ಬೆಂಗಳೂರು ಬಂದ್ ಶಾಂತಿಯುತ; ಬಹುತೇಕ ಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ

Bangalore Bandh Updates from City Police Commissioner; ಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು. ಯಾವುದೇ ಬಸ್​ಗಳಿಗೆ ಕಲ್ಲು ತೂರಾಟ ಆಗಿಲ್ಲ. ಜಯನಗರದಲ್ಲಿ ಕೆಲ ಘಟನೆಗಳು ನಡೆದಿವೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಬಿ ದಯಾನಂದ ಮಾಹಿತಿ ನೀಡಿದರು.

ಬೆಂಗಳೂರು ಬಂದ್ ಶಾಂತಿಯುತ; ಬಹುತೇಕ ಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ
ಬೆಂಗಳೂರು ಬಂದ್ ವೇಳೆ ಟೌನ್​ಹಾಲ್ ಮುಂಭಾಗ ಕಾವೇರಿ ಹೋರಾಟ ಸಮಿತಿ ಸದಸ್ಯರಿಂದ ಪ್ರತಿಭಟನೆ
Follow us
Jagadisha B
| Updated By: Ganapathi Sharma

Updated on: Sep 26, 2023 | 6:01 PM

ಬೆಂಗಳೂರು, ಸೆಪ್ಟೆಂಬರ್ 26: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುಗಡೆ ವಿಚಾರವಾಗಿ ನಡೆದಿರುವ ಬೆಂಗಳೂರು ಬಂದ್ (Bangalore Bandh) ಶಾಂತಿಯುತವಾಗಿದೆ. ಯಾವುದೇ ಅಹಿತಕರ ಘಟನೆಗಳು ನಗರದಲ್ಲಿ ನಡೆದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದರು. ಬಂದ್ ವಿಚಾರವಾಗಿ ಮಂಗಳವಾರ ಸಂಜೆ ಮಾಹಿತಿ ನೀಡಿದ ಅವರು, ಇವತ್ತು ಕೆಲವು ಸಂಘಟನೆಗಳು ಬಂದ್ ಮಾಡಿವೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ನಗರದಾದ್ಯಂತ ವ್ಯಾಪಕವಾದ ಬಂದೋಬಸ್ತ್ ಮಾಡಲಾಗಿತ್ತು. ಮೊದಲೇ ಕೆಲವರನ್ನು ನಾವು ವಶಕ್ಕೆ ಪಡೆದಿದ್ದೆವು. ಪ್ರತಿಭಟನೆಗೆ ಬಂದವರನ್ನೂ ವಶಕ್ಕೆ ಪಡೆದಿದ್ದೆವು ಎಂದು ತಿಳಿಸಿದರು.

ಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು. ಯಾವುದೇ ಬಸ್​ಗಳಿಗೆ ಕಲ್ಲು ತೂರಾಟ ಆಗಿಲ್ಲ. ಜಯನಗರದಲ್ಲಿ ಕೆಲ ಘಟನೆಗಳು ನಡೆದಿವೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಬಿ ದಯಾನಂದ ಮಾಹಿತಿ ನೀಡಿದರು.

ಜಯನಗರ ಶಾಸಕರನ್ನು ವಶಕ್ಕೆ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೈಕ್ ರ್ಯಾಲಿ ಮಾಡಲು ಸಿದ್ಧತೆ ಮಾಡಿದ್ದರು. ಇದಕ್ಕೆ ಮೊದಲೇ ಅವರನ್ನು ವಶಕ್ಕೆ ಪಡೆಯಲಾಗಿತ್ತು. ತಮಿಳುನಾಡು ಬಸ್​​​ಗಳು ಅವರಾಗಿಯೇ ಸಂಚಾರ ನಿಲ್ಲಿಸಿದ್ದರು. ಈಗ ಎಲ್ಲಾ ಬಸ್​​ಗಳ ಸಂಚಾರ ಆರಂಭವಾಗುತ್ತಿದೆ. ವಿಮಾನ ನಿಲ್ದಾಣಕ್ಕೂ ಬಸ್​​​ಗಳ ಸಂಚಾರ ಆಗ್ತಾ ಇದೆ. ಬೆಂಗಳೂರಿನಲ್ಲಿ ಶಾಂತಿಯುತವಾಗಿ ಬಂದ್ ಆಗಿದೆ ಎಂದು ಪೊಲೀಸ್ ಆಯುಕ್ತ ಹೇಳಿದರು.

ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದ್ದ ಒಂದು ಸಾವಿರಕ್ಕೂ ಅಧಿಕ ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದೆ. ಬಂದ್​​ನಲ್ಲಿ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನೆನ್ನೆ ರಾತ್ರಿಯಿಂದಲೇ ಫೀಲ್ಡ್​​ನಲ್ಲಿ ನಿಯೋಜನೆಗೊಂಡಿದ್ದರು. ಉತ್ತಕ ಕೆಲಸ ಮಾಡಿದ ಸಿಬ್ಬಂದಿಯನ್ನು ಡಿಜಿ ಹಾಗೂ ಗೃಹಸಚಿವರು ಶ್ಲಾಘಿಸಿದ್ದಾರೆ ಎಂದು ಅವರು ಹೇಳಿದರು.

29ರ ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಕುರಿತು ಪರಿಶೀಲಿಸಲಾಗುವುದು. ನಂತರ ಅಗತ್ಯ ಬಂದೊಬಸ್ತ್ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕರ್ನಾಟಕಕ್ಕೆ ತಪ್ಪದ ಸಂಕಷ್ಟ: ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಆರ್​ಸಿ ಆದೇಶ

ಸಹಜ ಸ್ಥಿತಿಯತ್ತ ಬೆಂಗಳೂರು

ಈ ಮಧ್ಯೆ, ಬಂದ್ ಅವಧಿ ಮುಗಿಯುತ್ತಿರುವಂತೆಯೇ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ. ಎಂಜಿ ರಸ್ತೆಯಲ್ಲಿ ಎಂದಿನಂತೆ ಹೋಟಲ್​​ಗಳು ತೆರೆಯಲು ಆರಂಭವಾಗಿದೆ. ಚರ್ಚ್ ಸ್ಟ್ರೀಟ್ ಬಳಿಯ ಮಟಿಓ ಕೆಫೆ ಓಪನ್ ಆಗಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತಲಿನ ಹೋಟೆಲ್ ಗಳಿಂದ ಸ್ವಯಂ ಪ್ರೇರಿತ ಬಂದ್ ಮಾಡಲಾಗಿತ್ತು. ವಾಹನ ಸಂಚಾರ, ಜನರ ಓಡಾಟವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ, ಬಿಎಂಟಿಸಿ ಬಸ್​​ಗಳಲ್ಲಿ ಮಾತ್ರ ಕೆಲವೇ ಕೆಲವು ಮಂದಿ ಪ್ರಯಾಣಿಕರಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ