ಬೆಂಗಳೂರು ಬಂದ್ ಪರಿಣಾಮ; ಚಿಕ್ಕಬಳ್ಳಾಪುರದಲ್ಲಿ ಕುಸಿದ ಹೂ ಬೆಲೆ, ಹೂಗಳನ್ನು ತಿಪ್ಪೆ ಗುಂಡಿಗೆ ಸುರಿದ ರೈತರು

ಬೆಳೆದ ಹೂವನ್ನು ಮಾರಾಟ ಮಾಡಲು ರೈತರು, ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಗೆ ಬಂದಿದ್ದರು. ಆದ್ರೆ ಹೂ ಕೊಂಡುಕೊಳ್ಳುವ ದೊಡ್ಡ ದೊಡ್ಡ ವರ್ತಕರು ಬಂದಿರಲಿಲ್ಲ. ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನಲೆ ಇಂದು ಬೆಂಗಳೂರು ಬಂದ್ ಮಾಡಿದ ಕಾರಣ ಬೆಂಗಳೂರಿನ ವರ್ತಕರು ಮಾರುಟ್ಟೆಗೆ ಬಂದಿರಲಿಲ್ಲ, ಇದ್ರಿಂದ ಹೂಗಳನ್ನು ಕೊಂಡುಕೊಳ್ಳುವವರು ಯಾರು ಇಲ್ಲದೆ ಹೂಗಳು ತಿಪ್ಪೆ ಪಾಲಾದವು.

ಬೆಂಗಳೂರು ಬಂದ್ ಪರಿಣಾಮ; ಚಿಕ್ಕಬಳ್ಳಾಪುರದಲ್ಲಿ ಕುಸಿದ ಹೂ ಬೆಲೆ, ಹೂಗಳನ್ನು ತಿಪ್ಪೆ ಗುಂಡಿಗೆ ಸುರಿದ ರೈತರು
ಹೂಗಳನ್ನು ತಿಪ್ಪೆ ಗುಂಡಿಗೆ ಸುರಿದ ರೈತ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Ganapathi Sharma

Updated on: Sep 26, 2023 | 6:33 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 26: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ರೈತರು ಪುಷ್ಪೋದ್ಯಮವನ್ನೇ ನಂಬಿಕೊಂಡು ಸ್ವಾಭಿಮಾನದ ಬದುಕು ಕಂಡವರು. ಪುಷ್ಪೋದ್ಯಮದಲ್ಲಿ ಏನೇ ಏರುಪೇರಾದರೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇನ್ನೂ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನಲೆ ಇಂದು ಬೆಂಗಳೂರು ಬಂದ್ (Bangalore Bandh) ಮಾಡಿದ ಕಾರಣ ಚಿಕ್ಕಬಳ್ಳಾಪುರದ ಹೂ (Flower) ಬೆಳೆಗಾರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೂಗಳನ್ನು ಟ್ರ್ಯಾಕ್ಟರ್​​ಗೆ ತುಂಬಿ ತಿಪ್ಪೆ ಗುಂಡಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೂವು ಮಾರುಕಟ್ಟೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರದಲ್ಲಿ, ಹೂವು ಬೆಳೆಗಾರರೇ ಹೆಚ್ಚಾಗಿದ್ದಾರೆ. ಪ್ರಸ್ತುತ 12,500 ಎಕರೆಗಳಲ್ಲಿ ಹೂವು ಬೆಳೆಯಲಾಗುತ್ತಿದೆ. ಹೀಗೆ ಬೆಳೆದ ಹೂವನ್ನು ಮಾರಾಟ ಮಾಡಲು ರೈತರು, ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಗೆ ಬಂದಿದ್ದರು. ಆದ್ರೆ ಹೂ ಕೊಂಡುಕೊಳ್ಳುವ ದೊಡ್ಡ ದೊಡ್ಡ ವರ್ತಕರು ಬಂದಿರಲಿಲ್ಲ. ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನಲೆ ಇಂದು ಬೆಂಗಳೂರು ಬಂದ್ ಮಾಡಿದ ಕಾರಣ ಬೆಂಗಳೂರಿನ ವರ್ತಕರು ಮಾರುಟ್ಟೆಗೆ ಬಂದಿರಲಿಲ್ಲ, ಇದ್ರಿಂದ ಹೂಗಳನ್ನು ಕೊಂಡುಕೊಳ್ಳುವವರು ಯಾರು ಇಲ್ಲದೆ ಹೂಗಳು ತಿಪ್ಪೆ ಪಾಲಾದವು.

ರಾಶಿ ರಾಶಿ ಸೇವಂತಿ, ಚೆಂಡೂ ಹೂ, ರೋಜ್ ಸೇರಿದಂತೆ ವಿವಿಧ ಹೂಗಳನ್ನು ಯಾರು ಕೊಂಡುಕೊಳ್ಳದ ಕಾರಣ, ರೈತರು ಟ್ರ್ಯಾಕ್ಟರ್ ಟ್ರಾಲಿಗೆ ತುಂಬಿ ತಿಪ್ಪೆ ಗುಂಡಿಗೆ ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಚಿಕ್ಕಬಳ್ಳಾಪುರದಿಂದ ರಾಜಧಾನಿ ಬೆಂಗಳೂರಿಗೆ ಪ್ರತಿದಿನ 10 ಟನ್ ಗಿಂತಲೂ ಹೆಚ್ಚು ಹೂ ಮಾರಾಟವಾಗ್ತಿದೆ. ಆದ್ರೆ ಇಂದು ಬೆಂಗಳೂರು ಬಂದ್ ಮಾಡಿದ ಕಾರಣ ವ್ಯಾಪಾರಿಗಳು ಚಿಕ್ಕಬಳ್ಳಾಪುರದತ್ತ ಮುಖ ಮಾಡಿರಲಿಲ್ಲ. ಇದ್ರಿಂದ ಹೂವು ಬೆಳೆಗಾರರು ಅಸಮಧಾನ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: ಬೆಂಗಳೂರು ಬಂದ್ ಶಾಂತಿಯುತ; ಬಹುತೇಕ ಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ

ಈ ಮಧ್ಯೆ, ಬೆಂಗಳೂರು ಬಂದ್ ಬಹುತೇಕ ಶಾಂತಿಯುತವಾಗಿ ಕೊನೆಗೊಂಡಿತು. ಜಯನಗರದಲ್ಲಿ ಹೋಟೆಲೊಂದರ ಮೇಲೆ ದಾಳಿ ನಡೆದ ಘಟನೆ ಬಿಟ್ಟರೆ ಉಳಿದಂತೆ ಬಹುತೇಕ ಬಂದ್ ಯಶಸ್ವಿಯಾಯಿತು. ಸಂಜೆ ವೇಳೆಗೆ ಬೆಂಗಳೂರು ನಗರ ಸಹಜ ಸ್ಥಿತಿಗೆ ಮರಳಿತು. ಆದರೆ, ಕೆಎಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?