ಮೋಸ್ಟ್ ವಾಟೆಂಡ್ ಕಿಡ್ನ್ಯಾಪರ್ ಬಾಂಬೆ ಸಲೀಂ ಬಂಧನ: ಈತನ ಕ್ರೈಂ ಹಿಸ್ಟರಿಯೇ ಭಯಾನಕ
ಬಾಗೇಪಲ್ಲಿ ಪೊಲೀಸರು ದಕ್ಷಿಣ ಭಾರತದ ಪ್ರಸಿದ್ಧ ಕಿಡ್ಯ್ನಾಪರ್ ಬಾಂಬೆ ಸಲೀಂ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. 40ಕ್ಕೂ ಹೆಚ್ಚು ಮನೆಗಳ್ಳತನ, 20ಕ್ಕೂ ಹೆಚ್ಚು ಕಿಡ್ನಾಪ್ ಮತ್ತು 5 ಕೊಲೆ ಪ್ರಕರಣಗಳಲ್ಲಿ ಸಲೀಂ ಭಾಗಿಯಾಗಿದ್ದಾನೆ. ಸಲೀಂ 12ನೇ ವಯಸ್ಸಿನಿಂದಲೇ ಅಪರಾಧ ಜಗತ್ತಿಗೆ ಎಂಟ್ರಿಯಾಗಿದ್ದ.

ಚಿಕ್ಕಬಳ್ಳಾಪುರ, ಫೆಬ್ರವರಿ 15: ಆತ ಸೌತ್ ಇಂಡಿಯಾದಲ್ಲೇ ದಿ ಮೋಸ್ಟ್ ವಾಟೆಂಡ್ ಕ್ರಿಮಿನಲ್, ಆತನ ಮೇಲೆ ಒಂದಲ್ಲ ಎರಡಲ್ಲ 40 ಕ್ಕೂ ಹೆಚ್ಚು ಮನೆಗಳ್ಳತನ, 20ಕ್ಕೂ ಹೆಚ್ಚು ಕಿಡ್ಯ್ನಾಪ್, 5 ಕೊಲೆ ಕೇಸ್ ಸೇರಿದಂತೆ ಹಲವು ಪ್ರಕರಣಗಳಿವೆ. ಆ ಮೋಸ್ಟ್ ವಾಟೆಂಡ್ ಕಿಡ್ನ್ಯಾಪರ್ ಆಗಿರುವ ಬಾಂಬೆ ಸಲೀಂ ಸೇರಿದಂತೆ 7 ಆರೋಪಿಗಳನ್ನು ಬಂಧಿಸುವಲ್ಲಿ (Arrest) ರಾಜ್ಯದ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಿಡ್ಯ್ನಾಪ್ ಪ್ರಕರಣ ಸಂಬಂಧ, ಸದ್ಯ ಬಾಂಬೆ ಸಲೀಂ ಜೊತೆ ಆಂಧ್ರಪ್ರದೇಶದ ಚಿಲಮತ್ತೂರಿನ ಅನಿಲ್, ರಾಜಾನುಕುಂಟೆಯ ಚೇತನ್, ರಾಜಾನುಕುಂಟೆಯ ರೌಡಿಶೀಟರ್ ನಾಗೇಶ್, ಬಾಗೇಪಲ್ಲಿಯ ರೌಡಿಶೀಟರ್ ಚೇತನ್, ಗುಡಿಬಂಡೆಯ ರೌಡಿಶೀಟರ್ ಬಾಬುರೆಡ್ಡಿ, ಬೆಂಗಳೂರಿನ ರೌಡಿಶೀಟರ್ ವಾಸಿಮ್ ಹಾಗೂ ಅಸ್ಲಾಂ ಎಂಬುವವರನ್ನ ಕೇರಳ ರಾಜ್ಯದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ ಬಂಧಿತರ ಬಳಿ ಕೃತ್ಯಕ್ಕೆ ಬಳಿಸಿದ ಹೊಸ ಇನ್ನೋವಾ ಹೈಕ್ರಾಸ್ ಕಾರು, ಸೇರಿದಂತೆ ಮೂರು ಬೈಕ್ ಹಾಗೂ ಐದು ಲಕ್ಷ 30 ಸಾವಿರ ರೂ ನಗದು ವಶಪಡಿಸಿಕೊಂಡಿದ್ದಾರೆ.
12ನೇ ವರ್ಷಕ್ಕೆ ಪಾತಕ ಲೋಕ ಎಂಟ್ರಿ
ಸಲೀಂ ಅಲಿಯಾಸ್ ಬಾಂಬೆ ಸಲೀಂ 12 ವರ್ಷಕ್ಕೆ ಪಾತಕ ಲೋಕ ಕ್ರೈ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದ. ಬಾಲಕನಿದ್ದಾಗಲೇ ಅಂಗಡಿ ಮಾಲಿಕರನ್ನು ಕೊಂದು ಪರಾರಿಯಾಗಿದ್ದ. ನಂತರ ಬಾಲಕರ ಮಂದಿರದಲ್ಲಿ ಬಾಲ ಕೈದಿಯಾಗಿದ್ದಾಗಲೇ ಪರಾರಿಯಾಗಿದ್ದರು. ಬಾಲಕನಿದ್ದಾಗನಿಂದಲೇ ಅಪರಾಧಗಳಲ್ಲಿ ಸಲೀಂ ಭಾಗಿಯಾಗಿದ್ದ. ಹಲವು ಬಾರಿ ಹಲವು ಜೈಗಳಿಗೆ ಹೋಗಿ ಬಂದಿರುವ ಸಲೀಂ, ಜೈಲಿಗೆ ಹೋಗುವುದು ಬರುವುದು ಮತ್ತೆ ಅಪರಾಧ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ.
ಈತ ಇದುವರೆಗೂ 40ಕ್ಕೂ ಹೆಚ್ಚು ಮನೆಗಳ್ಳತನ, 20ಕ್ಕೂ ಹೆಚ್ಚು ಕಿಡ್ಯ್ನಾಪ್ ಸೇರಿದಂತೆ 5 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನಂತೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕುಖ್ಯಾತಿ ಪಡೆದಿರುವ ಇಂತಹ ನಟೋರಿಯಸ್ ಕಿಡ್ಯ್ನಾಪರ್ನನ್ನ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಉದ್ಯಮಿಗೆ 25.5 ಕೋಟಿ ರೂ ವಂಚನೆ: ರಾಹುಲ್ ತೋನ್ಸೆ ವಿರುದ್ಧ ಲುಕೌಟ್ ನೋಟಿಸ್
2024ರ ಡಿಸೆಂಬರ್ 20 ರಂದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ಎಂಬಾತನನ್ನ, ಬಾಂಬೆ ಸಲೀಂ ತಂಡ ಕಿಡ್ಯ್ನಾಪ್ ಮಾಡಿದ್ದರು. ಬೆಂಗಳೂರು ಹೈದರಾಬಾದ್ ಹೆದ್ದಾರಿಯ ಆದಿಗಾನಹಳ್ಳಿ ಕ್ರಾಸ್ ಬಳಿ ಅಶ್ವತ್ಥನಾರಾಯಣಸ್ವಾಮಿಯ ಸ್ವಿಫ್ಟ್ ಕಾರಿಗೆ ಇನೋವಾ ಹೈಕ್ರಾಸ್ ಕಾರಿನಿಂದ ಅಡ್ಡಗಟ್ಟಿ ಆತನ ಮೇಲೆ ಹಲ್ಲೆ ಮಾಡಿ ಕಿಡ್ಯ್ನಾಪ್ ಮಾಡಿದ್ದರು. ಆ ವೇಳೆ ಸ್ವಿಫ್ಟ್ ಕಾರಿನಲ್ಲಿದ್ದ 16 ಲಕ್ಷ ರೂ. ಹಣ ದೋಚಿದ್ದ ಬಾಂಬೆ ಸಲೀಂ ಆ್ಯಂಡ್ ಗ್ಯಾಂಗ್ ತದನಂತರ ಅಶ್ವತ್ಥನಾರಾಯಣಸ್ವಾಮಿ ಹೆಂಡತಿಗೆ ಕರೆ ಮಾಡಿ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.
ಚಿಕ್ಕಬಳ್ಳಾಪುರ ಜೈಲಿಗೆ ರವಾನಿಸದಂತೆ ಮನವಿ
ಇನ್ನೂ ಬಾಂಬೆ ಸಲಿಂ, ಯಾವ ಜೈಲಿಗೆ ಹೋದರೂ ಅಲ್ಲಿರುವವರ ಜೊತೆ ಗ್ಯಾಂಗ್ ಕಟ್ಟಕೊಂಡು ಜೈಲಿನ ವಾತಾವಾರಣವನ್ನೇ ಹಾಳು ಮಾಡ್ತಾನಂತೆ. ಇದ್ರಿಂದ ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳು, ಈತನ ಸಹವಾಸವೇ ಬೇಡ ಸ್ವಾಮಿ, ಚಿಕ್ಕಬಳ್ಳಾಪುರದ ಜೈಲಿಗೆ ಮಾತ್ರ ಕಳುಹಿಸಬೇಡಿ. ನಮ್ಮ ಜೈಲಿಗೆ ಇವನು ಬೇಡವೇ ಬೇಡ ಅಂತ ಪತ್ರ ಬರೆದಿದ್ದಾರೆ. ಇದ್ರಿಂದ ಸದ್ಯ ಬಾಂಬೆ ಸಲೀಂ ಆ್ಯಂಡ್ ಗ್ಯಾಂಗ್ನ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿಗೆ ಅಟ್ಟಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.