ಯೀಜೀ ಸಂಸ್ಥಾಪಕ ಕಾನ್ಯೆ ವೆಸ್ಟ್ ಆಡಿದಾಸ್ ಕಂಪನಿಯ ಎಕ್ಸಿಕ್ಯೂಟಿವ್​ಗಳನ್ನು  ಮೀಟಿಂಗ್​ಗೆ ಕರೆದು ಪೋರ್ನ್ ಮೂವೀ ತೋರಿಸಿದ!!

ಫಿಶ್ ಐ ಲೆನ್ಸ್ ನಲ್ಲಿ ಸೆರೆ ಹಿಡಿಯಲಾಗಿರುವ ವಿಡಿಯೋದಲ್ಲಿ ಅರ್ಧ ವೃತ್ತಾಕಾರದಲ್ಲಿ ಹೊಂದಿಸಲಾಗಿರುವ ಒಂದು ಖಾಲಿ ಖಾಲಿ ಅನಿಸುವ ರೂಮಲ್ಲಿ ಕಪ್ಪು ಬಣ್ಣದ ಸ್ಟೂಲ್ ಗಳ ಮೇಲೆ ಕಾನ್ಯೆ ತನ್ನ ಇಬ್ಬರು ಪ್ರತಿನಿಧಿಗಳು ಮತ್ತು ಆಡಿದಾಸ್ ಎಕ್ಸಿಕ್ಯೂಟಿವ್ ಗಳ ಜೊತೆ ಕೂತಿರುವುದು ಕಾಣುತ್ತದೆ.

ಯೀಜೀ ಸಂಸ್ಥಾಪಕ ಕಾನ್ಯೆ ವೆಸ್ಟ್ ಆಡಿದಾಸ್ ಕಂಪನಿಯ ಎಕ್ಸಿಕ್ಯೂಟಿವ್​ಗಳನ್ನು  ಮೀಟಿಂಗ್​ಗೆ ಕರೆದು ಪೋರ್ನ್ ಮೂವೀ ತೋರಿಸಿದ!!
ಯೀಜೀ ಸಂಸ್ಥಾಪಕ ಕಾನ್ಯೆ ವೆಸ್ಟ್
Follow us
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 13, 2022 | 8:08 AM

ವಾಷಿಂಗ್ಟನ್: ಅಮೆರಿಕದ ಱಪರ್ (rapper), ಗೀತ ರಚನೆಕಾರ, ಫ್ಯಾಶನ್ ಡಿಸೈನರ್ ಮತ್ತು ಯೀಜೀ ಸಂಸ್ಥೆಯ ಸಂಸ್ಥಾಪಕ ಕಾನ್ಯೆ ವೆಸ್ಟ್ (Kanye West) ವಿಖ್ಯಾತ ಶೂ ಮತ್ತು ಕ್ರೀಡಾ ಸಾಮಗ್ರಿ ಕಂಪನಿ ಆಡಿದಾಸ (Adidas) ಎಕ್ಸಿಕ್ಯೂಟಿವ್ ಗಳೊಂದಿಗೆ ನಡೆಸಿದ ಮೀಟಿಂಗೊಂದರಲ್ಲಿ ಪೋರ್ನೋಗ್ರಾಫಿಕ್ ಮೂವಿಯೊಂದನ್ನು ತೋರಿಸಿ ಅವರಿಗೆ ಆಘಾತವನ್ನುಂಟು ಮಾಡಿದ್ದಾನೆ. ಐವರ ಮಧ್ಯೆ ನಡೆದ ಸದರಿ ಮೀಟಿಂಗನ್ನು ಕೆಮೆರಾದಲ್ಲಿ ಸೆರೆಹಿಡಿದು ನಂತರ ಲಾಸ್ಟ್ ವೀಕ್ ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್ ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ ಎಂದು ಪೇಜ್ ಸಿಕ್ಸ್ ವರದಿ ಮಾಡಿದೆ.

ಫಿಶ್ ಐ ಲೆನ್ಸ್ ನಲ್ಲಿ ಸೆರೆ ಹಿಡಿಯಲಾಗಿರುವ ವಿಡಿಯೋದಲ್ಲಿ ಅರ್ಧ ವೃತ್ತಾಕಾರದಲ್ಲಿ ಹೊಂದಿಸಲಾಗಿರುವ ಒಂದು ಖಾಲಿ ಖಾಲಿ ಅನಿಸುವ ರೂಮಲ್ಲಿ ಕಪ್ಪು ಬಣ್ಣದ ಸ್ಟೂಲ್ ಗಳ ಮೇಲೆ ಕಾನ್ಯೆ ತನ್ನ ಇಬ್ಬರು ಪ್ರತಿನಿಧಿಗಳು ಮತ್ತು ಆಡಿದಾಸ್ ಎಕ್ಸಿಕ್ಯೂಟಿವ್ ಗಳ ಜೊತೆ ಕೂತಿರುವುದು ಕಾಣುತ್ತದೆ.

ಪೇಜ್ ಸಿಕ್ಸ್ ವರದಿಯ ಪ್ರಕಾರ ಸ್ವಲ್ಪ ಹೊತ್ತಿನ ನಂತರ ಕ್ಯಾನೆ ತನ್ನ ಫೋನನ್ನು ಆಡಿದಾಸ ಎಕ್ಸಿಕ್ಯೂಟಿವ್ ಗಳಿಗೆ ಕಾಣುವ ಹಾಗೆ ಹಿಡಿಯುವುದರೊಂದಿಗೆ ವಿಡಿಯೋ ಪ್ಲೇ ಆಗುತ್ತದೆ.

ಕೂಡಲೇ ಅವರಲ್ಲೊಬ್ಬ, ‘ಇದು ಪೋರ್ನ್ ಮೂವಿಯೇ?’ ಅಂತ ಕೇಳುತ್ತಾನೆ. ಅವನ ಪ್ರಶ್ನೆಗೆ ಉತ್ತರಿಸುವ ಕ್ಯಾನೆ, ‘ಹೌದು!’ ಅನ್ನುತ್ತಾನೆ.

ಆಗ ಮತ್ತೊಬ್ಬ, ‘ಓ ದೇವ್ರೇ!’ ಅಂತ ಉದ್ಗರಿಸುತ್ತಾನೆ.

ಎಕ್ಸಿಕ್ಯೂಟಿವ್ ಗಳು ಸಿಡಿಮಿಡಿಗೊಂಡವರಂತೆ ಕಂಡರೂ ಕ್ಯಾನೆ ಫೋನನ್ನು ಅವರ ಮುಖಕ್ಕೆ ಹಿಡಿಯುತ್ತಾನೆ.

ಅದಾದ ಮೇಲೆ ಅಲ್ಲಿದ್ದವರಲ್ಲೊಬ್ಬ ‘ಸಾಕು ತೆಗಿಯಯ್ಯ’ ಅಂತ ಜೋರಾಗಿ ಕಿರುಚಿದ ನಂತರ ಮತ್ತೊಬ್ಬ ವ್ಯಕ್ತಿ ಕ್ಯಾನೆ ಕೈಯಿಂದ ಫೋನನ್ನು ಕಸಿದುಕೊಳ್ಳುತ್ತಾನೆ.

ಪೇಜ್ ಸಿಕ್ಸ್ ವರದಿಯ ಪ್ರಕಾರ ಪ್ರಕಾರ, ಎಕ್ಸ್-ರೇಟ್ ನ ನೀಲಿ ಚಿತ್ರವನ್ನು ಅವರಿಗೆ ತೋರಿಸಿದ ಉದ್ದೇಶವು ಸಿನಿಮಾದ ಕಥೆ ಮತ್ತು ಕ್ರೀಡಾ ಉಡುಪುಗಳನ್ನು ತಯಾರಿಸುವುದರ ಜೊತೆಗೆ ಕಾನ್ಯೆಯ ಬಿಲಿಯನ್ ಡಾಲರ್ ಮೊತ್ತದ ಯೀಜೀ ಉತ್ಪಾದನೆಗಳನ್ನೂ ತಯಾರಿಸಿ ಮಾರಾಟ ಮಾಡಲು ಉಸ್ತುವರಿಯನ್ನು ವಹಿಸಿಕೊಂಡಿರುವ ಆಡಿದಾಸ್ ಕಂಪನಿಯ ಜೊತೆ ಸಮಾನಾಂತರವನ್ನು ತೋರಿಸುವುದಾಗಿತ್ತು.

ನಂತರ ಕಾನ್ಯೆ ತನ್ನ ತಂಡದ ಸದಸ್ಯನೊಬ್ಬನೆಡೆ ತೋರಿ ಅಡಿದಾಸ್ ತೋರಿ, ‘ಇವನು ಆಡಿದಾಸ್ ಕಂಪನಿಯ ಸಿಇಒ ಆಗಿದ್ದರೆ ಮಾತ್ರ ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ,’ ಎಂದು ಹೇಳುತ್ತಾನೆ.

‘ಕಂಪನಿಯು ನಿಮ್ಮಿಂದ ತಪ್ಪು ಮಾಡಿಸಿದೆ, ವ್ಯವಹಾರ ಮತ್ತು ಪಾಲುದಾರಿಕೆಯಲ್ಲೂ ನಿಮ್ಮಿಂದ ಪ್ರಮಾದವಾಗಿದೆ,’ ಎಂದು ಹೇಳುವ ಕ್ಯಾನೆ ‘ಈ ವೀಡಿಯೊದ ಸಂಪೂರ್ಣ ತಿರುಳು ಏನು ಅಂತ ಅರ್ಥಮಾಡಿಕೊಳ್ಳಿ. ಇದರಲ್ಲಿನ ಯುವಕ ತನ್ನ ಪ್ರೇಯಸಿಗೆ ಮೋಸ ಮಾಡುತ್ತಾನೆ. ಹಾಗೆಯೇ, ಯುವತಿ ಬೇರೊಬ್ಬನೊಂದಿಗೆ ಮಲಗಿ ತನ್ನ ಮುಯ್ಯಿ ತೀರಿಸಿಕೊಳ್ಳುತ್ತಾಳೆ. ನಾನು ನಿಮಗೆ ಅದನ್ನೇ ಮಾಡಲಿದ್ದೇನೆ, ನಾನು ಮಾಡಲಿರುವುದು ನಿಮ್ಮನ್ನು ದುಸ್ವಪ್ನವಾಗಿ ಕಾಡುತ್ತದೆ,’ ಎಂದು ಕ್ಯಾನೆ ಹೇಳುತ್ತಾನೆ.

‘ಇದು ನಿಮ್ಮ ಅತಿಕೆಟ್ಟ ದುಸ್ವಪ್ನವಾಗಲಿದೆ, ಎಂದು ನೇರವಾಗಿ ಎಕ್ಸಿಕ್ಯೂಟಿವ್ ಕಡೆ ನೋಡುತ್ತಾ ಅವನು ಹೇಳುತ್ತಾನೆ. ‘ನಾನು ನಿಮ್ಮನ್ನು ಥಳಿಸುವುದು ನಿಮ್ಮ ದುಸ್ವಪ್ನವಲ್ಲ. ನಿಮಗೆ ನಾನು ಪೋರ್ನ್ ಮೂವಿಯನ್ನು ತೋರಿದ್ದು ದುಸ್ವಪ್ನವಲ್ಲ. ನಿಮ್ಮೆದಿರು ನಾನು ಕಿರುಚುವುದು ನಿಮ್ಮ ದುಸ್ವಪ್ನವಲ್ಲ, ಯಾಕೆಂದರೆ ನಾವು ಇದನ್ನೆಲ್ಲ ಮಾಡಿಯಾಗಿದೆ,’ ಎಂದು ಕ್ಯಾನೆ ಹೇಳುತ್ತಾನೆ.

ಸಿಇಒ ಆಗಬೇಕೆಂದು ತಾನು ಹೇಳಿದ ವ್ಯಕ್ತಿ ಕಡೆ ಕೈ ತೋರಿಸಿ ಕ್ಯಾನೆ, ‘ನಿಮ್ಮ ದುಸ್ವಪ್ನ ಇವನು,’ ಎನ್ನುತ್ತಾನೆ, ನಂತರ ಇನ್ನೊಬ್ಬನೆಡೆ ಕೈ ತೋರಿಸಿ ‘ಇವನು ನಿಮ್ಮ ದುಸ್ವಪ್ನ ನಂಬರ್ 2,’ ಅನ್ನುತ್ತಾನೆ.

‘ಇದೇನು ನಿನ್ನ ಕನಸೇ ಅಥವಾ ದುಸ್ವಪ್ನವೇ? ಏನು ಮಾಡಲು ನಾವಿಲ್ಲಿ ಸೇರಿದ್ದೇವೆ,’ ಅಂತ ಒಬ್ಬ ಎಕ್ಸಿಕ್ಯೂಟಿವ್ ಕೇಳುತ್ತಾನೆ.

‘ನೀವು ಈಗ ತೀವ್ರ ಸ್ವರೂಪದ ಹೇವರಿಕೆ ಅನುಭವಿಸುತ್ತಿರುವಿರಿ, ನಮಗೆ ಬೇಕಾಗಿರೋದೇ ಅದು. ಯಾರಾದರೂ ಕ್ಯಾನೆಯ ಐಡಿಯಾಗಳನ್ನು ಕದ್ದರೆ, ಅವನ ಸೃಜನಶೀಲತೆ ಕದ್ದರೆ ಅವನ ಕೃತಿಗಳನ್ನು ಕದ್ದರೆ, ನೀವುಗಳು ಅವನ ಮಗುವನ್ನು ಕದ್ದಂತೆ, ಎಂದು ಕ್ಯಾನೆ ತಂಡದ ಒಬ್ಬ ಸದಸ್ಯ ಹೇಳುತ್ತಾನೆ.

‘ಇವೆಲ್ಲ ಅವನ ಮಾನಸಪುತ್ರರು, ಆದರೆ ಅವನ್ನೆಲ್ಲ ನೀವು ಅಪಹರಿಸಿದ್ದೀರಿ,’ ಎಂದು ಅವನು ಹೇಳುತ್ತಾನೆ.

ಯೀಜೀಯಿಂದ ಪ್ರೇರಣೆ ಹೊಂದಿದ ಉತ್ಪಾದನೆಗಳನ್ನು ನೀವು ತಯಾರಿಸಿ ಮಾರುತ್ತಿರುವಿರಿ ಮತ್ತು ನಿಮ್ಮ ಆದಾಯ ಗಣನೀಯವಾಗಿ ಹೆಚ್ಚಿದೆ. ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ, ಕ್ಯಾನೆ ಕೋಪ ಬಂದಿದೆ ಮತ್ತು ಅದು ಸಮರ್ಥನೀಯವಾಗಿದೆ,’ ಎಂದು ಆ ಸದಸ್ಯರ ಹೇಳುತ್ತಾನೆ.

ತನಗೆಷ್ಟು ಕೋಪ ಬಂದಿದೆ ಎಂದು ತೋರಿಸಲು ಕಾನ್ಯೆ ಧಡಾರನೆ ಮೇಲೆದ್ದು ಆ ರೂಮಿಂದ ಹೊರ ನಡೆಯುತ್ತಾನೆ.

ಅಸಲಿಗೆ ಕ್ಯಾನೆ ಆಡಿದಾಸ್ ಕಂಪನಿಯ ಜೂನ್ ನಲ್ಲಿ ಲಾಂಚ್ ಮಾಡಿದ ಅಡಿಲೆಟ್ಟ್ 22 ಸ್ಲೈಡ್ ಬಗ್ಗೆ ವ್ಯಗ್ರಗೊಂಡಿದ್ದಾನೆ. ಅವನ ವಾದವೇನೆಂದರೆ ಅದು ಯೀಜೀ ಸ್ಲೈಡ್ ನ ನಕಲು ಆಗಿದೆ. ಆಡಿದಾಸ ತಯಾರಿಸಿದ ಸ್ಲೈಡ್ ಬಗ್ಗೆ ಕಾನ್ಯೆ, ‘ಆಡಿದಾಸ್ ಸಂಸ್ಥೆಯೇ ತಯಾರು ಮಾಡಿದ ಕೃತ್ರಿಮ ಯೀಜೀ,’ ಎಂದು ಕಾಮೆಂಟ್ ಮಾಡಿದ್ದ.

ಹಿಂದೆ ‘ವ್ಹಾಟ್ ಲೈವ್ಸ್ ಮ್ಯಾಟರ್’ ಟಿ-ಶರ್ಟ್ ಬಗ್ಗೆಯೂ ಗ್ರ್ಯಾಮಿ ಪ್ರಶಸ್ತಿ ವಿಜೇತ ಕಾನ್ಯೆ ವಿವಾದ ಸೃಸ್ಟಿಸಿದ್ದ ಹಿನ್ನೆಲೆಯಲ್ಲಿ ಬೇಸತ್ತಿರುವ ಆಡಿದಾಸ್ ಕಂಪನಿಯು ಅವನೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದ ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಹೇಳಿತ್ತು.

ತಾಜಾ ಸುದ್ದಿ