ಚಿಕ್ಕಬಳ್ಳಾಪುರ: ವಿದ್ಯುತ್​ ತಂತಿ ತಗುಲಿ 12 ವರ್ಷದ ಬಾಲಕ ಸಾವು

ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ವಿದ್ಯುತ್​ ತಂತಿ ತಗುಲಿ 12 ವರ್ಷದ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿಕ್ಕಬಳ್ಳಾಪುರ: ವಿದ್ಯುತ್​ ತಂತಿ ತಗುಲಿ 12 ವರ್ಷದ ಬಾಲಕ ಸಾವು
ಮೃತ ಬಾಲಕಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 17, 2024 | 7:03 PM

ಚಿಕ್ಕಬಳ್ಳಾಪುರ, ಮಾ.17: ವಿದ್ಯುತ್​ ತಂತಿ ತಗುಲಿ 12 ವರ್ಷದ ಬಾಲಕ ಸಾವನ್ನಪ್ಪಿದ ಧಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ನಡೆದಿದೆ. ದಿಬ್ಬೂರುಹಳ್ಳಿ ಮೂಲದ ಬಾಲಕ ದೇವಪ್ಪ(12) ಮೃತ ರ್ದುದೈವಿ. ಮೇಕೆಗಳಿಗಾಗಿ ಮರವೇರಿ ರೆಂಬೆ ಕಡಿಯುವಾಗ ಈ ದುರಂತ ನಡೆದಿದೆ. ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇನ್ನು ಕಳೆದ ಫೆ.17 ರಂದು ಹಾವೇರಿ ನಗರದ ಮಣಿಗಾರ ಓಣಿಯಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸುರೇಶ್ (38) ಎಂಬ  ಯುವಕನೋರ್ವ ಬಲಿಯಾದ ಘಟನೆ ನಡೆದಿತ್ತು. ಮತ್ತೋರ್ವ ಲೈನ್​ಮನ್ ನಿಂಗಪ್ಪನಿಗೆ ಗಂಭಿರ ಗಾಯವಾಗಿದ್ದು, ಹಾವೇರಿ  ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯುತ್ ಖಡಿತಗೊಳಿಸಿ ಇಬ್ಬರು ಯುವಕರು ಹೊಸ ಲೈನ್ ಎಳೆಯುವ ಕಾಮಗಾರಿ ಮಾಡುತ್ತಿದ್ದರು. ಈ ವೇಳೆ ಸಿಬ್ಬಂದಿ ಏಕಾಏಕಿ ವಿದ್ಯುತ್ ಕನೆಕ್ಟ್ ಮಾಡಿದ್ದಾನೆ. ಇನ್ನು ಲೈನ್ ಮನ್ ಶವ ಕಂಬದಲ್ಲಿಯೇ ನೇತಾಡುತ್ತಿದೆ. ಇನ್ನು ಘಟನೆ ಹಿನ್ನಲೆ ಮೃತ ಲೈನ್​ಮೆನ್ ಸುರೇಶ್ ಕುಟುಂಬಕ್ಕೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್  5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಇಷ್ಟೇಲ್ಲ ಘಟನೆಗಳು ಬೆಳಕಿಗೆ ಬಂದರೂ ಇಂತಹ ಅವಘಡಗಳಿಗೆ ಬ್ರೇಕ್​ ಹಾಕಲು ಆಗುತ್ತಿಲ್ಲ.

ಇದನ್ನೂ ಓದಿ:ಮತ್ತೊಂದು ವಿದ್ಯುತ್ ಅವಘಡ.. ವಿಕಲಚೇತನ ಬಾಲಕನಿಗೆ ಹೈ ಕರೆಂಟ್ ಶಾಕ್, ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ, ಹೆತ್ತವರ ಕಣ್ಣೀರು

ಕಾರು ಸರ್ವಿಸ್ ಸರಿಯಾಗಿ ಮಾಡಿಲ್ಲ ಎಂದು ಗಲಾಟೆ

ಬೆಂಗಳೂರು: ಬೆಂಗಳೂರಿನ ಹೆಸರಘಟ್ಟ ರಸ್ತೆಯ ಬಾಗಲಗುಂಟೆಯ ಹುಂಡೈ ಕಾರು ಸರ್ವಿಸ್ ಸೆಂಟರ್​ನಲ್ಲಿ ಕಾರು ಸರ್ವಿಸ್​ ಸರಿಯಾಗಿ ಮಾಡಿಲ್ಲ ಎಂದು ತನ್ನ ಕಾರಿನ ಗ್ಲಾಸ್​ ಒಡೆದು ಮಾಲೀಕ ವೀರೇಶ್ ಎಂಬಾತ ರಂಪಾಟ ಮಾಡಿ, ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ. ಬಳಿಕ ಸುರಕ್ಷತೆ ಇಲ್ಲದ ಸರ್ವಿಸ್ ಸೆಂಟರ್​ನ್ನು ಬಂದ್​ ಮಾಡಲೇಬೇಕೆಂದು ಬಿಗಿಪಟ್ಟು ಹಿಡಿದಿದ್ದಾನೆ. ಮ್ಯಾನೇಜರ್ ಗಣೇಶ್ ಸೇರಿದಂತೆ ಸಿಬ್ಬಂದಿಗಳು ಎಷ್ಟೇ ಮನವಿ ಮಾಡಿದರೂ ಕಾರ್ ಮಾಲೀಕ ಒಪ್ಪದೇ ಪಟ್ಟು ಹಿಡಿದಿದ್ದ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ