Karnataka Assembly Elections 2023: ಬಿಸಿಲ ಧಗೆಗೆ ಫೀಲ್ಡ್ನಲ್ಲಿರುವ ಚುನಾವಣಾಧಿಕಾರಿಗಳು ಹೈರಾಣಾ, ವಾಹನ ತಪಾಸಣೆ ವೇಳೆ ಸುಸ್ತೋ ಸುಸ್ತು
ಒಂದೆಡೆ ರಣಬಿಸಿಲು ಮತ್ತೊಂದೆಡೆ ರಾಜ್ಯ ವಿದಾನಸಭಾ ಚುನಾವಣೆಯ ರಣಕಣ, ಎರಡರ ಮಧ್ಯೆ ಸಿಲುಕಿರುವ ಚುನಾವಣಾಧಿಕಾರಿಗಳು ರಣಬಿಸಿಲಿಗೆ ಥಂಡಾ ಹೊಡೆದಿದ್ದಾರೆ. ಇನ್ನು ಚೆಕ್ಪೋಸ್ಟ್ ಫ್ಲೈಯಿಂಗ್ ಸ್ಕ್ವಾಡ್ ಗಳು ಸೇರಿದಂತೆ ಫೀಲ್ಡ್ನಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಿಸಿಲಿನ ತಾಪ ತಾಳಲಾರದೆ ಪರದಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದರಂತೆ ಚುನಾವಣಾ ಅಕ್ರಮ ತಡೆಯಲು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಮದ್ಯೆ ಬಿಸಿಲಿನ ಬೇಗೆಯ ಮದ್ಯೆ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹೈರಾಣಾಗಿದ್ದಾರೆ. ಹೌದು ಹೀಗೆ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನಗಳ ತಪಾಸಣೆ ಮಾಡುತ್ತಿರುವುದು ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಚುನಾವಣಾ ನೀತಿ ಸಂಹಿತೆ ಪರಿಪಾಲನೆ ಮಾಡಲು ಅಧಿಕಾರಿಗಳು ಟೊಂಕ ಕಟ್ಟಿ ನಿಂತಿದ್ದು, ಅದಕ್ಕೀಗ ರಣಬಿಸಿಲು ಅಡ್ಡಿ ಪಡಿಸುತ್ತಿದೆ. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದಂತೆ ಬೇಸಿಗೆಯ ಬಿಸಿಲು 40 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗುತ್ತಿದೆ. ಇದರಿಂದ ಕರ್ತವ್ಯನಿರತ ಅಧಿಕಾರಿಗಳು ನೆರಳಲ್ಲಿ ಕುಳಿತುಕೊಳ್ಳಲು ಆಗದೆ, ಬಿಸಿಲಿಗೆ ನಿಲ್ಲಲಾಗದೆ ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಬಿಸಿಲಿನಿಂದ ಬಚಾವ್ ಆಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಚೆಕ್ಪೋಸ್ಟ್ ಬಳಿ ಬಿಸಿಲಿನ ಬೇಗೆಗೆ ಅಧಿಕಾರಿಗಳು ಹೆದರಿದ್ದಾರೆ. ಒಂದೆಡೆ ವಾಹನಗಳ ಸಂಚಾರದಿಂದ ತಾಪಮಾನ ಏರಿಕೆಯಾದರೆ, ಮತ್ತೊಂದೆಡೆ ರಣ ಬಿಸಿಲಿಗೆ ದೇಹವೇ ಕರಗಿ ನೀರಾಗುತ್ತಿದೆ. ಮುಖದ ಮೇಲೆ ನೀರು ಎರೆಚಿದಂತೆ ಬೇವರು ಕೊಡಿಯಾಗಿ ಹರಿಯುತ್ತಿದೆ. ಇತ್ತ ಬಿಸಿಲು ಅಂತ ಶೆಡ್ನಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ಹೋಗುವ ಬರುವ ವಾಹನಗಳ ತಪಾಸಣೆ ಮಾಡಬೇಕು.
ಬಿರು ಬೇಸಿಗೆಯಲ್ಲಿ ಇಷ್ಟೊಂದು ತಾಪಮಾನ ಏರಿಕೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ತಾಪಮಾನ ಏರಿಕೆ ಆಗಿರಲಿಲ್ಲ. ಆದ್ರೆ, ಈ ವರ್ಷ ರಣ ಬಿಸಿಲು ಎರಡು ಪಟ್ಟು ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಚುನಾವಣಾಧಿಕಾರಿಗಳು ಬೆವರು ಹರಿಯುವುದನ್ನು ಲೆಕ್ಕಿಸದೆ ಬಿಸಿಲಿಗೆ ಸೆಡ್ಡು ಹೊಡೆದಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 am, Sun, 23 April 23