ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುವುದು ಜೆಡಿಎಸ್ ಹವ್ಯಾಸ: ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ ವಾಗ್ದಾಳಿ
ಎಲ್ಲೊ ಕುಳಿತು ಚಿಕ್ಕಬಳ್ಳಾಪುರ ಕೋಲಾರದ ಬಗ್ಗೆ ಮಾತನಾಡುತ್ತಾರೆ. ಇಲ್ಲೆ ಇದ್ದು ಅನುಭವಿಸಿದರೆ ಮಾತ್ರ ನಮ್ಮ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಜೆಡಿಸ್ ವಿರುದ್ಧ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಫುರ: ಇಶಾ ಪೌಂಡೇನ್ನಿಂದ (Isha Foundation) ನಿರ್ಮಾಣ ಮಾಡಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನಾಳೆ ಅನಾವರಣದ (Adiyogi statue unveiled) ವಿರುದ್ಧ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಎಚ್ಎನ್ ವ್ಯಾಲಿ (H.N.Valley Chikkaballapura) ಯೋಜನೆ ಜಾರಿಗೆ ಅಡ್ಡಗಾಲು ಹಾಕಿದ್ದರು ಎಂದು ಜೆಡಿಎಸ್ (JDS) ಮುಖಂಡರ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr.K.Sudhakar) ವಾಗ್ದಾಳಿ ನಡೆಸಿದರು. ಜೆಡಿಎಸ್ನವರಿಗೆ ರೈತರು ಹಾಗೂ ಕ್ಷೇತ್ರ ಉದ್ಧಾರವಾಗುವುದು ಬೇಕಾಗಿಲ್ಲ. ಅವರಿಗೆ ಬೆಲೆ ಕೊಟ್ಟು ಎಚ್ಎನ್ ವ್ಯಾಲಿ ಜಾರಿ ಮಾಡದಿದ್ದಿದ್ದರೆ ರೈತರ ಬದುಕು ಬರ್ಬಾದ್ ಆಗುತ್ತಿತ್ತು. ಎಲ್ಲೋ ಕುಳಿತು ಚಿಕ್ಕಬಳ್ಳಾಪುರ ಕೋಲಾರದ ಬಗ್ಗೆ ಮಾತನಾಡುತ್ತಾರೆ. ಇಲ್ಲೆ ಇದ್ದು ಅನುಭವಿಸಿದರೆ ಮಾತ್ರ ನಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಯಾವುದೇ ಅಭಿವೃದ್ಧಿಗೂ ಅಡ್ಡಗಾಲು ಹಾಕವುದು ಜೆಡಿಎಸ್ ನಾಯಕರ ಹವ್ಯಾಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ಉತ್ಸವ ಇಂದಿಗೆ ಮುಕ್ತಾಯವಾಗಲಿರುವ ಹಿನ್ನಲೆ ಮಾತನಾಡಿದ ಅವರು, ಜನರ ಶಕ್ತಿಯೇ ನನ್ನ ಶಕ್ತಿ, ಜನರ ಅಭಿಮಾನ ಪ್ರೀತಿಯೆ ನನ್ನ ಶಕ್ತಿ. ಉತ್ಸವಕ್ಕೆ ಬಂದ ಜನಸಾಗರವನ್ನು ನೋಡಿ ಮತ್ತಷ್ಟು ಶಕ್ತಿ ಬಂದಿದೆ. ಯಾರನ್ನೋ ಯಾವುದನ್ನೋ ನೋಡಿ ಉತ್ಸವ ಮಾಡಲು ಹೋಗಿಲ್ಲ. ರಾಜ್ಯ ದೇಶ ವಿದೇಶ ಮಟ್ಟದ ಉತ್ಸವಕ್ಕಿಂತ ಕಡಿಮೆ ಇರಬಾರದು ಎನ್ನುವುದು ನನ್ನ ಉದ್ದೇಶವಾಗಿತ್ತು. ರಾಜ್ಯ ದೇಶದ ಖ್ಯಾತ ಕಲಾವಿದರು ಉತ್ಸವದಲ್ಲಿ ಬಾಗವಹಿಸಿದ್ದಕ್ಕೆ ಧನ್ಯವಾದಗಳು ಎಂದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಇಶಾ ಫೌಂಡೇಶನ್ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಚಿಕ್ಕಬಳ್ಳಾಪುರ ಉತ್ಸವದ ಮೂಲಕ ಇತಿಹಾಸ ನಿರ್ಮಾಣ ಕಾರ್ಯವಾಗಿದೆ. ಭವಿಷ್ಯ ಕಟ್ಟುವ ಕೆಲಸವನ್ನು ನಾನು ಮಾಡುತ್ತೇನೆ. ಚಿಕ್ಕಬಳ್ಳಾಪುರ ಉತ್ಸವದ ಮೂಲಕ ಚಿಕ್ಕಬಳ್ಳಾಪುರ ಟೀನೇಜ್ಗೆ ಬಂದಿದೆ. ಮುಂದಿನ ಐದು ವರ್ಷಗಳಲ್ಲಿ ಮಾದರಿ ಜಿಲ್ಲೆ ಮಾಡುತ್ತೇವೆ ಎಂದು ಸಚಿವ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ವಿಸ್ತರಣೆ ಬಗ್ಗೆ ಮಾತನಾಡಿದ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಎಸ್ಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿ ಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ಗಳು ಬರಲಿವೆ ಎಂದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ