ಶನಿವಾರ, ಭಾನುವಾರ ನಂದಿಗಿರಿಧಾಮಕ್ಕೆ ಪ್ರವೇಶ ಇಲ್ಲ! ನಿರಾಸೆಯಿಂದ ವಾಪಸ್ ಹೋಗುತ್ತಿರುವ ಪ್ರವಾಸಿಗರು

ಗಿರಿಧಾಮಕ್ಕೆ ಆಗಮಿಸುತ್ತಿರುವ ಪ್ರವಾಸಿಗರನ್ನು ಬೆಟ್ಟದ ಕ್ರಾಸ್ ಬಳಿಯೇ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಅಲ್ಲದೇ ಬ್ಯಾರಿಕೇಡ್ ಹಾಕಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಹೀಗಾಗಿ ನಂದಿಗಿರಿಧಾಮ ನೋಡಲು ಬಂದ ಪ್ರವಾಸಿಗರು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ.

ಶನಿವಾರ, ಭಾನುವಾರ ನಂದಿಗಿರಿಧಾಮಕ್ಕೆ ಪ್ರವೇಶ ಇಲ್ಲ! ನಿರಾಸೆಯಿಂದ ವಾಪಸ್ ಹೋಗುತ್ತಿರುವ ಪ್ರವಾಸಿಗರು
ನಂದಿ ಬೆಟ್ಟ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ (Coronavirus) ರೂಪಾಂತರಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಎರಡು ದಿನಗಳ ಕಾಲ ಪ್ರವೇಶ ನಿರ್ಬಂಧಿಸಲಾಗಿದೆ. ವೀಕೆಂಡ್ ಶನಿವಾರ ಮತ್ತು ಭಾನುವಾರ 2 ದಿನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಮಾಹಿತಿ ಕೊರತೆಯಿಂದ ಪ್ರವಾಸಿಗರು ಇಂದು (ಡಿ.4) ಗಿರಿಧಾಮಕ್ಕೆ ಆಗಮಿಸುತ್ತಿದ್ದರು. ಆದರೆ ಬಂದ್ ಆಗಿರುವುದು ನೋಡಿ ಬಂದ ದಾರಿಯಲ್ಲಿ ವಾಪಸಾಗುತ್ತಿದ್ದಾರೆ.

ಗಿರಿಧಾಮಕ್ಕೆ ಆಗಮಿಸುತ್ತಿರುವ ಪ್ರವಾಸಿಗರನ್ನು ಬೆಟ್ಟದ ಕ್ರಾಸ್ ಬಳಿಯೇ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಅಲ್ಲದೇ ಬ್ಯಾರಿಕೇಡ್ ಹಾಕಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಹೀಗಾಗಿ ನಂದಿಗಿರಿಧಾಮ ನೋಡಲು ಬಂದ ಪ್ರವಾಸಿಗರು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ. ಗಿರಿಧಾಮದ ಅತಿಥಿ ಗೃಹದಲ್ಲಿ ರೂಮ್ ಬುಕಿಂಗ್ ಮಾಡಿದವರಿಗೆ ಮಾತ್ರ ಇಂದು ಮತ್ತು ನಾಳೆ ಅವಕಾಶ ಇರಲಿದೆ.

ಡಿಸೆಂಬರ್ 1ರಿಂದ ವಿಶ್ವವಿಖ್ಯಾತ ಪ್ರವಾಸಿತಾಣ ನಂದಿ ಹಿಲ್ಸ್ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ರಸ್ತೆ ಕೊಚ್ಚಿ ಹೋಗಿ ಬಂದ್ ಆಗಿದ್ದ ನಂದಿಗಿರಿಧಾಮ ಪ್ರವೇಶಕ್ಕೆ ಡಿಸೆಂಬರ್ 1ರಿಂದ ಅವಕಾಶ ಸಿಕ್ಕಿದೆ. ಕಳೆದ ಎರಡುವರೆ ತಿಂಗಳುಗಳ ಕಾಲ ಬೆಟ್ಟಕ್ಕೆ ಹೋಗಲು ಅವಕಾಶವಿರಲಿಲ್ಲ. ಹೀಗಾಗಿ ಪ್ರವಾಸಿಗರಿಗೆ ತೀರ ಬೇಸರವಾಗಿತ್ತು. ಆದರೆ ವೀಕೆಂಡ್ ಬಿಟ್ಟು ಉಳಿದ ದಿನಗಳಲ್ಲಿ ಬೆಟ್ಟಕ್ಕೆ ಹೋಗಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ನಂದಿಗಿರಿಧಾಮ ಬೆಂಗಳೂರಿಗರ ಪಾಲಿಗೆ ವೀಕೆಂಡ್ ಹಾಟ್ಸ್ಪಾಟ್. ಆದರೆ ಭಾರಿ ಮಳೆಗೆ ನಂದಿ ಬೆಟ್ಟದ ರಸ್ತೆ ಮಾರ್ಗ ಬಂದ್ ಆಗಿ ಪ್ರವಾಸಿಗರ ಪಾಲಿಗೆ ನಂದಿ ಬೆಟ್ಟ ದೂರವಾಗಿತ್ತು. ಕೊಚ್ಚಿ ಹೋಗಿದ್ದ ರಸ್ತೆ ಮರು ನಿರ್ಮಾಣ ಕಾರ್ಯ ನವೆಂಬರ್ 11ಕ್ಕೆ ಮುಕ್ತಾಯವಾಗಿತ್ತು.

ಇದನ್ನೂ ಓದಿ

Karnataka Dam Water Level: ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಸೂರ್ಯಗ್ರಹಣ ಸಂಭವಿಸುವ ದಿನವೇ ಶನಿ ಅಮಾವಾಸ್ಯೆ; ಈ ದಿನದ ಮಹತ್ವವೇನು? ಶನಿ ದೋಷದಿಂದ ಮುಕ್ತಿ ಪಡೆಯಲು ಇಲ್ಲಿದೆ ಸೂತ್ರ

Click on your DTH Provider to Add TV9 Kannada