ಆರೋಗ್ಯ ಸಚಿವರ ಜಿಲ್ಲೆಯಲ್ಲೇ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯಕ್ಕೆ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರಿಂದ ಧರಣಿ

| Updated By: ಆಯೇಷಾ ಬಾನು

Updated on: Oct 13, 2022 | 9:08 AM

ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಮೃತ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಬಾಣಂತಿ ನೇತ್ರಾವತಿ ಶವ ಇಟ್ಟು ಧರಣಿ ಮಾಡಿದ್ದಾರೆ.

ಆರೋಗ್ಯ ಸಚಿವರ ಜಿಲ್ಲೆಯಲ್ಲೇ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯಕ್ಕೆ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರಿಂದ ಧರಣಿ
ವೈದ್ಯರ ನಿರ್ಲಕ್ಷ್ಯಕ್ಕೆ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರಿಂದ ಧರಣಿ
Follow us on

ಚಿಕ್ಕಬಳ್ಳಾಪುರ: ಸಿಜೇರಿಯನ್ ನಂತರ ಬಾಣಂತಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡದ ಹಿನ್ನೆಲೆ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಕುಟುಂಸ್ಥರು ಆರೋಪಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಮೃತ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಬಾಣಂತಿ ನೇತ್ರಾವತಿ ಶವ ಇಟ್ಟು ಧರಣಿ ಮಾಡಿದ್ದಾರೆ.

ಸೆಪ್ಟೆಂಬರ್ 9ರಂದು ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ನೇತ್ರಾವತಿ ಅವರ ಹೆರಿಗೆಯಾಗಿತ್ತು. ಸಿಜೇರಿಯನ್ ನಂತರ ಸಮರ್ಪಕವಾಗಿ ಹೊಲಿಗೆ ಹಾಕಿರಲಿಲ್ಲವಂತೆ. ಹೀಗಾಗಿ ಹೊಲಿಗೆ ಹಾಕಿದ್ದ ಸ್ಥಳದಲ್ಲಿ ಇನಫೆಕ್ಷನ್ ಆಗಿ ಆರೋಗ್ಯ ಹಡಗೆಟ್ಟಿತ್ತು. ನಂತರ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ರು ಪ್ರಯೋಜನ ಆಗಿರಲಿಲ್ಲ. ನಿನ್ನೆ ಸಂಜೆ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿದ್ದಾರೆ. ಬಾಣಂತಿ ನೇತ್ರಾವತಿ ಸಾವಿಗೆ ವೈದ್ಯೆ ಡಾ.ಜಯಂತಿ ಕಾರಣವೆಂದು ಆರೋಪಿಸಿ ಮೃತ ಬಾಣಂತಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಡಾ.ಜಯಂತಿ ಚಿಂತಾಮಣಿ ತಾಲೂಕು ಆಸ್ಪತ್ರೆಯ ಪ್ರಸೂತಿ ತಜ್ಞೆ. ಡಾ.ಜಯಂತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನೇತ್ರಾವತಿ ಸಂಬಂಧಿಕರು ಧರಣಿ ನಡೆಸಿದ್ದಾರೆ. ಇದ್ರಿಂದ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ, ಪ್ರಸೂತಿ ಹಾಗೂ ಸ್ತ್ರಿರೋಗ ತಜ್ಞೆ ಡಾ.ಎನ್.ಆರ್.ಜಯಂತಿ ಯನ್ನು ವರ್ಗಾವಣೆ ಮಾಡಿದ್ದು, ಆರೋಗ್ಯ ಇಲಾಖೆ ಆಯುಕ್ತ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.ಇದನ್ನೂ ಓದಿ: ಯೀಜೀ ಸಂಸ್ಥಾಪಕ ಕಾನ್ಯೆ ವೆಸ್ಟ್ ಆಡಿದಾಸ್ ಕಂಪನಿಯ ಎಕ್ಸಿಕ್ಯೂಟಿವ್​ಗಳನ್ನು  ಮೀಟಿಂಗ್​ಗೆ ಕರೆದು ಪೋರ್ನ್ ಮೂವೀ ತೋರಿಸಿದ!!

ಮಡಿಕೇರಿಯಲ್ಲಿ ದರೋಡೆ

ಮಡಿಕೇರಿ ನಗರದಲ್ಲಿ ಹಾಡ ಹಗಲೆ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಡಿಕೇರಿ ನಗರ ಠಾಣಾ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಮಡಿಕೇರಿಯ ಗೌಳಿಬೀದಿ ನಿವಾಸಿ ಲೋಕೇಶ್ (37) ಬಂಧಿತ ಆರೋಪಿ. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿದರು. ಅ.11 ರಂದು ಮಡಿಕೇರಿಯಲ್ಲಿ ಕಳ್ಳತನ ನಡೆದಿತ್ತು. ಮನೆಗೆ ನುಗ್ಗಿ ಮಹಿಳೆಯ ಸರ, ಓಲೆಯನ್ನು ಆರೋಪಿ ಕದ್ದಿದ್ದ. ಬಳಿಕ ಅವುಗಳನ್ನು ಮಡಿಕೇರಿ ನಗರದ ಚಿನ್ನದ ಅಂಗಡಿಯೊಂದರಲ್ಲಿ ಗಿರವಿ ಇಟ್ಟಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ರೈತನ ಮೇಲೆ ಚಿರತೆ ದಾಳಿ

ಮೈಸೂರು: ಹೆಚ್.ಡಿ.ಕೋಟೆ ತಾಲೂಕು ಜಕ್ಕಳ್ಳಿ ಕಾಲೋನಿ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹದೇವ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದೆ. ದಾಳಿಯಲ್ಲಿ ರೈತನಿಗೆ ಗಾಯಗಳಾಗಿದ್ದು ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ SDPI, ನಿಷೇಧಿತ PFI ಮುಖಂಡರ ಮನೆಗಳ ಮೇಲೆ ದಾಳಿ: ಐವರು ವಶಕ್ಕೆ

Published On - 8:29 am, Thu, 13 October 22