ಚಿಕ್ಕಬಳ್ಳಾಪುರ: ಅಡ್ಡಾದಿಡ್ಡಿ ಸ್ಕೂಟಿ ಚಾಲನೆ; ಪ್ರಶ್ನಿಸಿದ ಬೈಕ್​​ ಸವಾರನಿಗೆ ಚಾಕು ಇರಿದ ಲೇಡಿ ಟೆಕ್ಕಿ

ಓರ್ವ ಮಹಿಳಾ ಟೆಕ್ಕಿ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಲಾಯಿಸಿದ್ದು, ಇದನ್ನ ಕಂಡ ಯುವಕರು ಯಾಕಮ್ಮ ಹಂಗೆ ಓಡಿಸ್ತೀಯಾ, ಸರಿಯಾಗಿ ಓಡಿಸೋಕೆ ಆಗಲ್ವಾ ಅಂತ ಪ್ರಶ್ನಿಸಿದ್ದಾರೆ. ಬುದ್ದಿವಾದ ಹೇಳಿದ ಬೈಕ್ ಸವಾರರಿಗೆ ಆ ಮಹಿಳಾ ಟೆಕ್ಕಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿ.

ಚಿಕ್ಕಬಳ್ಳಾಪುರ: ಅಡ್ಡಾದಿಡ್ಡಿ ಸ್ಕೂಟಿ ಚಾಲನೆ; ಪ್ರಶ್ನಿಸಿದ ಬೈಕ್​​ ಸವಾರನಿಗೆ ಚಾಕು ಇರಿದ ಲೇಡಿ ಟೆಕ್ಕಿ
ಚಾಕಿ ಇರಿದ ಟೆಕ್ಕಿ ಲೇಡಿ
Edited By:

Updated on: Nov 18, 2025 | 6:05 PM

ಚಿಕ್ಕಬಳ್ಳಾಪುರ, ನವೆಂಬರ್​ 18: ಹೈವೇಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಾಲನೆ ಮಾಡುತ್ತಿದ್ದಿದ್ದನ್ನು ಪ್ರಶ್ನೆ ಮಾಡಿದಕ್ಕೆ ಬೈಕ್‌ ಸವಾರನಿಗೆ ಮಹಿಳಾ ಟೆಕ್ಕಿ (Techie) ಚಾಕುವಿನಿಂದ ಇರಿದಿರುವಂತಹ (Stab) ಘಟನೆ ನಗರದ ವಾಪಸಂದ್ರ ಬ್ರಿಡ್ಜ್ ಬಳಿ ನಡೆದಿದೆ. ಬೆಂಗಳೂರು ಮೂಲದ ರಿಂಬಿಕಾ ಎಂಬ ಮಹಿಳಾ ಟೆಕ್ಕಿಯಿಂದ ಕೃತ್ಯವೆಸಗಲಾಗಿದೆ. ಬೈಕ್ ಸವಾರ ನರಸಿಂಹ ಮೂರ್ತಿ ಕೈಗೆ ಗಾಯವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಡಾದಿಡ್ಡಿಯಾಗಿ ಸ್ಕೂಟಿ ಚಾಲನೆ

ಮೂಲತಃ ತಮಿಳುನಾಡಿನವರಾದ ರಿಂಬಿಕಾ, ಬೆಂಗಳೂರಿನಲ್ಲಿ ಟಿಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಇಂದು ತಮ್ಮ ತಮಿಳುನಾಡು ನೊಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದರು. ಆದರೆ ಅದ್ಯಾಕೋ ಏನೋ ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಓಡಿಸುತ್ತಾ ಹಿಂದೆ ಬರ್ತಿದ್ದ ಸವಾರರಿಗೆ ಇರುಸು ಮುರುಸು ಉಂಟು ಮಾಡಿದ್ದಾರೆ.

ಇದನ್ನೂ ಓದಿ: ಕುಡಿಯಬೇಡ ಅಂದಿದ್ದೇ ತಪ್ಪಾಯ್ತು: ಹೆಂಡತಿ ಜೀವವನ್ನೇ ಬಲಿ ಪಡೆದ ಪಾಪಿ ಪತಿ

ಚಿಕ್ಕಬಳ್ಳಾಪುರದ ಸೇತುವೆ ಕೆಳಗಡೆ ಸ್ಕೂಟಿ ನಿಲ್ಲಿಸಿ ನಿಂತಿದ್ದ ರಿಂಬಿಕಾರನ್ನು ಹಿಂದೆ ಬರ್ತಿದ್ದ ಬೈಕ್ ಸವಾರ ನಿಖಿಲ್ ಹಾಗೂ ನರಸಿಂಹಮೂರ್ತಿ ಅವರು ಪ್ರಶ್ನೆ ಮಾಡಿದ್ದಾರೆ. ಯಾಕಮ್ಮ ಗಾಡಿ ಅಡ್ಡಾದಿಡ್ಡಿ ಓಡಿಸ್ತಿದ್ದೀಯಾ? ಅಂದಿದ್ದೇ ತಡ ಆಕೆ ಬಳಿ ಇದ್ದ ಫೋಲ್ಡೆಡ್ ಚಾಕುವಿನಿಂದ ಅಟ್ಯಾಕ್ ಮಾಡಿದ್ದಾರೆ. ಇದ್ರಿಂದ ಬೈಕ್ ಸವಾರ ನಿಖಿಲ್ ಕೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಹಿಂಬದಿ ಸವಾರ ನರಸಿಂಹಮೂರ್ತಿಗೂ ಗಾಯವಾಗಿದೆ. ರಿಂಬಿಕಾ ಚಾಕುವಿನಿಂದ ಅಟ್ಯಾಕ್ ಮಾಡ್ತಿದ್ದಂತೆ ನಿಖಿಲ್ ಸಹ ವಾಪಸ್​​ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಹೋಟೆಲ್​ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಇತರೆ ವಾಹನ ಸವಾರರು, ಸ್ಥಳೀಯರು ಜಮಾಯಿಸಿ ಪೊಲೀಸರನ್ನ ಕರೆಸಿ ಆಕೆಯನ್ನ ವಶಕ್ಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಯುವಕ ನಿಖಿಲ್ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ರಿಂಬಿಕಾರನ್ನ ವಿಚಾರಣೆ ನಡೆಸಿದ್ದಾರೆ. ಯುವಕರು ನನ್ನನ್ನ ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ವರ್ತನೆ ಮಾಡಿದರು. ಅದಕ್ಕೆ ನಾನು ಚಾಕುವಿನಿಂದ ಅಟ್ಯಾಕ್ ಮಾಡಿದೆ ಎಂದು ರಿಂಬಿಕಾ ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಹಳೆಯ ದ್ವೇಷಕ್ಕೆ ಇಡೀ ಕುಟುಂಬಕ್ಕೆ ವಿಷ ಹಾಕಿದ ಪಾಪಿರೆಡ್ಡಿ; ಮೂವರ ಸ್ಥೀತಿ ಗಂಭೀರ

ಸಾಲದು ಅಂತ ಪೊಲೀಸರ ತನಿಖೆಗೆ ಸಹಕರಿಸದೆ ಪೊಲೀಸ್​ ಠಾಣೆಯಿಂದ‌ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಮಾನಸಿಕವಾಗಿ ಸದೃಢವಾಗಿರದ ರಿಂಬಿಕಾ, ಪೊಲೀಸರಿಗೆ ಸಹಕರಿಸದೆ ಚಿತ್ರವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಬುದ್ಧಿವಾದ ಹೇಳಿದಕ್ಕೆ ಚಾಕು ತೆಗೆದು ಹಲ್ಲೆ ಮಾಡುವ ಮೂಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us