ಚಿಕ್ಕಬಳ್ಳಾಪುರ: ಕಿಡ್ಯ್ನಾಪ್​​ ಆ್ಯಂಡ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸ್​​​: 6 ವರ್ಷದ ನಂತ್ರ ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಆರು ವರ್ಷಗಳ ಹಿಂದೆ ನಡೆದ ಓರ್ವ ಯುವಕನ ಅಪಹರಣ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಹಳೆಯ ದ್ವೇಷ ಹಿನ್ನಲೆ ಆರೋಪಿಗಳು ಯುವಕನನ್ನು ಅಪಹರಣ ಮಾಡಿ ಕೊಲೆ ಮಾಡಿ ತಮಿಳುನಾಡಿನಲ್ಲಿ ಶವವನ್ನು ಎಸೆದಿದ್ದರು. ಸದ್ಯ ಐವರನ್ನು ಬಂಧಿಸಲಾಗಿದೆ.

ಚಿಕ್ಕಬಳ್ಳಾಪುರ: ಕಿಡ್ಯ್ನಾಪ್​​ ಆ್ಯಂಡ್​ ಮರ್ಡರ್​ ಕೇಸ್​ ಭೇದಿಸಿದ ಪೊಲೀಸ್​​​: 6 ವರ್ಷದ ನಂತ್ರ ಆರೋಪಿಗಳ ಬಂಧನ
ಆರೋಪಿಗಳನ್ನು ಬಂಧಿಸಿದ ಪೊಲೀಸರು
Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2025 | 11:03 AM

ಚಿಕ್ಕಬಳ್ಳಾಪುರ, ಆಗಸ್ಟ್​ 21: ಹಳೆ ದ್ವೇಷ ಹಿನ್ನಲೆ 27 ವರ್ಷದ ಯುವಕನನ್ನು ಕೊಲೆ (kill) ಮಾಡಿ ಆರಾಮವಾಗಿದ್ದ ಆರೋಪಿಗಳು ಇದೀಗ ಕಂಬಿ ಎಣಿಸುವಂತಾಗಿದೆ. ಆ ಮೂಲಕ ಬರೋಬ್ಬರಿ ಆರು ವರ್ಷಗಳ ಹಿಂದಿನ ಕಿಡ್ಯ್ನಾಪ್​​ ಆ್ಯಂಡ್​ ಮರ್ಡರ್​ ಕೇಸ್​​ನ್ನು ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು (police) ಭೇದಿಸಿದ್ದಾರೆ. ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಓರ್ವ ನಾಪತ್ತೆ ಆಗಿದ್ದಾನೆ. ದಿವಾಕರ್, ಹರೀಶ್​, ಮಾರ್ತಾಂಡ ಅಲಿಯಾಸ್​ ಆಟೋ ಚಂದ್ರ, ರಂಜೀತ್​ ಕುಮಾರ್, ಮಂಜುನಾ ಅಲಿಯಾಸ್​ ಕಬಾಬ್ ಮಂಜು ಬಂಧಿತರು.

ಸದ್ಯ ಆರೋಪಿಗಳನ್ನು ಬಂಧಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಗಿರೀಶ್ (27) ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಮೃತ ಗಿರೀಶ್​ ಶಿಡ್ಲಘಟ್ಟ ನಗರದ ನಿವಾಸಿ. ಆಟೊ ಚಾಲಕನಾಗಿದ್ದ. ಹಳೆ ದ್ವೇಷ ಹಿನ್ನಲೆ 2019 ಮೇ 12 ರಂದು ಗಿರೀಶ್​ ನನ್ನು ಕೊಲೆ ಮಾಡಲಾಗಿತ್ತು. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಚಿತ್ರದುರ್ಗ: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊಲೆ

ಇದನ್ನೂ ಓದಿ
ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಯುವಕನಿಂದಲೇ ವಿದ್ಯಾರ್ಥಿನಿಯ ಕೊಲೆ
ವರ್ಷಿತಾ ಅನುಭವಿಸಿದ ಯಾತನೆ ಯಾರಿಗೂ ಬೇಡ: ಜ್ಯೋತಿ ತಿಪ್ಪೇಸ್ವಾಮಿ
ಮದ್ವೆ ಆಗ್ತೀನಿ ಎಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ
ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಗೆಳಯನ ಹತ್ಯೆ, ಪೊಲೀಸರೇ ಶಾಕ್!

ಶಿಡ್ಲಘಟ್ಟದಿಂದ ಕಿಡ್ಯ್ನಾಪ್ ಮಾಡಿ ನರಸಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದ ಆರೋಪಿಗಳು ಬಳಿಕ ಶವವನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ತಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿಲಿಪಿಲಿ ಮಂಗಲ ಗ್ರಾಮದ ಬಳಿ ಬಿಸಾಡಿದ್ದರು. ತಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಫಾರ್ವರ್ಡ್ ಮೆಸೇಜ್​​ ತಂದ ಆಪತ್ತು: ಮನೆಗೆ ನುಗ್ಗಿ ಗೆಳಯನ ಹತ್ಯೆ, ಪೊಲೀಸರೇ ಶಾಕ್!

ತನಿಖೆ ನಡೆಸಿದ್ದ ತಳಿ ಠಾಣೆಯ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಆದರೆ ಸರಿಯಾದ ಸಾಕ್ಷ್ಯಾಧಾರ ಕೊರತೆ ಮತ್ತು ಚಾರ್ಜ್​ಶೀಟ್ ಸಲ್ಲಿಸಿರಲಿಲ್ಲ. ಹೀಗಾಗಿ ಕೋರ್ಟ್​​ ಬಂಧಿತ ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡಿತ್ತು. ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಆರೋಪ ಕೇಳಿಬಂದಿತ್ತು. ಕೇಸ್​​ ಹಾಗೇ ಉಳಿದುಕೊಂಡಿತ್ತು. ಬಳಿಕ ಬೇರೆ ಅಧಿಕಾರಿಗಳ ಗಮನಕ್ಕೆ ಬಂದು ಪ್ರಕರಣವನ್ನು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಅದರಂತೆ ಇದೀಗ ಐವರ ಬಂಧನವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:02 am, Thu, 21 August 25