ಬೆಂಗಳೂರಿನ ಉದ್ಯಮಿಗೆ 25.5 ಕೋಟಿ ರೂ ವಂಚನೆ: ರಾಹುಲ್ ತೋನ್ಸೆ ವಿರುದ್ಧ ಲುಕೌಟ್ ನೋಟಿಸ್
ಬೆಂಗಳೂರಿನ ಉದ್ಯಮಿಗೆ 25.5 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ರಾಹುಲ್ ತೋನ್ಸೆ ವಿರುದ್ಧ ಬಸವೇಶ್ವರ ನಗರ ಪೊಲೀಸರು ಲುಕೌಟ್ ನೋಟಿಸ್ ಜಾರಿಗೊಳಿಸಿದ್ದಾರೆ. ರಾಹುಲ್‌ನ ತಂದೆ ರಾಮಕೃಷ್ಣ ರಾವ್ ಅವರನ್ನು ಬಂಧಿಸಲಾಗಿತ್ತು ಆದರೆ ಜಾಮೀನು ಪಡೆದಿದ್ದಾರೆ. ಈಗ ರಾಹುಲ್ ಮತ್ತು ಆತನ ಸಹೋದರಿಯನ್ನು ಪತ್ತೆ ಹಚ್ಚಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬೆಂಗಳೂರು, ಫೆಬ್ರವರಿ 15: ಕ್ಯಾಸಿನೋದಲ್ಲಿ (casino) ಹೂಡಿಕೆ ಮಾಡಿಸಿ ಲಾಭದ ಆಸೆ ತೋರಿಸಿ ನಗರದ ಉದ್ಯಮಿಗೆ 25.5 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಹುಲ್ ತೋನ್ಸೆ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ವಿದೇಶದಲ್ಲಿರುವ ರಾಹುಲ್ ಗಾಗಿ ಬಸವೇಶ್ವರ ನಗರ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಸದ್ಯ ಪ್ರಕರಣದಲ್ಲಿ ರಾಹುಲ್ ಅಪ್ಪ ರಾಮಕೃಷ್ಣ ಹಾಗೂ ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬಳಿಕ ಎ1 ರಾಮಕೃಷ್ಣ ರಾವ್ ಬಂಧನವಾಗಿತ್ತು. ನನ್ನ ಪಾತ್ರ ಏನೂ ಇಲ್ಲ ಅಂತ ರಾಹುಲ್ ತೋನ್ಸೆ ಅಪ್ಪ ರಾಮಕೃಷ್ಣ ಇತ್ತೀಚೆಗೆ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದರು.
ಇದನ್ನೂ ಓದಿ: ಕ್ಯಾಸಿನೋದಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ ನಾಮ: ಸ್ಯಾಂಡಲ್ವುಡ್ ಡ್ರಗ್ ಕೇಸ್ ಆರೋಪಿಯಿಂದ ವಂಚನೆ
ಸದ್ಯ ತನಿಖೆ ಮುಂದಿನ ಭಾಗವಾಗಿ ಉಳಿದ ಆರೋಪಿಗಳಲ್ಲಿ ರಾಹುಲ್ ತೋನ್ಸೆ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಜೊತೆಗೆ ಆತನ ಸಹೋದರಿ ಹಾಗೂ ಭಾವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಉದ್ಯಮಿ ವಿವೇಕ್ ಹೆಗ್ಡೆ ಹಾಗೂ ಅವರ ಸ್ನೇಹಿತರಿಗೆ ಕ್ಯಾಸಿನೋದಲ್ಲಿ ಹೂಡಿಕೆ ಮಾಡಿಸಿ ಲಾಭದ ಆಸೆ ತೋರಿಸಿ 25.5 ಕೋಟಿ ರೂ. ವಂಚನೆ ಮಾಡಿದ್ದಾರೆ. ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಗಾಳಹಾಕಿ ವಂಚನೆ: ಕರ್ನಾಟಕದ ಅನೇಕ ಯುವತಿಯರ ವಂಚಿಸಿದ ಕಿಲಾಡಿ ಕೊನೆಗೂ ಅಂದರ್
2023ರ ಫೆ.7ರಂದು ಉದ್ಯಮಿ ವಿವೇಕ್ ಹೆಗ್ಡೆ ಸ್ನೇಹಿತರ ಮೂಲಕ ರಾಹುಲ್ ತೋನ್ಸೆ ಅಪ್ಪ ರಾಮಕೃಷ್ಣ ಪರಿಚಯವಾಗಿದ್ದಾರೆ. ಈ ವೇಳೆ ಶ್ರೀಲಂಕಾ, ದುಬೈನಲ್ಲಿ ಕೆಲ ವ್ಯಾಪಾರಗಳಲ್ಲಿ ಲಾಭವಿದೆ ಅಂದು ನಂಬಿಸಲಾಗಿತ್ತು. ಮಗಳು ರಕ್ಷಾ, ಅಳಿಯ ಚೇತನ್, ಮಗ ರಾಹುಲ್ ಎಲ್ಲಾ ವ್ಯಾಪಾರ ಮಾಡುತ್ತಾರೆ. ಮೊಬೈಲ್ ಮೂಲಕ ಮಗಳು, ಅಳಿಯ ಜೊತೆ ಮಾತನಾಡಿಸಿದ್ದ ರಾಮಕೃಷ್ಣ, ಸಾಲದ ರೂಪದಲ್ಲಿ ನೀಡುವ ಹಣಕ್ಕೆ 4% ಬಡ್ಡಿ ನೀಡುವುದಾಗಿ ಭರವಸೆ ಕೂಡ ಕೊಟ್ಟಿದ್ದರು. ಹೀಗೆ ನಾಟಕವಾಡಿ ಬರೋಬ್ಬರಿ 25.5 ಕೋಟಿ ರೂ. ವಂಚಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.