Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದದ ಗೂಡಾದ ಐತಿಹಾಸಿಕ ಪ್ರಸಿದ್ಧ ಪಾಪಾಘ್ನಿ ಮಠ: ಒಂದೇ ಸಮುದಾಯದ 2 ಬಣಗಳ ಮಧ್ಯೆ ಪೈಟ್

Chikkaballapur News: ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಬಳಿಯಿದೆ. ಪ್ರಸಿದ್ದ ಅರಣ್ಯದಾಮ, ಚಾರಣಿಗರ ಅಚ್ಚುಮೆಚ್ಚಿನ ತಾಣ ಸ್ಕಂದಗಿರಿ ಬೆಟ್ಟದ ತಪ್ಪಲಿನಲ್ಲಿದೆ. ಪಾಪಾಘ್ನಿ ಮಠದಲ್ಲಿ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಾಶಿವಿಶ್ವನಾಥ ದೇವಾಲಯವಿದ್ದು, ಈ ಕ್ಷೇತ್ರ ಈಗ ವಿವಾದದ ಗೂಡಾಗಿದೆ.

ವಿವಾದದ ಗೂಡಾದ ಐತಿಹಾಸಿಕ ಪ್ರಸಿದ್ಧ ಪಾಪಾಘ್ನಿ ಮಠ: ಒಂದೇ ಸಮುದಾಯದ 2 ಬಣಗಳ ಮಧ್ಯೆ ಪೈಟ್
ಪಾಪಾಘ್ನಿ ಮಠ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 04, 2023 | 4:16 PM

ಚಿಕ್ಕಬಳ್ಳಾಪುರ, ಅಕ್ಟೋಬರ್​ 04: ಅದು ಪುಣ್ಯಪ್ರಸಿದ್ದ, ಐತಿಹಾಸಿಕ ಪ್ರಸಿದ್ಧ, ಧಾರ್ಮಿಕ ಪ್ರಸಿದ್ಧ ಕ್ಷೇತ್ರ. ಆ ಕ್ಷೇತ್ರದ ಹಿಡಿತಕ್ಕಾಗಿ ಒಂದೇ ಸಮುದಾಯದ 2 ಬಣಗಳು ಮೇಲಾಟ ನಡೆಸಿದ್ದು, ಆರೋಪ-ಪ್ರತ್ಯಾರೋಪ ಮಾಡಿ ಪರಸ್ಪರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ಬಳಿಯಿದೆ. ಪ್ರಸಿದ್ದ ಅರಣ್ಯದಾಮ, ಚಾರಣಿಗರ ಅಚ್ಚುಮೆಚ್ಚಿನ ತಾಣ ಸ್ಕಂದಗಿರಿ ಬೆಟ್ಟದ ತಪ್ಪಲಿನಲ್ಲಿದೆ. ಪಾಪಾಘ್ನಿ ಮಠ (Papagni Math) ದಲ್ಲಿ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಾಶಿವಿಶ್ವನಾಥ ದೇವಾಲಯವಿದ್ದು, ಈ ಕ್ಷೇತ್ರ ಈಗ ವಿವಾದದ ಗೂಡಾಗಿದೆ.

ಪಾಪಾಗ್ನಿ ಮಠದಲ್ಲಿ ಕಾಲಜ್ಞಾನಿ ಶ್ರೀ ವೀರಬ್ರಹ್ಮೇಂದ್ರಸ್ವಾಮಿಗಳ ಸಾಕು ತಂದೆ-ತಾಯಿಯ ಜೀವಂತ ಸಮಾಧಿಗಳಿವೆ. ಕಳವಾರದ ಪಾಪಾಘ್ನಿ ಮಠದಲ್ಲಿ ಮಹಾನ್ ಕಾಲಜ್ಞಾನಿ ಪೋತಲೂರು ಶ್ರೀ ವೀರಬ್ರಹ್ಮೇಂದ್ರಸ್ವಾಮಿಗಳ ಸಾಕು ತಂದೆ-ತಾಯಿಯ ಜೀವಂತ ಸಮಾಧಿಗಳಿವೆ. ಪಂಚನಂದಿ, ಪಂಚಗಿರಿ, ಪಂಚನದಿ ಎಂದೇ ಖ್ಯಾತಿಯಾಗಿದೆ.

ಪಾಪಾಘ್ನಿ ಮಠವನ್ನು ವಿಶ್ವಕರ್ಮ ಸಮುದಾ ನಿರ್ವಹವಣೆ

ಪಾಪಾಘ್ನಿ ಮಠವನ್ನು ಚಿಕ್ಕಬಳ್ಳಾಪುರದ ವಿಶ್ವಕರ್ಮ ಸಮುದಾಯದವರು ನಿರ್ವಹಿಸಿಕೊಂಡು ಬಂದಿದ್ದಾರೆ. ಆದರೆ ಈಗ ಮಠ, ದೇವಸ್ಥಾನ ಹಾಗೂ ಪಾರ್ಕಿಂಗ್ ಶುಲ್ಕ ನಿರ್ವಹಣೆಯ ವಿಚಾರದಲ್ಲಿ 2 ಗುಂಪುಗಳಾಗಿದ್ದು, ಮಠದ ಜಗಳ ಬೀದಿಗೆ ಬಂದಿದೆ. ಸ್ವತಃ ಮಠದ ಟ್ರಸ್ಟ್​​ನ ಅಧ್ಯಕ್ಷರು ಎಂದು ಹೇಳಿಕೊಳ್ಳುತ್ತಿರುವ ಸಿದ್ದಲಿಂಗಚಾರಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಸಿದ್ದಲಿಂಗಚಾರಿ ವಿರುದ್ದ ಆರೋಪ

ಅಸಲಿಗೆ ಸಿ.ಟಿ.ಸಿದ್ದಲಿಂಗಚಾರಿ ಕಳೆದ ಕೆಲವು ವರ್ಷಗಳಿಂದ ಪಾಪಾಘ್ನಿ ಮಠದ ನಿರ್ವಹಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ದಕ್ಷಿಣ ಕಾಶಿ, ಪಂಚನಂದಿ, ಮಹಾಪುಣ್ಯ ಕ್ಷೇತ್ರ ಪಾಪಾಗ್ನಿ ಮಠ ಚಾರಿಟಬಲ್ ಟ್ರಸ್ಟ್ ಎಂದು ನೋಂದಣಿ ಮಾಡಿಕೊಂಡಿದ್ದು, ಅದರ ಅಧ್ಯಕ್ಷ ನಾನೇ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಮಠ ಹಾಗೂ ದೇವಸ್ಥಾನದ ಅಭಿವೃದ್ಧಿ ನನ್ನಿಂದಲೇ ಆಗಿದೆಯೆಂದು ತಿರುಗಾಡುತ್ತಿದ್ದಾರೆ. ಆದರೆ ಸಿದ್ದಲಿಂಗಚಾರಿ ಅಧ್ಯಕ್ಷರಾಗಿರುವ ಟ್ರಸ್ಟ್ ನಲ್ಲಿ ಇದ್ದ ಬಹುತೇಕ ಟ್ರಸ್ಟಿಗಳು ರಾಜೀನಾಮೆ ಕೊಟ್ಟಿದ್ದು, ಟ್ರಸ್ಟ್ ಅದರ ಅಸ್ತಿತ್ವ ಕಳೆದುಕೊಂಡಿದೆಯಂತೆ.

ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡದಿದ್ದರೆ ರಾಜ್ಯ ಸರ್ಕಾರವನ್ನೇ ವಜಾ ಮಾಡ್ತಾರೆ: ವೀರಪ್ಪ ಮೊಯ್ಲಿ

ಸಿದ್ದಲಿಂಗಚಾರಿ ಮಠ, ದೇವಸ್ಥಾನ, ಪಾರ್ಕಿಂಗ್ ಶುಲ್ಕದ ಆದಾಯವನ್ನು ತೋರಿಸಿಲ್ಲ. ಇದರಿಂದ ಅನುಮಾನಗೊಂಡಿರುವ ಅವರ ಜೊತೆಗಾರರೇ ಪ್ರತ್ಯೇಕ ಸಮಿತಿಯೊಂದನ್ನು ಮಾಡಿಕೊಂಡಿದ್ದು, ಸಿದ್ದಲಿಂಗಚಾರಿ ವಿರುದ್ದ ಸೆಡ್ಡು ಹೊಡೆದು, ಮಠ, ದೇವಸ್ಥಾನ ನಿರ್ವಹಣೆಗೆ ಮುಂದಾಗಿದ್ದಾರೆ. ಸಿದ್ದಲಿಂಗಚಾರಿ ವಿರುದ್ದ ಎ.ಬಿ.ಮಂಜುನಾಥಚಾರಿ ಬಣ ದೂರು ನೀಡಿ ಆರೋಪಗಳನ್ನು ಮಾಡಿದ್ದಾರೆ.

ಬಣಗಳ ಪ್ರತಿಷ್ಠೆಯಿಂದ ಮಠಕ್ಕೆ ಕೆಟ್ಟ ಹೆಸರು

ಅಸಲಿಗೆ ಪಾಪಾಘ್ನಿ ಮಠಕ್ಕೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಗಳಿವೆ. ಪ್ರತಿದಿನ ಸ್ಕಂದಗಿರಿಗೆ ಬರುವವರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ದೇವಸ್ಥಾನ ಹಾಗೂ ಮಠದ ಆದಾಯ ಹೆಚ್ಚಳವಾಗುತ್ತಿದೆ. ಇದರಿಂದ ವಿಶ್ವಕರ್ಮ ಸಮುದಾಯದ 2 ಬಣಗಳ ಮದ್ಯೆ ಮನಸ್ತಾಪ ಉಂಟಾಗಿದ್ದು, ಈಗ ಬೀದಿ ಜಗಳವಾಗುತ್ತಿದೆ. ಇವರ ಮೇಲೆ ಅವರು, ಅವರ ಮೇಲೆ ಇವರು ಆರೋಪ-ಪ್ರತ್ಯಾರೋಪ ಮಾಡಿರುವ ದೂರುಗಳು ಬಂದಿವೆ.

ರಾಜ್ಯದ ಮತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ