ವಾಟ್ಸ್ಆ್ಯಪ್ ಹ್ಯಾಕ್ ಮಾಡಿ ಮಾಲೀಕನ ಹೆಸರಲ್ಲಿ ಬಾಡಿಗೆದಾರರಿಗೆ ಸಾವಿರಾರು ರೂ ವಂಚನೆ
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಟ್ಸಾಪ್ ಹ್ಯಾಕ್ ಮಾಡುವ ಮೂಲಕ ಸೈಬರ್ ವಂಚಕರು ಇಬ್ಬರು ಬಾಡಿಗೆದಾರರನ್ನು ವಂಚಿಸಿದ್ದಾರೆ. ಅಮೇರಿಕಾದಲ್ಲಿರುವ ಮನೆ ಮಾಲೀಕನ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ಬಾಡಿಗೆದಾರರಿಗೆ ಒಟ್ಟು 70,000 ರೂ. ವಂಚಿಸಿದ್ದಾರೆ. ಸದ್ಯ ಬಾಡಿಗೆದಾರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 13: ವಾಟ್ಸ್ಆ್ಯಪ್ ಹ್ಯಾಕ್ (WhatsApp Hack) ಮಾಡಿ ಮಾಲೀಕನ ಹೆಸರಲ್ಲಿ ಬಾಡಿಗೆದಾರರಿಗೆ ಸಾವಿರಾರು ರೂ ವಂಚನೆ ಮಾಡಿರುವಂತಹ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಅಮೇರಿಕಾದಲ್ಲಿರುವ ಮನೆ ಮಾಲೀಕ ಸುಮನ ಗೌಡ ಹೆಸರಿನಲ್ಲಿ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಬಾಡಿಗೆದಾರರಾದ ಕುಮಾರ್ ಮತ್ತು ಶ್ವೇತಾರಿಗೆ 70 ಸಾವಿರ ರೂ ವಂಚನೆ ಮಾಡಿದ್ದಾರೆ. ಸೈಬರ್ ಕ್ರೈಂ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
KSRTC ಬಸ್ ಹರಿದು ಸ್ಥಳದಲ್ಲೇ ಸಾವು: ಚಾಲಕ ಪರಾರಿ
ಕೆಎಸ್ಆರ್ಟಿಸಿ ಬಸ್ ಹರಿದು ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ದುರ್ಘಟನೆ ಸಂಭವಿದೆ. ರಂಗಸ್ವಾಮಿ(65) ಮೃತ ವ್ಯಕ್ತಿ. ನೆಲಮಂಗಲ ಬಸ್ ನಿಲ್ದಾಣದಿಂದ ಹೊರಬರುವಾಗ ಘಟನೆ ಸಂಭವಿಸಿದ್ದು, ನಂತರ ಸ್ಥಳದಲ್ಲೇ ಬಸ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಾಂಪೌಂಡ್ಗೆ ನೀರು ಹಾಕುವ ವಿಚಾರಕ್ಕೆ ಅತ್ತಿಗೆ ಮೇಲೆ ಮೈದುನ ಹಲ್ಲೆ
ಕಾಂಪೌಂಡ್ಗೆ ನೀರು ಹಾಕುವ ವಿಚಾರಕ್ಕೆ ಅತ್ತಿಗೆ ಮೇಲೆ ಮೈದುನ ಹಲ್ಲೆ ಮಾಡಿರುವಂತಹ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿಯಲ್ಲಿ ಘಟನೆ ನಡೆದಿದೆ. ನೀರು ಯಾಕೆ ಹಾಕಿದ್ದೀಯಾ ಎಂದು ಕೇಳಿದ್ದಕ್ಕೆ ಅತ್ತಿಗೆ ಭವ್ಯಾ ಮೇಲೆ ಮೈದುನ ಆದರ್ಶ ಹಲ್ಲೆ ಮಾಡಿರುವ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಬಂಧದ ಅನುಮಾನ; ಬೆಂಗಳೂರಲ್ಲಿ ಹೆಂಡತಿಯ ಬಾಯಿಗೆ ಅಂಟು ಸುರಿದು ಕೊಲ್ಲಲು ಯತ್ನಿಸಿದ ಗಂಡ
ಅತ್ತಿಗೆ ಭವ್ಯಾ ತಲೆ ಮತ್ತು ಕಿವಿಗೆ ಗಂಭೀರ ಗಾಯವಾಗಿದೆ. ಸದ್ಯ ಭವ್ಯಾ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರ್ಶ ವಿರುದ್ಧ ಪೊಲೀಸ್ ಠಾಣೆಗೆ ಸಂಬಂಧಿಕರು ದೂರು ನೀಡಿದ್ದಾರೆ. ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಯಾಂಟರ್ಗೆ ಗೂಡ್ಸ್ ವಾಹನ ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು
ಮದ್ದೂರು ಪಟ್ಟಣದ ಬಳಿ ಬೆಂಗಳೂರು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಿವಾಸಿಯಾಗಿದ್ದ ಚಾಲಕ ಲೋಕನಾಥ್ ಸಾವನ್ನಪ್ಪಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.