AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸಪ್ಪನನ್ನು ಮದುವೆಯಾಗಿ ಫಜೀತಿಗೆ ಸಿಲುಕಿದ ಮಹಿಳೆ: ನಾಪತ್ತೆಯಾದ ಗಂಡನನ್ನು ಹುಡುಕಿಕೊಡುವಂತೆ ಅಧಿಕಾರಿಗಳ ಮೊರೆ ಹೋದ ಪತ್ನಿ

ಪ್ರೀತಿಸಿ ಮದುವೆಯಾದವರು ಒಂದು ವರ್ಷದಲ್ಲೇ ವಿರಹ, ಭಿನ್ನಾಭಿಪ್ರಾಯಗಳು ಉಂಟಾಗಿ ಕಟ್ಟಿಕೊಂಡ ಪತ್ನಿಯನ್ನು ಪೊಲೀಸ್ ಕಾನ್‌ಸ್ಟೇಬಲ್ ಗಂಡ ಬಿಟ್ಟು ನಾಪತ್ತೆಯಾಗಿರುವಂತಹ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಸದ್ಯ ನಾಪತ್ತೆಯಾದ ಗಂಡನನ್ನು ಹುಡುಕಿಕೊಡುವಂತೆ ಪತ್ನಿ ಮಹಿಳಾ ಆಯೋಗದ ಮೊರೆಹೋಗಿದ್ದಾರೆ. ಇತ್ತ ಪೊಲೀಸ್ ಕಾನ್‌ಸ್ಟೇಬಲ್​​ನನ್ನು ಅಮಾನತ್ತು ಮಾಡಲಾಗಿದೆ.

ಪೊಲೀಸಪ್ಪನನ್ನು ಮದುವೆಯಾಗಿ ಫಜೀತಿಗೆ ಸಿಲುಕಿದ ಮಹಿಳೆ: ನಾಪತ್ತೆಯಾದ ಗಂಡನನ್ನು ಹುಡುಕಿಕೊಡುವಂತೆ ಅಧಿಕಾರಿಗಳ ಮೊರೆ ಹೋದ ಪತ್ನಿ
ಸಿರೀಶ, ಪೊಲೀಸ್ ಕಾನ್‌ಸ್ಟೆಬಲ್‌ ತಿಮ್ಮಣ್ಣ ಬೂಸರೆಡ್ಡಿ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: May 22, 2025 | 10:14 AM

Share

ಚಿಕ್ಕಬಳ್ಳಾಪುರ, ಮೇ 22: ಆಕೆ ಪದವೀಧರೆ. ಆತ ಪೊಲೀಸ್ ಕಾನ್‌ಸ್ಟೆಬಲ್‌ (police Constable). ಕಾಲೇಜೊಂದರಲ್ಲಿ ಪರಿಚಯವಾಗಿದ್ದ ಅವರಿಬ್ಬರೂ ಪ್ರೀತಿ, ಪ್ರೇಮವೆಂದು ಸುತ್ತಾಡಿ ಬಳಿಕ ಮದುವೆ ಮಾಡಿಕೊಂಡಿದ್ದರು. ಅವರಿಬ್ಬರ ಮದುವೆಗೆ ಇನ್ನೂ ಒಂದು ವರ್ಷ ಕೂಡ ತುಂಬಿಲ್ಲ. ಆಗಲೇ ನೀನು ಬೇಡ, ನಿನ್ನ ಜೊತೆ ಸಂಸಾರವೂ ಬೇಡ ಎಂದು ಪೊಲೀಸ್ ಗಂಡ ಕಾಣೆಯಾಗಿದ್ದಾರೆ. ಇದರಿಂದ ವಿಚಲಿತಳಾಗಿರುವ ಪತ್ನಿ (wife), ಪೊಲೀಸ್ ಗಂಡನನ್ನು ಹುಡುಕಿಕೊಡುವಂತೆ ಅವಲತ್ತುಕೊಂಡಿದ್ದಾರೆ.

2024 ಆಗಸ್ಟ್ 27ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸ್‍ಠಾಣೆಯ ಕಾನ್ಸ್‍ಟೇಬಲ್ ತಿಮ್ಮಣ್ಣ ಬೂಸರೆಡ್ಡಿ ಹಾಗೂ ಅದೇ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ನಿವಾಸಿ ಸಿರೀಶ ಎಂಬುವವರ ಮದುವೆ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿತ್ತು.

ಇದನ್ನೂ ಓದಿ: ಅಂತರ್​ಧರ್ಮೀಯ ವಿವಾಹದಲ್ಲಿ ಬೆಸೆದಿರುವ ಚಿಕ್ಕಬಳ್ಳಾಪುರ ಯುವಕ-ಯುವತಿಗೆ ತಮ್ಮ ಕುಟುಂಬಗಳ ಭೀತಿ

ಇದನ್ನೂ ಓದಿ
Image
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
Image
ಹಿಂದೂ ಯುವಕನನ್ನು ಪ್ರೀತಿಸಿ ಮದ್ವೆಯಾದ ಮುಸ್ಲಿಂ ಯುವತಿ
Image
ಚಿಕ್ಕಬಳ್ಳಾಪುರ: ಕಟಾವಿಗೆ ಬಂದ ದ್ರಾಕ್ಷಿ ತೋಟಕ್ಕೆ ಕಿಡಿಗೇಡಿಗಳಿಂದ ವಾಮಾಚಾರ
Image
ನಂದಿಹಿಲ್ಸ್ ಅಭಿವೃದ್ದಿಗೆ ಪಣ: ಪ್ರವಾಸಿಗರ ಕುಂದು ಕೊರತೆ ಆಲಿಸಿದ ಸಚಿವ

ಮದುವೆ ದಿನ ಕೂಡ ದೊಡ್ಡ ರಂಪಾಟವೇ ನಡೆದಿತ್ತು. ಆದರೆ ಮದುವೆಯಾಗಿ ಇನ್ನು ಒಂದು ವರ್ಷ ತುಂಬಿಲ್ಲ ಆಗಲೇ ಜೋಡಿಯ ಮಧ್ಯೆ ವಿರಹ, ಭಿನ್ನಾಭಿಪ್ರಾಯ, ಕಲಹ ಉಂಟಾಗಿದ್ದು, ತಿಮ್ಮಣ್ಣ, ಸಿರೀಶಳನ್ನು ಬೀದಿಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾರೆ. ಇದರಿಂದ ನಮ್ಮ ಸಂಸಾರ ಒಂದು ಮಾಡಿ ಎಂದು ಸಿರೀಶ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿಯನ್ನು ಭೇಟಿಯಾಗಿ ಅವಲತ್ತುಕೊಂಡಿದ್ದಾಳೆ.

ಕಾನ್‌ಸ್ಟೆಬಲ್‌ ತಿಮ್ಮಣ್ಣ ಅಮಾನತ್ತು 

ಇನ್ನು ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತಿರುಗಿದ್ದು, ಪೊಲೀಸ್ ಕಾನ್‌ಸ್ಟೆಬಲ್‌ ಆಗಿದ್ದ ತಿಮ್ಮಣ್ಣ ಹೆಂಡತಿಯಿಂದ ದೂರ ಉಳಿದಿದ್ದಾರೆ. ಇದರಿಂದ ಸಿರೀಶ ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್‍ರಿಂದ ಹಿಡಿದು ಎಡಿಜಿಪಿ ಹಿರಿಯ ಅಧಿಕಾರಿಗಳವರೆಗೂ ಗಂಡನ ಮೇಲೆ ದೂರು ನೀಡಿದ್ದಾರೆ. ಇದರಿಂದ ಅಧಿಕಾರಿಗಳು ಕಾನ್‌ಸ್ಟೆಬಲ್‌ ತಿಮ್ಮಣ್ಣನನ್ನು ಅಮಾನತ್ತು ಮಾಡಿದ್ದಾರೆ.

ಇದನ್ನೂ ಓದಿ: ಹಿಂದೂ ಯುವಕನನ್ನ ಪ್ರೀತಿಸಿ ಮದ್ವೆಯಾದ ಮುಸ್ಲಿಂ ಯುವತಿ: ಧರ್ಮ ಮೀರಿದ ಪ್ರೇಮವಿವಾಹ

ಇತ್ತ ತಿಮ್ಮಣ್ಣ ಪತ್ನಿ ಕಣ್ಣಿಗೆ ಕಾಣಿಸದೆ ನಾಪತ್ತೆಯಾಗಿದ್ದಾರೆ. ಇನ್ನು ಮನೆಯವರ ವಿರೋಧ ಕಟ್ಟಿಕೊಂಡು ಪೊಲೀಸ್ ತಿಮ್ಮಣ್ಣನನ್ನು ಪ್ರೀತಿಸಿ ವಿವಾಹವಾಗಿದ್ದ ಸಿರೀಶ ಈಗ ಅತ್ತ ದರಿ ಇತ್ತ ಪುಲಿ ಎಂತಾಗಿದ್ದು, ಅತ್ತ ತವರುಮನೆ, ಇತ್ತ ಗಂಡನ ಮನೆ ಇಲ್ಲದೇ ಬೀದಿಯಲ್ಲಿ ಬದುಕುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ