AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಸಂಬಂಧದ ಅನುಮಾನ; ಬೆಂಗಳೂರಲ್ಲಿ ಹೆಂಡತಿಯ ಬಾಯಿಗೆ ಅಂಟು ಸುರಿದು ಕೊಲ್ಲಲು ಯತ್ನಿಸಿದ ಗಂಡ

Bengaluru Crime News: ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ತನ್ನ ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಶುರುವಾಗಿತ್ತು. ಇದೇ ಅನುಮಾನ ಹೆಮ್ಮರವಾಗಿ ಬೆಳೆದು, ಕೊನೆಗೆ ಅವರು ಆಕೆಯ ಬಾಯಿಗೆ ಅಂಟು ಸುರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ತನ್ನ ಹೆಂಡತಿಯ ಕುತ್ತಿಗೆ ಹಿಸುಕಲು ಪ್ರಯತ್ನಿಸಿದ ಅವರು ಬಳಿಕ ಆಕೆಯ ಬಾಯಿಗೆ ಅಂಟು ಸುರಿದಿದ್ದಾರೆ. ಕೊಲೆ ಪ್ರಯತ್ನದ ಆರೋಪದ ಮೇಲೆ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಸಂಬಂಧದ ಅನುಮಾನ; ಬೆಂಗಳೂರಲ್ಲಿ ಹೆಂಡತಿಯ ಬಾಯಿಗೆ ಅಂಟು ಸುರಿದು ಕೊಲ್ಲಲು ಯತ್ನಿಸಿದ ಗಂಡ
Woman Harassment
ಸುಷ್ಮಾ ಚಕ್ರೆ
|

Updated on: Feb 13, 2025 | 5:22 PM

Share

ಬೆಂಗಳೂರು: ಬೆಂಗಳೂರಿನ ವ್ಯಕ್ತಿಯೊಬ್ಬರು ತನ್ನ ಹೆಂಡತಿ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಲ್ಲಿ ಆಕೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಹರೋಕ್ಯಾತನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಜಿ. ಸಿದ್ದಲಿಂಗ ಸ್ವಾಮಿ ಎಂಬ 38 ವರ್ಷದ ವ್ಯಕ್ತಿ ತನ್ನ ಹೆಂಡತಿಯ ಕುತ್ತಿಗೆ ಹಿಸುಕಲು ಪ್ರಯತ್ನಿಸಿದ್ದಾರೆ. ನಂತರ ಆಕೆಯ ಬಾಯಿಗೆ ಅಂಟು ಸುರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಕೊಲೆ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

ಸಿದ್ಧಲಿಂಗ ಸ್ವಾಮಿ ಅವರ ಪತ್ನಿಯಾದ 33 ವರ್ಷದ ಮಂಜುಳಾ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಸಿದ್ಧಲಿಂಗ ಸ್ವಾಮಿ ಅವರಿಗೆ ಮಕ್ಕಳಿರಲಿಲ್ಲ. ಸಿದ್ಧಲಿಂಗ ಸ್ವಾಮಿಗೆ ಮಂಜುಳಾ ಮೇಲೆ ನಂಬಿಕೆಯಿರಲಿಲ್ಲ. ಆಕೆ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಅವರಿಗೆ ಉಂಟಾಗಿತ್ತು. ಭಾನುವಾರ ರಾತ್ರಿಯೂ ಅವರು ಅದೇ ವಿಷಯಕ್ಕೆ ಜಗಳವಾಡಿದ್ದರು. ಮಂಜುಳಾ ನಿದ್ರೆ ಮಾಡುವಾಗ ಸಿದ್ಧಲಿಂಗ ಸ್ವಾಮಿ ಮೊದಲು ಆಕೆಯ ಕುತ್ತಿಗೆ ಹಿಸುಕಲು ಪ್ರಯತ್ನಿಸಿದ್ದರು. ಅವಳು ಪ್ರಜ್ಞೆ ಕಳೆದುಕೊಂಡಾಗ ಸಿದ್ಧಲಿಂಗ ಸ್ವಾಮಿ ಮರಗೆಲಸಕ್ಕೆ ಬಳಸಿದ ಅಂಟನ್ನು ಆಕೆಯ ಬಾಯಿಗೆ ಸುರಿದರು. ಸಿದ್ಧಲಿಂಗ ಸ್ವಾಮಿಯವರ ಪ್ರಕಾರ, ಆ ಅಂಟು ಅವಳ ನರಗಳನ್ನು ಬಂಧಿಸಿ ಉಸಿರಾಟವನ್ನು ನಿಲ್ಲಿಸುವ ಮೂಲಕ ಅವಳನ್ನು ಕೊಲ್ಲುತ್ತದೆ ಎಂದು ಅವರು ಭಾವಿಸಿದ್ದರು.

ಇದನ್ನೂ ಓದಿ: ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ, ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು

ಆದರೆ, ಪೊಲೀಸರು ಅಲ್ಲಿಗೆ ಬಂದಾಗ ಮಂಜುಳಾ ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿ ತಕ್ಷಣ ಆ್ಯಂಬುಲೆನ್ಸ್​ನಲ್ಲಿ ಕರೆದುಕೊಂಡು ಹೋದರು. ಚಲಿಸುವ ಆಂಬ್ಯುಲೆನ್ಸ್‌ನಲ್ಲಿ ಬಿಸಿ ನೀರಿನಿಂದ ಅವಳ ಬಾಯಿಯನ್ನು ತೊಳೆದು ಅವಳ ಉಸಿರಾಟವನ್ನು ಸರಾಗಗೊಳಿಸಲು ಪ್ರಯತ್ನಿಸಲಾಯಿತು. ನಂತರ ನಾವು ಮಂಜುಳಾ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈಗ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ