AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

45 ವರ್ಷ ನಂತರ ತುಂಬಿದ ಕೆರೆ! ಕೋಡಿ ನೀರಿಗೆ ಫಿದಾ ಆದ ರೈತರು! ಬೆಳೆ ನಷ್ಟವಾದರೂ ರೈತರ ಮೊಗದಲ್ಲಿ ಮಂದಹಾಸ!!

Chikkaballapur Amani Gopalakrishna lake: ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ಜುಳು ಜುಳು ನಿನಾದ ಇದ್ರೂ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಕಾವೇರಿ ನೀರಿನ ಸದ್ದೆ ಇಲ್ಲ, ಇದ್ರಿಂದ ಜಿಲ್ಲೆಯಲ್ಲಿ ಶಾಶ್ವತ ನೀರಿನ ಮೂಲಗಳಿಲ್ಲದೆ... ಅಂತರ್ಜಲ ಪಾತಾಳ ಸೇರಿತ್ತು... ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಸಂಕಷ್ಟ ಅರಿತ ಮಳೆರಾಯ, ಇತ್ತಿಚಿಗೆ ಸಾಕು ಸಾಕು ಎನ್ನುವಷ್ಟು ಮಳೆ ಸುರಿಸಿದ್ದಾನೆ, ಇದ್ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಕೆರೆ ಕುಂಟೆ ನದಿ ನಾಲೆಗಳು ತುಂಬಿ ಹರಿಯುತ್ತಿವೆ.

45 ವರ್ಷ ನಂತರ ತುಂಬಿದ ಕೆರೆ! ಕೋಡಿ ನೀರಿಗೆ ಫಿದಾ ಆದ ರೈತರು! ಬೆಳೆ ನಷ್ಟವಾದರೂ ರೈತರ ಮೊಗದಲ್ಲಿ ಮಂದಹಾಸ!!
45 ವರ್ಷ ನಂತರ ತುಂಬಿದ ಕೆರೆ! ಕೋಡಿ ನೀರಿಗೆ ಫಿದಾ ಆದ ರೈತರು! ಬೆಳೆ ನಷ್ಟವಾದರೂ ರೈತರ ಮೊಗದಲ್ಲಿ ಮಂದಹಾಸ!!
TV9 Web
| Updated By: ಸಾಧು ಶ್ರೀನಾಥ್​|

Updated on:Dec 07, 2021 | 12:14 PM

Share

ಅದು ಬಯಲು ಸೀಮೆಯ ಬರದ ನಾಡಿನ ಜಿಲ್ಲೆ. ಅಲ್ಲಿ ಯಾವಾಗಲೂ ನೀರಿಗಾಗಿಯೆ ಧರಣಿ, ಪ್ರತಿಭಟನೆ ಹೋರಾಟ ಬಂದ್ ಮಾಡುತ್ತಿದ್ದ ಜಿಲ್ಲೆ. ಅಲ್ಲಿಗೆ ಆ ನೀರು ಬರುತ್ತೆ ಈ ನೀರು ಬರುತ್ತೆ ಅಂತ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಸುರಿದಿದೆ. ಆದ್ರೆ ಇದುವರೆಗೂ ಸಮರ್ಪಕವಾಗಿ ಯಾವುದೆ ನೀರಿನ ಮೂಲಗಳು ಅಲ್ಲಿಗೆ ಬಂದಿಲ್ಲ, ಆದ್ರೆ ಇತ್ತಿಚಿಗೆ ಸುರಿದ ಧಾರಾಕರ ಮಳೆಗೆ, ಜಿಲ್ಲೆಯ ಅತಿ ದೊಡ್ಡ ಕೆರೆಯೊಂದು ತುಂಬಿ ಎರಡು ಕಡೆ ಕೊಡಿ ನೀರು ಹರಿಯುತ್ತಿದೆ, ಇದ್ರಿಂದ ರೈತರು ಕೆರೆ ನೀರಿನಿಂದ ಬೆಳೆ ನಷ್ಟ ಆದ್ರು ಲೆಕ್ಕಿಸದೆ, ಕೆರೆ ಕೋಡಿ ನೀರನ್ನು ನೋಡಿ ಸಂತಸ ಸಂಭ್ರಮ ಆಚರಿಸುತ್ತಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ಓದಿ (chikkaballapur rains).

ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ಜುಳು ಜುಳು ನಿನಾದ ಇದ್ರೂ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಕಾವೇರಿ ನೀರಿನ ಸದ್ದೆ ಇಲ್ಲ, ಇದ್ರಿಂದ ಜಿಲ್ಲೆಯಲ್ಲಿ ಶಾಶ್ವತ ನೀರಿನ ಮೂಲಗಳಿಲ್ಲದೆ… ಅಂತರ್ಜಲ ಪಾತಾಳ ಸೇರಿತ್ತು… ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಸಂಕಷ್ಟ ಅರಿತ ಮಳೆರಾಯ, ಇತ್ತಿಚಿಗೆ ಸಾಕು ಸಾಕು ಎನ್ನುವಷ್ಟು ಮಳೆ ಸುರಿಸಿದ್ದಾನೆ, ಇದ್ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಕೆರೆ ಕುಂಟೆ ನದಿ ನಾಲೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಿಲ್ಲೆಯ ಅತಿ ದೊಡ್ಡ ಕೆರೆಯಾಗಿರುವ ಚಿಕ್ಕಬಳ್ಳಾಪುರದ ಅಮಾನಿ ಗೋಪಾಲ ಕೃಷ್ಣ ಕೆರೆ 45 ವರ್ಷಗಳ ನಂತರ ತುಂಬಿ ಕೆರೆಯ ಎರಡು ಕಡೆ ಕೊಡಿ ಹರಿಯುತ್ತಿದೆ. ಇದ್ರಿಂದ ರೈತರ ಮೊಗದಲ್ಲಿ ಸಂತಸ ಇಮ್ಮಡಿಯಾಗಿದೆ.

620 ಎಕರೆ ವಿಶಾಲವಾದ ಜಾಗದಲ್ಲಿ ಇರುವ ಅಮಾನಿ ಗೋಪಾಲಕೃಷ್ಣ ಕೆರೆ, 45 ವರ್ಷಗಳ ನಂತರ ಕೊಡಿ ಹರಿಯುತ್ತಿದೆ. ಇದ್ರಿಂದ ಕೆರೆಯ ಕಾಲುವೆ ಹೊಡೆದು ಕೆಲವೆಡೆ ರೈತರ ಜಮೀನುಗಳು ಜಲಾವೃತವಾಗಿ ಬೆಳೆದಿದ್ದ ಬೆಳೆಗಳು ಹಾಳಾಗಿವೆ, ಆದ್ರು ರೈತರು, ಹೊದ್ರೆ ಒಂದು ಬೆಳೆ ಹೊಗಲಿ ಇನ್ನೂ ಹತ್ತು ಬೆಳೆ ಬೆಳೆದು ನಿರಾಳರಾಗಬಹುದು ಅಂತ ಕೆರೆಯಲ್ಲಿ ನೀರು ನೋಡಿ ಸಂತಸಗೊಂಡಿದ್ದಾರೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಜಲಾಶಯಗಳು, ಕೆರೆ ಕುಂಟೆ ನದಿ ನಾಲೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದು, ಪಾತಾಳ ಸೇರಿದ್ದ ಅಂತರ್ಜಲ ಈಗ ಬೋರ್ ವೇಲ್ ಗಳಲ್ಲಿ ಉಕ್ಕಿ ಹರಿಯುತ್ತಿದೆ. ಇದ್ರಿಂದ ಜಲಾಶಯಗಳ ಸುತ್ತ ಪ್ರಕೃತಿ ಸೌಂದರ್ಯ ಮೇಳೈಸಿದೆ. – ಭೀಮಪ್ಪ ಪಾಟೀಲ್, ಟಿವಿ9, ಚಿಕ್ಕಬಳ್ಳಾಪುರ

CuCumber Demand: ಚಿಕ್ಕಬಳ್ಳಾಫುರದ ಎಪಿಎಂಸಿ ಮಾರ್ಕೆಟ್​​ನಲ್ಲಿ ನುಗ್ಗೆಕಾಯಿ ರೇಟ್​ ಎಷ್ಟು ಗೊತ್ತಾ?|Tv9 kannada

Published On - 12:09 pm, Tue, 7 December 21

ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ