AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tippu Drop: ನಂದಿ ಬೆಟ್ಟದ ಟಿಪ್ಪು ಡ್ರಾಪ್​ ಬಗ್ಗೆ ನಿಮಗೆಷ್ಟು ಗೊತ್ತು? ಹಾಗಂತ ನೀವೇನು ಅದರ ಆಳ ಅಗಲ ತಿಳಿಯುವ ಅಗತ್ಯವಿಲ್ಲ, ಜಸ್ಟ್​ ಕುತೂಹಲಕ್ಕಾಗಿ ಅಷ್ಟೇ

ಕೆಲವರು ಟಿಪ್ಪು ಡ್ರಾಪ್ ನಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗುತ್ತಿದ್ದ ಬಗ್ಗೆ ಟಿವಿ9 ನಲ್ಲಿ ವರದಿ ಬಿತ್ತಾರವಾದ ಕಾರಣ ಯಡಿಯೂರಪ್ಪ ಅವರು 2ನೆಯ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪು ಡ್ರಾಪ್ ಬಳಿ 450 ಮೀ. ಉದ್ದನೆಯ ಇಳಿಜಾರು ಪ್ರದೇಶದಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸುವಂತೆ ಮಾಡಿದರು.

Tippu Drop: ನಂದಿ ಬೆಟ್ಟದ ಟಿಪ್ಪು ಡ್ರಾಪ್​ ಬಗ್ಗೆ ನಿಮಗೆಷ್ಟು ಗೊತ್ತು? ಹಾಗಂತ ನೀವೇನು ಅದರ ಆಳ ಅಗಲ ತಿಳಿಯುವ ಅಗತ್ಯವಿಲ್ಲ, ಜಸ್ಟ್​ ಕುತೂಹಲಕ್ಕಾಗಿ ಅಷ್ಟೇ
ನಂದಿ ಬೆಟ್ಟದ ಟಿಪ್ಪು ಡ್ರಾಪ್​ ಬಗ್ಗೆ ನಿಮಗೆಷ್ಟು ಗೊತ್ತು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 15, 2023 | 5:38 PM

ಚಿಕ್ಕಬಳ್ಳಾಪುರ: ಖ್ಯಾತಿ ಮತ್ತು ಕುಖ್ಯಾತಿಯ ಇತಿಹಾಸವನ್ನು ಒಟ್ಟೊಟ್ಟಿಗೆ ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಮೈಸೂರು ಹುಲಿ ಟಿಪ್ಪು ಸುಲ್ತಾನ್​ ಹೆಸರಿನಲ್ಲಿರುವ ಟಿಪ್ಪು ಡ್ರಾಪ್ (Tipu’s Drop) ಹೆಸರು ಕೇಳಿದರೆ ಸಾಕು, ಅಲ್ಲಿಯ ಪೊಲೀಸರು ಕನಸಿನಲ್ಲೂ ಬೆಚ್ಚಿ ಬೀಳ್ತಿದ್ದಾರೆ. ಅಷ್ಟಕ್ಕೂ ಪೊಲೀಸರಿಗೂ ಟಿಪ್ಪು ಡ್ರಾಪ್ ಗೂ ಏನ್ ಸಂಬಂಧ? ಟಿಪ್ಪು ಡ್ರಾಪ್ ಇತಿಹಾಸವಾದ್ರು ಏನು? ನಂದಿ ಬೆಟ್ಟದಲ್ಲಿರುವ (Nandi Hills) ಆ ಟಿಪ್ಪು ಡ್ರಾಪ್​ ಬಗ್ಗೆ ನಿಮಗೆಷ್ಟು ಗೊತ್ತು? ಹಾಗಂತ ನೀವೇನು ಅಳತೆಯ ಟೇಪು ಇಟ್ಕೊಂಡು ಅದರ ಆಳ ಅಗಲ ತಿಳಿಯುವ ಅಗತ್ಯವಿಲ್ಲ. ಜಸ್ಟ್​ ಕುತೂಹಲಕ್ಕಾಗಿ ತಿಳಿಯುವುದಕ್ಕೆ ಅಷ್ಟೇ. ಇದನ್ನು ಓದಿ! ಟಿಪ್ಪು ಡ್ರಾಪ್ (Tippu Drop) ಎಲ್ಲಿ ಇರೋದು? ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಂದಿಗಿರಿಧಾಮ ಇದೆ. ಗಿರಿಧಾಮದಲ್ಲಿ ಟಿಪ್ಪು ಡ್ರಾಪ್ ಇದೆ. ಚಿಕ್ಕಬಳ್ಳಾಪುರ ನಗರದಿಂದ 20 ಕಿಲೋ ಮೀಟರ್ ದೂರದಲ್ಲಿ ನಂದಿಬೆಟ್ಟ ಇದೆ. ರಾಜಧಾನಿ ಬೆಂಗಳೂರಿನಿಂದ 60 ಕಿಲೋ ಮಿಟರ್ ದೂರದಲ್ಲಿ ನಂದಿಬೆಟ್ಟ ಇದೆ. ಬೆಟ್ಟದ ಶ್ರೀ ಯೋಗನಂದೀಶ್ವರ ದೇವಸ್ಥಾನದ ಹಿಂಭಾಗದಲ್ಲಿ ಟಿಪ್ಪು ಡ್ರಾಪ್ ಇದೆ.

ಟಿಪ್ಪು ಡ್ರಾಪ್ ಇತಿಹಾಸ ಏನು?

ಟಿಪ್ಪು ಆಡಳಿತಾವಧಿಯಲ್ಲಿ ತಪ್ಪಿತಸ್ಥರಿಗೆ ಮರಣ ಶಿಕ್ಷೆ ವಿಧಿಸಿದರೆ, ಇದೇ ಟಿಪ್ಪು ಡ್ರಾಪ್ ನಿಂದ ತಳ್ಳಿ ಅವರನ್ನ ಮರಣ ದಂಡನೆಗೆ ಗುರಿಪಡಿಸಲಾಗುತ್ತಿತ್ತು. ಇಲ್ಲಿಂದ ಯಾವುದೆ ವ್ಯಕ್ತಿಯನ್ನು ತಳ್ಳಿದ್ರೆ ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ. ಇದ್ರಿಂದ ಅಂದಿನ ಕೈದಿ ಅಪರಾಧಿಗಳನ್ನು ನಂದಿಗಿರಿಧಾಮಕ್ಕೆ ತಂದು ದುರ್ಗಮ ಬಂಡೆಯಲ್ಲಿ ತಳ್ಳಿ ಕೊಲ್ಲಲಾಗುತ್ತಿತ್ತು. ಇದ್ರಿಂದ ಈ ಸ್ಥಳಕ್ಕೆ ಟಿಪ್ಪು ಡ್ರಾಪ್ ಎಂದು ಹೆಸರು ಬಂದಿದೆ.

ಆತ್ಮಹತ್ಯೆಯ ತಾಣವಾದ ಟಿಪ್ಪು ಡ್ರಾಪ್

ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ಮೂಲದ, ಬೆಂಗಳೂರಿನ ಬಿಟಿಎಂ ಲೇಔಟ್​ ನಿವಾಸಿ 20 ವರ್ಷದ ಅರುಣ್ ನಂದಿಗಿರಿಧಾಮಕ್ಕೆ ಆಗಮಿಸಿ ಟಿಪ್ಪು ಡ್ರಾಪ್ ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದೆ ರೀತಿ ಕಳೆದ 15 ವರ್ಷಗಳಲ್ಲಿ 70ಕ್ಕೂ ಹೆಚ್ಚು ಜನ ಯುವಕ ಯುವತಿಯರು ಟಿಪ್ಪು ಡ್ರಾಪ್ ನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಕೆಲವರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಇನ್ನು ಕೆಲವರು ಪಾಪ ಪ್ರಾಯಶ್ಚಿತ್ತದಿಂದ, ಸ್ವಯಂಕೃತ ಅಪರಾಧದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಕೆಲವರು ಇಷ್ಟಪಟ್ಟು ಬದುಕಿನ ಅಂತ್ಯದ ಹಾಡು ಹಾಡೋಕೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ಬಂದು ಆತ್ಮಹತ್ಯೆಯ ಹಾದಿ ಹಿಡಿದಿರುವ ಉದಾಹರಣೆಗೂ ಇವೆ.

ಟಿಪ್ಪು ಡ್ರಾಪ್ ಹೆಸರು ಕೇಳಿದ್ರೆ ಪೊಲೀಸರು ಯಾಕೆ ಬೆವರುತ್ತಾರೆ

ಚಿಕ್ಕಬಳ್ಳಾಫುರ ತಾಲೂಕಿನ ನಂದಿಗಿರಿಧಾಮದಲ್ಲಿರುವ ಟಿಪ್ಪು ಡ್ರಾಪ್ ಹೆಸರು ಕೇಳಿದ್ರೆ ಸ್ವತಃ ನಂದಿಗಿರಿಧಾಮ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಿಂತನಿಲುವಲ್ಲೇ ಬೆವರುತ್ತಾರೆ. ಕಾರಣ ಕೆಳಗೆ ಬಿದ್ದ ಶವ ಮೇಲೆ ತರಲು ಹೋಗಿ ಸ್ವಲ್ಪ ಯಾಮಾರಿದ್ರೆ ತಾವೇ ಶವ ಆಗಬೇಕಾಗುತ್ತೆ ಅನ್ನೊ ಭಯ ಕಾಡುತ್ತದೆ. ದಟ್ಟವಾದ ಕಾಡು, ಕಲ್ಲು ಬಂಡೆಗಳ ದುರ್ಗಮ ಹಾದಿಯಲ್ಲಿ ಸಾಗಿ ಜಾಲಿ ಮರಗಳ ಮಧ್ಯೆ ದಾರಿ ಮಾಡಿಕೊಂಡು ಕೆಳಗೆ ಇಳಿಯಬೇಕು. ಇದರಿಂದ ಸಿಬ್ಬಂದಿ ಅಧಿಕಾರಿಗಳು ಟಿಪ್ಪು ಡ್ರಾಪ್ ನಲ್ಲಿ ಬಿದ್ದು ಯಾರು ಸಾಯದಿರಲಿ ಅಂತಾ ದೇವರಲ್ಲಿ ಸದಾ ಪ್ರಾರ್ಥನೆ ಮಾಡುತ್ತಾರೆ.

ಟಿವಿ9 ವರದಿ ಪರಿಣಾಮ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ

ಕಳೆದ ಕೆಲವು ವರ್ಷಗಳಿಂದ ಪದೆ ಪದೆ ಕೆಲವರು ಟಿಪ್ಪು ಡ್ರಾಪ್ ನಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗುತ್ತಿದ್ದ ಬಗ್ಗೆ ಟಿವಿ9 ನಲ್ಲಿ ಪದೆ ಪದೆ ವರದಿ ಬಿತ್ತಾರವಾದ ಕಾರಣ ಬಿ.ಎಸ್. ಯಡಿಯೂರಪ್ಪ ಅವರು ಎರಡನೆಯ ಬಾರಿ ಮುಖ್ಯಮಂತ್ರಿಯಾಗಿದ್ದಾಗ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿ ಟಿಪ್ಪು ಡ್ರಾಪ್ ಬಳಿ 450 ಮೀಟರ್ ಉದ್ದನೆಯ ಇಳಿಜಾರು ಪ್ರದೇಶದಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸುವಂತೆ ಮಾಡಿದರು.

ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ