ಸದ್ಗುರು ಇಶಾ ಆಶ್ರಮ ನಿರ್ಮಾಣಕ್ಕೆ ನಾನು ಯಾವುದೆ ರೀತಿ ಸಹಕಾರ ಬೆಂಬಲ ಕೊಡುತ್ತೇನೆ. ಬೇರೆ ಯಾರೆ ಸಾದು ಸಂತರು ಬರುವುದಾದರೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ನಮಗೆ ನಮ್ಮ ಕ್ಷೇತ್ರ ನಮ್ಮ ಜನ ಅಭಿವೃದ್ದಿಯಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ, ಸಚಿವ ಸುಧಾಕರ್ಗೆ ಮುಜುಗರ ತಂದ ಕೆಲವು ಪ್ರಶ್ನೆಗಳು
ಶೈಕ್ಷಣಿಕ ಕೇಂದ್ರವಾಗಿ ಚಿಕ್ಕಬಳ್ಳಾಪುರ
ಧರ್ಮದ ಆಚಾರ ವಿಚಾರಗಳನ್ನು ಸಂರಕ್ಷಿಸುವ ಕೆಲಸ ಅವರಿಂದ ಆಗಲಿದೆ, ಕಲೆಗಳಿಗೆ ಸಂಬಂಧಿಸಿದ ಶಾಲೆಗಳು ಜಿಲ್ಲೆಯಲ್ಲಿ ಸ್ಥಾಪಿಸುತ್ತಾರೆ. ಇಶಾ ಫೌಂಡೇಷನ್, ಮುದ್ದೇನಹಳ್ಳಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳು, ನಗರದ ಎಸ್ಜೆಸಿಐಟಿ ಸಂಸ್ಥೆಗಳು ಮತ್ತು ಸಿವಿವಿ ಶಿಕ್ಷಣ ಸಂಸ್ಥೆಗಳಿಂದ ಜಿಲ್ಲೆ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು.
ಶೀಘ್ರವೇ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಕುರಿತು ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಇಷ್ಟರಲ್ಲೇ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ಗಳು ಸಂಚರಿಸಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 am, Sun, 15 January 23