Thondebhavi: ರೈಲ್ವೆ ಹಳಿಯ ಮೇಲೆ ಮೂರು ಶವಗಳು ಪತ್ತೆ! ಮೂವರ ಶವಗಳ ಸುತ್ತ ಅನುಮಾನದ ಹುತ್ತ!

Suicide: ಬೆಂಗಳೂರು ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪರಿಚಿತ ಶವಗಳ ಗುರುತು ಪತ್ತೆ ಕಾರ್ಯ ನಡೆದಿದೆ.

Thondebhavi: ರೈಲ್ವೆ ಹಳಿಯ ಮೇಲೆ ಮೂರು ಶವಗಳು ಪತ್ತೆ! ಮೂವರ ಶವಗಳ ಸುತ್ತ ಅನುಮಾನದ ಹುತ್ತ!
ತೊಂಡೆಬಾವಿ ಬಳಿ ರೈಲಿಗೆ ಸಿಲುಕಿ ಮೂವರ ಆತ್ಮಹತ್ಯೆ ಶಂಕೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 09, 2023 | 5:06 PM

ಚಿಕ್ಕಬಳ್ಳಾಪುರ:  ಜನವಸತಿ ಪ್ರದೇಶದಲ್ಲಿ ರೈಲ್ವೆ ಹಳಿ ಇದೆ. ಆ ರೈಲ್ವೆ ಹಳಿ ಸದಾ ಬ್ಯೂಜಿ. ಸದಾ ಒಂದಿಲ್ಲೊಂದು ರೈಲು ಚುಕು ಬುಕು ಚುಕು ಬುಕು ಅಂತ ಸದ್ದು ಮಾಡ್ತಿರುತ್ತವೆ. ಅಂತಹದರಲ್ಲಿ ಇಂದು ಬೆಳಿಗ್ಗೆ ನೋಡಬಾರದ ಕೇಳಬಾರದ ಘಟನೆಯೊಂದು ನಡೆದುಹೋಗಿತ್ತು. ಅಷ್ಟಕ್ಕೂ ಅದೇನು ಘಟನೆ ಅಂತೀರಾ ಈ ವರದಿ ನೋಡಿ!

ಇದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು (Gowribidanur) ತಾಲ್ಲೂಕಿನ ತೊಂಡೆಬಾವಿ (Thondebhavi) ಗ್ರಾಮದಲ್ಲಿ ಹಾದು ಹೋಗಿರುವ ಡಬಲ್ ರೈಲ್ವೆ ಹಳಿ. ತೊಂಡೆಬಾವಿ ಗ್ರಾಮದ ರೈಲ್ವೆ ನಿಲ್ದಾಣದ ಸಮೀಪವೆ ಇಂದು ಬೆಳಿಗ್ಗೆ 8 ಗಂಟೆಗೆ ಒಬ್ಬರಲ್ಲ ಇಬ್ಬರಲ್ಲ ಮೂವರ ಮೃತ ದೇಹಗಳು ಕಾಣಿಸಿದ್ದವು. ಇದನ್ನರಿತ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ ಹಾಗೂ ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು. ಮೃತರಲ್ಲಿ ಓರ್ವ ಪುರುಷ ಇಬ್ಬರು ಹೆಂಗಸರ ದೇಹಗಳು (Suicide).

ಇನ್ನು ಅಪರಿಚಿತ ಓರ್ವ ಪುರುಷ, ಇಬ್ಬರು ಹೆಂಗಸರು ಚಲಿಸುವ ರೈಲಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರ ದೇಹಗಳು ಛಿದ್ರ ಛಿದ್ರವಾಗಿವೆ. ಗುರುತು ಸಿಗ್ತಿಲ್ಲ. ಮೇಲ್ನೋಟಕ್ಕೆ ತಂದೆ ತಾಯಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಪುರುಷನ ಶರ್ಟ ಕಾಲರ್ ನಲ್ಲಿ ಗೌರಿಬಿದನೂರು ವಿನಾಯಕ ಟೈಲರ್ ಅಡ್ರೆಸ್ ಇದೆ. ಇದರಿಂದ ಮೃತರು ಸ್ಥಳೀಯರು ಇರಬೇಕು ಎನ್ನುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಡಾ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ 3ನೇ ಭಾರತ ರತ್ನ

ಮೂವರೂ ಒಂದೆ ಕುಟುಂಬದವರಾ? ದಂಪತಿಯಾ? ಇಲ್ಲಾ ಬೇರೆ ಬೇರೆಯವರಾ ಏನೂ ಸದ್ಯಕ್ಕೆ ಗೊತ್ತಿಲ್ಲ. ಮೃತರ ದೇಹಗಳು ಛಿದ್ರಗೊಂಡಿರುವ ಕಾರಣ ಗುರುತು ಕಷ್ಟವಾಗ್ತಿದ್ದು ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ.

ರಾಯಚೂರು: ಗ್ರಾಮ ಪಂಚಾಯತಿ ದಿವ್ಯ ನಿರ್ಲಕ್ಷಕ್ಕೆ ಇಬ್ಬರು ಮಕ್ಕಳು ಬಲಿ

ರಾಯಚೂರು: ಬ್ಯಾಗವಾಟ ಗ್ರಾಮ ಪಂಚಾಯತಿ ದಿವ್ಯ ನಿರ್ಲಕ್ಷ್ಯಕ್ಕೆ ಮಕ್ಕಳು ಬಲಿಯಾಗಿದ್ದು, ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವಿಗೀಡಾದ ಪ್ರಕರಣ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬ್ಯಾಗವಾಟದ ಗ್ರಾಮದಲ್ಲಿ ನಡೆದಿದೆ.

ಎರಡು ಬಲಿ ಪಡೆದ ಬಳಿಕ, ಗ್ರಾಮ ಪಂಚಾಯತಿಯವರು ಈಗ ಗುಂಡಿ ಮುಚ್ಚುತ್ತಿದ್ದಾರೆ. ಚರಂಡಿ ಕಾಮಗಾರಿ ಹಿನ್ನೆಲೆ ಮೂರು ದಿನಗಳ ಹಿಂದೆಯಷ್ಟೇ ಅಗೆಯಲಾಗಿದ್ದ 5-6 ಅಡಿಯ ಗುಂಡಿ ಇದಾಗಿದೆ. ಗುಂಡಿ ಪಕ್ಕದಲ್ಲಿ ಪೈಪ್ ಲೈನ್ ಕಟ್ ಆಗಿರುವುದರಿಂದ ಗುಂಡಿಯಲ್ಲಿ ಪೈಪ್ ಲೈನ್ ನೀರು ತುಂಬಿತ್ತು. ಈ ಮಧ್ಯೆ, ನಿನ್ನೆ ಸಂಜೆ ಯಲ್ಲಾಲಿಂಗಪ್ಪ ಹಾಗೂ ಅಜಯ್ ಎಂಬಿಬ್ಬರು ಬಾಲಕರು ಆಡವಾಡಲು ಹೋಗಿದ್ದರು. ಆಡವಾಡೋ ವೇಳೆ ನೀರುತುಂಬಿಕೊಂಡಿದ್ದ ಗುಂಡಿಯಲ್ಲಿ ಅಜಯ್ ಮೊದಲು ಬಿದ್ದಿದ್ದಾನೆ. ಆಗ ಅಜಯ್ ನನ್ನ ರಕ್ಷಿಸಲು ಹೋಗಿ, ಮತ್ತೊಬ್ಬ ಬಾಲಕ ಯಲ್ಲಾಲಿಂಗ ಕೂಡ ಗುಂಡಿ ಪಾಲಾಗಿದ್ದಾನೆ. ಇದರ ಅರಿವು ಇಲ್ಲದೆ ತಡರಾತ್ರಿ ವರೆಗೂ ಮಕ್ಕಳಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಕೊನೆಗೆ ಗುಂಡಿಯಲ್ಲಿ ಕಟ್ಟಿಗೆ ಇಟ್ಟು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ಬಾಲಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು ವೈಯಕ್ತಿಕವಾಗಿ ತಲಾ 10 ಸಾವಿರ ಪರಿಹಾರ ನೀಡಿದರು. ಬ್ಯಾಗವಾಟ ಗ್ರಾ.ಪಂ ಪಿಡಿಓ ತಾರಕೇಶ್ವರಿ, ಗ್ರಾ.ಪಂ ಅಧ್ಯಕ್ಷೆ ಬಸಲಿಂಗಮ್ಮ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಘಟನೆ ಬಳಿಕ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:09 pm, Mon, 9 January 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ