ಚಿಕ್ಕಬಳ್ಳಾಪುರ: ವೃದ್ಧನಿಗೆ ಚಿಕಿತ್ಸೆ ನೀಡಲು ಸತಾಯಿಸಿದ ಸರ್ಕಾರಿ ವೈದ್ಯರು, ವ್ಹೀಲ್‍ಚೇರ್ ಕೊಡದೇ ಸತಾಯಿಸಿದ ಸಿಬ್ಬಂದಿ

ರಕ್ತದ ಮಡವಿನಲ್ಲಿದ್ದ ಗಾಯಾಳು ವೃದ್ಧನನ್ನು ಒಳಗೆ ಕರೆದುಕೊಳ್ಳುವಂತೆ, ಇಲ್ಲವೇ ವ್ಹೀಲ್‍ಚೇರ್, ಸ್ಟ್ರೆಚರ್ ನೀಡುವಂತೆ ಮಹಿಳಾ ಹೋಮ್‍ಗಾರ್ಡ್‍ಗಳು ಹಾಗೂ ಆಟೋಚಾಲಕ ಮನವಿ ಮಾಡಿದ್ದಾರೆ. ಆದರೆ, ಶನಿವಾರ ಕರ್ತವ್ಯದಲ್ಲಿದ್ದ ವೈದ್ಯರಾಗಲೀ, ಆಸ್ಪತ್ರೆಯ ಸಿಬ್ಬಂದಿಯಾಗಲೀ ಯಾರೊಬ್ಬರೂ ನೆರವಿಗೆ ಧಾವಿಸಲಿಲ್ಲ.

ಚಿಕ್ಕಬಳ್ಳಾಪುರ: ವೃದ್ಧನಿಗೆ ಚಿಕಿತ್ಸೆ ನೀಡಲು ಸತಾಯಿಸಿದ ಸರ್ಕಾರಿ ವೈದ್ಯರು, ವ್ಹೀಲ್‍ಚೇರ್ ಕೊಡದೇ ಸತಾಯಿಸಿದ ಸಿಬ್ಬಂದಿ
ಸಾರ್ವಜನಿಕರೇ ವೃದ್ಧನನ್ನು ಹೊತ್ತುಕೊಂಡು ಬರುತ್ತಿರುವುದು
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Ganapathi Sharma

Updated on:Sep 25, 2023 | 7:46 PM

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 25: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನದಲ್ಲಿದ್ದ ಚಿಕ್ಕಬಳ್ಳಾಪುರ ನಗರದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯನ್ನು (Chikkaballapur Distrcit Hospital) ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿದ್ದೇ ತಡ, ಆಸ್ಪತ್ರೆಯಲ್ಲಿ ಹೇಳೋರು, ಕೇಳೋರು ಇಲ್ಲದಂತಾಗಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಆಡಿದ್ದೇ ಆಟವಾಗಿದೆ. ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ, ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಬಳಿ ರಸ್ತೆಬದಿ ಪುಟ್‍ಪಾತ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವೃದ್ಧರೊಬ್ಬರು ಆಯತಪ್ಪಿ ಚರಂಡಿಗೆ ಬಿದ್ದಿದ್ದಾರೆ. ಅವರ ಬಲಗಾಲು ರಕ್ತದ ಕೋಡಿಯಾಗಿತ್ತು. ಅಲ್ಲೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಬಳಿ ಇದ್ದ ಮಹಿಳಾ ಹೋಮ್‍ಗಾರ್ಡ್​​ಗಳಾದ ಶಿಲ್ಪಾ ಹಾಗೂ ಭಾಗ್ಯ ಮಾನವೀಯತೆಯಿಂದ ವೃದ್ದನನ್ನು ಮೇಲೆಕ್ಕೆ ಎತ್ತಿ ಆರೈಕೆ ಮಾಡಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದ ಆಟೋವೊಂದನ್ನು ನಿಲ್ಲಿಸಿ ತಕ್ಷಣವೇ ಆಟೋದಲ್ಲಿ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ.

ಗಾಯಾಳು ವೃದ್ಧನಿಗೆ ವ್ಹೀಲ್‍ಚೇರ್, ಸ್ಟ್ರೆಚರ್ ನೀಡದೇ ಉದ್ಧಟತನ

ಮಹಿಳಾ ಹೋಮ್‍ಗಾರ್ಡ್‍ಗಳು ಹಾಗೂ ಆಟೋಚಾಲಕ ಮಾನವೀಯತೆಯಿಂದ ಅಪರಿಚಿತ ವೃದ್ಧನನ್ನು ಚಿಕ್ಕಬಳ್ಳಾಪುರ ನಗರದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ (ವೈದ್ಯಕೀಯ ಶಿಕ್ಷಣ ಇಲಾಖೆಯ ಸುಪರ್ದಿ) ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆ ಬಳಿ ಆಟೋ ನಿಲ್ಲಿಸಿ, ರಕ್ತದ ಮಡವಿನಲ್ಲಿದ್ದ ಗಾಯಾಳು ವೃದ್ಧನನ್ನು ಒಳಗೆ ಕರೆದುಕೊಳ್ಳುವಂತೆ, ಇಲ್ಲವೇ ವ್ಹೀಲ್‍ಚೇರ್, ಸ್ಟ್ರೆಚರ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಶನಿವಾರ ಕರ್ತವ್ಯದಲ್ಲಿದ್ದ ವೈದ್ಯರಾಗಲೀ, ಆಸ್ಪತ್ರೆಯ ಸಿಬ್ಬಂದಿಯಾಗಲೀ ಯಾರೊಬ್ಬರೂ ನೆರವಿಗೆ ಧಾವಿಸಲಿಲ್ಲ. ಸ್ಟ್ರೆಚರ್, ವ್ಹೀಲ್‍ಚೇರ್ ನೀಡಲಿಲ್ಲ. ಗಂಟೆಯ ನಂತರ ಸಾರ್ವಜನಿಕರು ವೃದ್ಧನನ್ನು ಹೊತ್ತುಕೊಂಡು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿದರು. ಆಗಲೂ ಸಹಾ ತುರ್ತುಚಿಕಿತ್ಸಾ ಘಟಕದಲ್ಲಿ ವೈದ್ಯರಿಲ್ಲ, ಕೇವಲ ಒಬ್ಬ ಬ್ರದರ್, ಒಬ್ಬ ನರ್ಸ್‍ಇದ್ದರು.

ವೈದ್ಯರ ವಿಶ್ರಾಂತಿ ಕೊಠಡಿಯಲ್ಲಿ ಹಾಯಾಗಿದ್ದ ವೈದ್ಯ

ಕಳೆದ ಶನಿವಾರ ಮದ್ಯಾಹ್ನ ವೃದ್ಧನನ್ನು ಸಾರ್ವಜನಿಕರೇ ತುರ್ತುಚಿಕಿತ್ಸಾ ಘಟಕಕ್ಕೆ ತಂದು ದಾಖಲು ಮಾಡಿದರು. ಆದರೆ ತುರ್ತು ಚಿಕಿತ್ಸೆಗೆ ಆಗಮಿಸಬೇಕಿದ್ದ ಕರ್ತವ್ಯನಿರತ ವೈದ್ಯೆ, ವೈದ್ಯರ ವಿಶ್ರಾಂತಿ ಗೃಹದಲ್ಲಿ ಹಾಯಾಗಿ ಹಗಲುಗನಸಿನಲ್ಲಿ ಇದ್ದಂತೆ ಭಾಸವಾಗಿತ್ತು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಹೆರಿಗೆ ಲಂಚಕ್ಕಾಗಿ ಗರ್ಭಿಣಿ ಪತಿಯ ಮೊಬೈಲ್ ಅಡವಿಟ್ಟುಕೊಂಡ ವೈದ್ಯರು

ನಿವಾಸಿ ವೈದ್ಯಾಧಿಕಾರಿಗೆ ಕರೆ ಮಾಡಿದ ನಂತರ ಬಂದ ವೈದ್ಯೆ

ಸದಾ ತುರ್ತು ಚಿಕಿತ್ಸಾ ಘಟಕದಲ್ಲಿ ಅಲರ್ಟ್ ಆಗಬೇಕಿದ್ದ ತುರ್ತುಚಿಕಿತ್ಸಾ ವೈದ್ಯರು ಹಾಗೂ ಸಿಬ್ಬಂದಿ ಇದ್ದೂ ಇಲ್ಲದಂತಾಗಿದ್ದರು. ಅಷ್ಟೊತ್ತಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಟಿವಿ9 ಪ್ರತಿನಿಧಿ ಭೀಮಪ್ಪ ಪಾಟೀಲ್ ಆಸ್ಪತ್ರೆಗೆ ತೆರೆಳಿ, ನಿವಾಸಿ ವೈದ್ಯಾಧಿಕಾರಿ ಡಾ. ರಮೇಶ್ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ನಂತರವಷ್ಟೇ ಕರ್ತವ್ಯನಿರತ ವೈದ್ಯೆ ನಿದ್ದೆಗಣ್ಣಿನಿಂದ ಎದ್ದುಬಂದು ಚಿಕಿತ್ಸೆಗೆ ಮುಂದಾಗಿದ್ದರು.

ಗಾಯಾಳು ವೃದ್ಧ ಕರ್ತವ್ಯನಿರತ ಮಹಿಳಾ ಹೆಡ್‍ಕಾನ್ಸಟೇಬಲ್ ಮಾವ

ಅತ್ತ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ವೃದ್ದ, ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯನಿರತ ಮಹಿಳಾ ಹೆಡ್‍ಕಾನ್ಸಟೇಬಲ್‍ರವರೊಬ್ಬರ ಮಾವ ಆಗಿದ್ದಾರೆ. ನಾವು ಬೇರೆ ಪೊಲೀಸ್‍ಠಾಣೆಯಲ್ಲಿ ಕರ್ತವ್ಯದಲ್ಲಿರುತ್ತೀವಿ. ಬೇಡವೆಂದರೂ ಹೊರಗಡೆ ಬಂದು ಮಾವ ಬಿದ್ದಿದ್ದಾರೆ. ಇಲ್ಲಿ ನೋಡಿದರೆ ವೈದ್ಯರಿಲ್ಲವೆಂದು ಹೆಡ್‍ಕಾನ್ಸಟೇಬಲ್ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಹೋಮ್‍ಗಾರ್ಡ್​​ ಹಾಗೂ ಆಟೋ ಚಾಲಕನಿಗೆ ಸೆಲ್ಯೂಟ್

ರಸ್ತೆಯ ಪಕ್ಕದ ಚರಂಡಿಯಲ್ಲಿ ಬಿದ್ದ ವೃದ್ಧನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆತಂದ ಮಹಿಳಾ ಹೋಮ್‍ಗಾರ್ಡ್​​​ಗಳಾದ ಶಿಲ್ಪಾ, ಭಾಗ್ಯ ಹಾಗೂ ಆಟೋಚಾಲಕ ಮಾನವೀಯತೆ ಮೆರೆದಿದ್ದಾರೆ. ಆದರೆ ಲಕ್ಷ-ಲಕ್ಷ ಸರ್ಕಾರಿ ಸಂಬಳ ಪಡೆಯುವ ಸರ್ಕಾರಿ ವೈದ್ಯರೇಕೇ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Mon, 25 September 23

ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ