ಬೆಂಗಳೂರು: ವರ್ತೂರಿನ ಪ್ರೆಸ್ಟೀಜ್ ಹೆಬಿಟೇಡ್ ಅಪಾರ್ಟ್ಮೆಂಟ್ನಲ್ಲಿ ಕರೆಂಟ್ ಶಾಕ್ನಿಂದ ಬಾಲಕಿ ಸಾವು
ಗುರುವಾರ (ಡಿ.28)ರ ಸಂಜೆ 7.30 ರ ಸುಮಾರಿಗೆ ಬೆಂಗಳೂರಿನ ವರ್ತೂರಿನ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿರುವ ಬಾಲಕಿ ಮಾನ್ಯ ಸ್ವಿಮಿಂಗ್ ಫೂಲ್ ಬಳಿ ಆಟವಾಡುತಿದ್ದಳು. ಈ ವೇಳೆ ಮಾನ್ಯ ಸ್ವಿಮಿಂಗ್ ಫೂಲ್ ಪಕ್ಕದ ವಿದ್ಯುತ್ ದೀಪದ ತಂತಿ ತುಳಿದ ಪರಿಣಾಮ ಶಾಕ್ ಹೊಡೆದಿದೆ. ಇದರಿಂದ ಪ್ರಜ್ಞೆ ತಪ್ಪಿ ಮಾನ್ಯ ಸ್ವಿಮಿಂಗ್ ಫೂಲ್ ಒಳಗೆ ಬಿದ್ದಿದ್ದಾಳೆ. ಮುಂದೇನಾಯ್ತು ಈ ಸ್ಟೋರಿ ಓದಿ...
ಬೆಂಗಳೂರು, ಡಿಸೆಂಬರ್ 29: ಕಾಡುಗೋಡಿಯಲ್ಲಿ ವಿದ್ಯುತ್ ತಂತಿ (Electric wire) ತಗುಲಿ ತಾಯಿ-ಮಗು ಸಾವಿಗೀಡಾಗಿದ್ದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ವಿದ್ಯುತ್ ಸ್ಪರ್ಶದಿಂದ (Electrical Shock) ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ವರ್ತೂರಿನ (Varthur) ಪ್ರೆಸ್ಟೀಜ್ ಹೆಬಿಟೇಡ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ 10 ವರ್ಷದ ಮಾನ್ಯ ವಿದ್ಯುತ್ ಸ್ಪರ್ಶದಿಂದ ಸಾವೀಗಿಡಾಗಿದ್ದಾಳೆ.
ಗುರುವಾರ (ಡಿ.28)ರ ಸಂಜೆ 7.30 ರ ಸುಮಾರಿಗೆ ಬಾಲಕಿ ಮಾನ್ಯ ಅಪಾರ್ಟ್ಮೆಂಟ್ನ ಸ್ವಿಮಿಂಗ್ ಫೂಲ್ ಬಳಿ ಆಟವಾಡುತಿದ್ದಳು. ಈ ವೇಳೆ ಮಾನ್ಯ ಸ್ವಿಮಿಂಗ್ ಫೂಲ್ ಪಕ್ಕದ ವಿದ್ಯುತ್ ದೀಪದ ತಂತಿ ತುಳಿದ ಪರಿಣಾಮ ಶಾಕ್ ಹೊಡೆದಿದೆ. ಇದರಿಂದ ಪ್ರಜ್ಞೆ ತಪ್ಪಿ ಮಾನ್ಯ ಸ್ವಿಮಿಂಗ್ ಫೂಲ್ ಒಳಗೆ ಬಿದ್ದಿದ್ದಾಳೆ. ಇದನ್ನು ಕಂಡ ಅಪಾರ್ಟ್ಮೆಂಟ್ ನಿವಾಸಿಗಳು ಮಾನ್ಯಳನ್ನು ಕೂಡಲೇ ಸಹಸ್ತ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಾನ್ಯ ಮೃತಪಟ್ಟಿದ್ದಾಳೆ. ಪ್ರಕರಣ ಸಂಬಂಧ ಮೃತ ಮಾನ್ಯ ತಂದೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ತಾಯಿ, ಮಗು ಸಾವು; ಸುಮೋಟೋ ಕೇಸ್ ದಾಖಲಿಸಿಕೊಂಡ ಲೋಕಾಯುಕ್ತ
ಇನ್ನು ಬಾಲಕಿ ಮಾನ್ಯ ಸಾವಿಗೆ ಅಪಾರ್ಟ್ಮೆಂಟ್ನ ನಿರ್ವಹಣಾ ಸಿಬ್ಬಂದಿಗಳ ಬೇಜವಾಬ್ದಾರಿ ಕಾರಣವೆಂದು ನಿವಾಸಗಳು ಆರೋಪ ಮಾಡಿದ್ದಾರೆ. ನಿರ್ವಹಣಾ ಸಿಬ್ಬಂದಿಗಳ ವಿರುದ್ಧ ರಾತ್ರಿಯಿಡೀ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಹಿಂದೆ ಸಹ ನಮಗೆ ವಿದ್ಯುತ್ ಶಾಕ್ ಅನುಭವವಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರು ನಿರ್ವಹಣಾ ಸಿಬ್ಬಂದಿಗಳು ಕ್ರಮಕೈಗೊಂಡಿಲ್ಲ. ನಿರ್ವಹಣಾ ಸಿಬ್ಬಂದಿಗಳು ಸರಿಯಾದ ರೀತಿ ಕೆಲಸ ಮಾಡುತ್ತಿಲ್ಲ. ಆದರಿಂದಲೇ ಈ ಘಟನೆ ಸಂಭವಿಸಿದೆ” ಎಂದು ಆರೋಪಿಸಿದರು.
ಮಗು ಸ್ವಿಮಿಂಗ್ ಫೂಲ್ನಲ್ಲಿ ಮೃತಪಟ್ಟಿದೆ ಅಂತ ವಿಚಾರ ತಿಳಿದಿದೆ. ಮಗುವಿನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತಿದ್ದಾರೆ. ತನಿಖೆ ಬಳಿಕ ಉತ್ತರ ತಿಳಿದು ಬರಲಿದೆ. ತನಿಖೆ ನಡೆಯುತ್ತಿರುವಾಗ ನಾವು ಏನು ಹೇಳಲು ಆಗುವುದಿಲ್ಲ. ಅವರು ಆರೋಪ ಮಾಡುತಿದ್ದಾರೆ ಸತ್ಯ ಏನು ಎಂಬುವುದು ತನಿಖೆ ನಂತರ ತಿಳಿಯುತ್ತೆ. ಮಗುವಿನ ಸಾವಿನ ಬಗ್ಗೆ ನಮಗೂ ಬೇಸರವಿದೆ ಎಂದು ಸೆಕ್ಯೂರಿಟಿ ಮ್ಯಾನೇಜರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 am, Fri, 29 December 23