ಚಿಕ್ಕಬಳ್ಳಾಪುರದಲ್ಲಿ ಮಗುವನ್ನು ಕಿಡ್ನಾಪ್ ಮಾಡಿ ಹುಬ್ಬಳ್ಳಿಯಲ್ಲಿ ಬಿಟ್ಟು ಹೋದ ಕಿಡ್ನಾಪರ್

ಚಿಕ್ಕಬಳ್ಳಾಫುರದ ಮುರಗಮಲ್ಲ ಗ್ರಾಮದ ಅಮ್ಮಜಾನ್ ಬಾವಜಾನ್ ದರ್ಗಾದಲ್ಲಿ ಎರಡು ವರ್ಷ ನಾಲ್ಕು ತಿಂಗಳ ಗಂಡು ಮಗುವನ್ನು ಅಪಹರಣ ಮಾಡಿದ ಘಟನೆ ನಡೆದಿತ್ತು. ಈ ಬಗ್ಗೆ ಟಿವಿ9 ವರದಿ ಬಿತ್ತರಿಸುತ್ತಿದ್ದಂತೆ ಆರೋಪಿಯು ಮಗುವನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಚಿಕ್ಕಬಳ್ಳಾಪುರದಲ್ಲಿ ಮಗುವನ್ನು ಕಿಡ್ನಾಪ್ ಮಾಡಿ ಹುಬ್ಬಳ್ಳಿಯಲ್ಲಿ ಬಿಟ್ಟು ಹೋದ ಕಿಡ್ನಾಪರ್
ಚಿಕ್ಕಬಳ್ಳಾಪುರದಲ್ಲಿ ಮಗುವನ್ನು ಕಿಡ್ನಾಪ್ ಮಾಡಿ ಹುಬ್ಬಳ್ಳಿಯಲ್ಲಿ ಬಿಟ್ಟು ಹೋದ ಕಿಡ್ನಾಪರ್
Edited By: Rakesh Nayak Manchi

Updated on: Nov 07, 2023 | 3:01 PM

ಚಿಕ್ಕಬಳ್ಳಾಪುರ, ನ.7: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಗ್ರಾಮದ ಅಮ್ಮಜಾನ್ ಬಾವಜಾನ್ ದರ್ಗಾದಲ್ಲಿ ಎರಡು ವರ್ಷ ನಾಲ್ಕು ತಿಂಗಳ ಗಂಡು ಮಗು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದೆ. ಕಿಡ್ನಾಪ್ (Kidnap) ಬಗ್ಗೆ ಟಿವಿ9 ವರದಿ ಬಿತ್ತರಿಸುತ್ತಿದ್ದಂತೆ ಆರೋಪಿಯು ಮಗುವನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಮಗುವಿನ ತಂದೆ ಜಬಿವುಲ್ಲಾ ಟಿವಿ9ಗೆ ಧನ್ಯವಾದ ತಿಳಿಸಿದ್ದಾರೆ.

ನವೆಂಬರ್ 5 ರಂದು ಬೆಂಗಳೂರು ಮೂಲದ ಜಬೀವುಲ್ಲಾ ಹಾಗೂ ಸುಮೈಯಾ ದಂಪತಿಯ ಮಗು ಜಾವೀದ್ ತನ್ನ ಅಜ್ಜ, ಅಜ್ಜಿ ಮತ್ತು ತಾಯಿಯೊಂದಿಗೆ ಮುರುಗಮಲ್ಲ ದರ್ಗಾಕ್ಕೆ ಆಗಮಿಸಿದ್ದಾನೆ. ಮಧ್ಯಾಹ್ನ 3.22 ರ ಸಮಯದಲ್ಲಿ ದರ್ಗಾ ಒಳಗೆ ಹೋಗುತ್ತಿದ್ದಾಗ ಜನಸಂದಣಿ ನಡುವೆ ಮಗುವನ್ನು ಅಪಹರಣ ಮಾಡಲಾಗಿದೆ.

ಇದನ್ನೂ ಓದಿ: ಹಾಸನ: ಬೆಂಗಳೂರಿನ ಕಾಲೇಜು ವಿದ್ಯಾರ್ಥಿಯ ಕಿಡ್ನಾಪ್, ಅರಕಲಗೂಡಿನಲ್ಲಿ ರಕ್ಷಣೆ

ಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಪೋಷಕರು, ಮಗು ಪತ್ತೆ ಮಾಡಿಕೊಡುವಂತೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು.

ಸದ್ಯ ಮಗು ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಮಗುವನ್ನು ಕಳೆದುಕೊಂಡು ದುಃಖದಲ್ಲಿದ್ದ ಪೋಷಕರು ಇದೀಗ ಮಗನನ್ನು ಮರಳಿ ಪಡೆಯುವ ಮೂಲಕ ಸಂತಸಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us