ಕಣಜೇನಹಳ್ಳಿಯಲ್ಲಿ ಅಮಾವ್ಯಾಸೆಯ ದಿನ ಕಾಳಿಕಾಂಭದೇವಿ ಗುಡಿಯಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಎನಾಗುತ್ತೆ ಗೊತ್ತಾ?
ಕಣಜೇನಹಳ್ಳಿಯ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿ ಮರಳೋ, ಜನ ಮರಳೋ ಗೊತ್ತಿಲ್ಲ, ದೇವಸ್ಥಾನಕ್ಕೆ ಬಂದು ಇಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಮನಃಶಾಂತಿಯಾಗುತ್ತದೆನ್ನುವ ನಂಬಿಕೆ ಇದೆ. ಇದರಿಂದ ಅಮಾವ್ಯಾಸೆ ಬಂದರೆ ಸಾಕು ಸಾವಿರಾರು ಜನ ಭಕ್ತರು ಇಲ್ಲಿರುವ ದೇವಿಯ ಮೊರೆ ಹೋಗುತ್ತಾರೆ.
ಅದೊಂದು ಪವರ್ಫುಲ್ ದೇವಿಯ ಮುಂದೆ ಕಹಿಬೇವಿನ ಸೊಪ್ಪನ್ನು ಸಕ್ಕರೆಯಂತೆ ಸವಿಯುತ್ತಿದ್ದರೆ, ಮಾನಸಿಕ ಕಾಯಿಲೆಗಳು, ಮಾಟ-ಮಂತ್ರ-ದುಷ್ಟಶಕ್ತಿ ಕಾಟಗಳು ವಾಸಿಯಾಗುತ್ತವಂತೆ. ಇದರಿಂದ ಮಾಟ, ಮಂತ್ರ, ದುಷ್ಟರ ಕಾಟ ದೃಷ್ಟಿ ತೆಗೆಸಿಕೊಳ್ಳಲು ಜನ ಅದೊಂದು ದೇವಿಯ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಅದು ಎಲ್ಲಿ ಅಂತೀರಾ ಈ ವರದಿ ನೋಡಿ.. ಕಹಿಬೇವಿನ ಸೊಪ್ಪನ್ನು (health) ಸಕ್ಕರೆಯಂತೆ ರೋಷ-ಆಕ್ರೋಶ, ದುಃಖ ದುಮ್ಮಾನದಿಂದ ಸವಿಯುತ್ತಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಕಣಜೇನಹಳ್ಳಿ ( Kanajenahalli ) ಗ್ರಾಮದ ಬಳಿ ಇರುವ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ (Kalikambhadevi temple).
ಕೆಲವು ಮಾನಸಿಕ ಕಾಯಿಲೆಗಳು ಆಸ್ಪತ್ರೆ ಹಾಗೂ ವೈದ್ಯರ ಬಳಿ ತೋರಿಸಿದ್ದರೂ ವಾಸಿಯಾಗುತ್ತಿಲ್ಲವೆಂದು ಕೆಲವರು ಇಲ್ಲಿಗೆ ಆಗಮಿಸಿ ಇಲ್ಲಿರುವ ದೇವಿಯ ಮುಂದೆ ತನಗೆ ಅಂಟಿರುವ ಪಿಡುಗನ್ನು ತೊಲಗಿಸುವಂತೆ ಬೇಡಿಕೊಳ್ಳುತ್ತಾರೆ. ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯಸ್ವಾಮಿ ಎನ್ನುವವರು ನಿಂಬೆಹಣ್ಣುಗಳಿಂದ ಮಂತ್ರಿಸಿ ಕಹಿಬೇವಿನ ಸೊಪ್ಪನ್ನು ತಿನ್ನಲು ಹೇಳುತ್ತಾರೆ.
ಬೇವಿನ ಸೊಪ್ಪಿನ ಎಫೆಕ್ಟ್, ಸ್ವಾಮಿಯ ಮಂತ್ರದ ಎಫೆಕ್ಟೋ ಕೆಲವೇ ಕ್ಷಣಗಳಲ್ಲಿ ಪೀಡೆ ಮಾಯವಾಗುತ್ತಂತೆ. ಇನ್ನು ಕಣಜೇನಹಳ್ಳಿಯ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿ ಅಮಾವ್ಯಾಸೆ ದಿನ ಮಾತ್ರ ಸಂಜೆಯಿಂದ ಮಧ್ಯರಾತ್ರಿವರೆಗೂ ದೃಷ್ಟಿದೋಷ, ಮಾಟ-ಮಂತ್ರ, ಮಾನಸಿಕ ಕಾಯಿಲೆಗಳಿಗೆ ಪರಿಹಾರ ಸೂಚಿಸುತ್ತಾರೆ.
ದೇವಸ್ಥಾನಕ್ಕೆ ಬರುವವರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಇದರಿಂದ ದಿನದಿಂದ ದಿನಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯಸ್ವಾಮಿ.
ಇದನ್ನೂ ಓದಿ: ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಏನಾಗುತ್ತೆ ಗೊತ್ತಾ? ಮೊದಲು ತಿಳಿದುಕೊಳ್ಳಿ
ಕಣಜೇನಹಳ್ಳಿಯ ಆದಿಶಕ್ತಿ ಶ್ರೀ ಕಾಳಿಕಾಂಭದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿ ಮರಳೋ, ಜನ ಮರಳೋ ಗೊತ್ತಿಲ್ಲ, ದೇವಸ್ಥಾನಕ್ಕೆ ಬಂದು ಇಲ್ಲಿ ದೃಷ್ಟಿದೋಷ ತೆಗೆಸಿಕೊಂಡರೆ ಮನಃಶಾಂತಿಯಾಗುತ್ತದೆನ್ನುವ ನಂಬಿಕೆ ಇದೆ. ಇದರಿಂದ ಅಮಾವ್ಯಾಸೆ ಬಂದರೆ ಸಾಕು ಸಾವಿರಾರು ಜನ ಭಕ್ತರು ಇಲ್ಲಿರುವ ದೇವಿಯ ಮೊರೆ ಹೋಗುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾ