ಒಂದೇ ರಾತ್ರಿ ಎರಡು ಕೊಲೆ, 1 ಅನುಮಾನಸ್ಪದ ಶವ ಪತ್ತೆ: 3 ಮೃತದೇಹ ಕಂಡು ಬೆಚ್ಚಿಬಿದ್ದ ಚಿಂತಾಮಣೆ ಜನ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 14, 2025 | 6:25 PM

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಒಂದೇ ರಾತ್ರಿ ಎರಡು ಕೊಲೆಗಳು ಮತ್ತು ಒಂದು ಅನುಮಾನಾಸ್ಪದ ಸಾವು ಸಂಭವಿಸಿದೆ. ಜೆಸಿಬಿ ಚಾಲಕನು ತನ್ನ ಮಾಲೀಕನನ್ನು ಹತ್ಯೆ ಮಾಡಿದ್ದು, ವೃದ್ಧನ ಶವವನ್ನು ತಲೆ ಕತ್ತರಿಸಿ ಎಸೆಯಲಾಗಿದೆ. ಇನ್ನೊಬ್ಬ ಯುವಕನ ಅನುಮಾನಾಸ್ಪದ ಸಾವಿನ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಘಟನೆಗಳಿಂದಾಗಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಒಂದೇ ರಾತ್ರಿ ಎರಡು ಕೊಲೆ, 1 ಅನುಮಾನಸ್ಪದ ಶವ ಪತ್ತೆ: 3 ಮೃತದೇಹ ಕಂಡು ಬೆಚ್ಚಿಬಿದ್ದ ಚಿಂತಾಮಣೆ ಜನ
ಒಂದೇ ರಾತ್ರಿ ಎರಡು ಕೊಲೆ, 1 ಅನುಮಾನಸ್ಪದ ಶವ ಪತ್ತೆ: 3 ಮೃತದೇಹ ಕಂಡು ಬೆಚ್ಚಿಬಿದ್ದ ಚಿಂತಾಮಣೆ ಜನ
Follow us on

ಚಿಕ್ಕಬಳ್ಳಾಪುರ, ಫೆಬ್ರವರಿ 14: ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ (kill) ಮಾಡಿದ್ದಾರೆ. ಮತ್ತೊಂದಡೆ ವೃದ್ದನ ರುಂಡ-ಮುಂಡ ಬೇರ್ಪಡಿಸಿ ರಕ್ತದೋಕುಳಿ ನಡೆಸಿ ವಿಕೃತಿ ಮೆರೆಯಲಾಗಿದೆ. ಇನ್ನೊಂದೆಡೆ ಅನುಮಾನಸ್ಪದವಾಗಿ ಯುವಕನೋರ್ವ ಶವವಾಗಿ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಚ್ಚಿನಿಂದ ಕೊಚ್ಚಿ ಕೊಲೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯ ನಿವಾಸಿಯಾಗಿರುವ ರಾಮಸ್ವಾಮಿ ಯನ್ನು ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದಾಗ ಜನನಿಬಿಡ ಪ್ರದೇಶದಲ್ಲಿ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರಾಮಸ್ವಾಮಿ ಬಳಿ ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಎಂಬಾತನ ಮೇಲೆ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ವಿಷ ಆರ್ಡರ್: ಅತುಲ್ ನಂತೆ ಹೆಂಡ್ತಿ ಕಾಟದಿಂದ ರ‍್ಯಾಪರ್ ಅಭಿನವ್ ಸುಸೈಡ್?

ನಾಗೇಶ್ ಹಾಗೂ ರಾಮಸ್ವಾಮಿ ನಡುವೆ ಹಣಕಾಸಿನ ವಿಚಾರದಲ್ಲಿ ವಿವಾದ ಇದ್ದು, ಇದೇ ವಿಚಾರಕ್ಕೆ ನಿನ್ನೆ ಮಧ್ಯಾಹ್ನ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ. ಆದರೆ ರಾತ್ರಿ ಹೊಂಚು ಹಾಕಿ ಕೊಲೆ ಮಾಡಲಾಗಿದ್ದು, ಚಾಲಕ ನಾಗೇಶನ ಮೇಲೆ ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿ, ಚಿಂತಾಮಣಿ ನಗರ ಠಾಣೆಗೆ ದೂರು ನೀಡಿದ್ದಾರೆ.

ರುಂಡ-ಮುಂಡ ಬೇರ್ಪಡಿಸಿ ಕೊಲೆ

ಇತ್ತ ಚಿಂತಾಮಣಿ ನಗರದ ಯಜ್ಞವಲ್ಲೆ ದೇವಸ್ಥಾನದ ಬಳಿ, ತ್ಯಾಜ್ಯದಲ್ಲಿ ವೃದ್ದನ ಶವ ಪತ್ತೆಯಾಗಿದ್ದು, ರುಂಡ-ಮುಂಡ ಬೇರ್ಪಡಿಸಿ ಕೊಲೆ ಮಾಡಿದಂತೆ ಕಂಡು ಬಂದಿದೆ. ಮೃತ ವ್ಯಕ್ತಿಯನ್ನು ಕೋಲಾರ ತಾಲ್ಲೂಕಿನ ಗೌಡತಾತಗಡ್ಡ ನಿವಾಸಿ ಮುನೆಪ್ಪ ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹ ಹಿನ್ನಲ್ಲೆ ಸಂಬಂಧಿಕರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಗಾಳಹಾಕಿ ವಂಚನೆ: ಕರ್ನಾಟಕದ ಅನೇಕ ಯುವತಿಯರ ವಂಚಿಸಿದ ಕಿಲಾಡಿ ಕೊನೆಗೂ ಅಂದರ್

ಸದ್ಯ ಎರಡು ಕೊಲೆ ಪ್ರಕರಣಗಳು ಚಿಂತಾಮಣಿ ನಗರದ ಜನ ಭಯ ಭೀತರಾಗಿದ್ದರೆ, ಇತ್ತ ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಮತ್ತೊಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.