ನೀರಿನಲ್ಲಿ ಮುಳುಗಿಸಿ ಅಣ್ಣನ ಮಗನನ್ನು ಕೊಂದನಾ ತಮ್ಮ? ಆರೋಪಿಗೆ ಒದ್ದು ಬುದ್ಧಿ ಕಲಿಸಿದ ಸ್ಥಳಿಯರು!
ಸ್ವಂತ ತಮ್ಮನ ವಿರುದ್ದವೇ... ತನ್ನ ಮಗನನ್ನೇ ಕೊಲೆ ಮಾಡಿದ ಆರೋಪವನ್ನು ಮುನೀಂದ್ರ ಮಾಡಿದ್ದಾನೆ. ರಾತ್ರಿಯಿಡಿ ಮಗನಿಗಾಗಿ ಹುಡುಕಾಡಿದ್ರೂ... ಜೊತೆಗಿದ್ದ ತನ್ನ ತಮ್ಮ ಸತೀಶ ಸತ್ಯ ಹೇಳಿಲ್ಲ, ಯಾರೋ ಫ್ರೆಂಡ್ ಜೊತೆ ಹೋದ ಅಂತ ಸುಳ್ಳು ಹೇಳಿದ್ನಂತೆ.
ಆತ 11 ವರ್ಷದ ಬಾಲಕ, ಧಿಡೀರ್ ಅಂತ ನಿನ್ನೆ ನಾಪತ್ತೆಯಾಗಿದ್ದ, ಆದ್ರೆ ಅದೇ ಬಾಲಕ ಇಂದು ಬೆಟ್ಟದ ಮಧ್ಯೆ ನೀರಿನ ಕುಂಟೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸ್ವತಃ ಬಾಲಕನ ಚಿಕ್ಕಪ್ಪನೆ ಮಗನನ್ನು ನೀರಿನಲ್ಲಿ ಮುಳುಗಿ ಕೊಂದ (Murder) ಆರೋಪ (Allegation) ವ್ಯಕ್ತವಾಗಿದೆ. ಮೇಲಿನ ಭಾವಚಿತ್ರದಲ್ಲಿರುವ ಬಾಲಕನ ಹೆಸರು ಅಭಿಷೇಕ. ಇನ್ನೂ ಈಗ 13 ವರ್ಷ ವಯಸ್ಸು, 7ನೇ ತರಗತಿಯ ವಿದ್ಯಾರ್ಥಿ. ಚಿಕ್ಕಬಳ್ಳಾಪುರ (Chikkaballapur) ತಾಲೂಕು ಬಾದಗಾನಹಳ್ಳಿ ನಿವಾಸಿ. ಮುನೀಂದ್ರ ಹಾಗೂ ಮಮತ ದಂಪತಿಯ ಮಗ. ನಿನ್ನೆ ತನ್ನ ಚಿಕ್ಕಪ್ಪ ಸತೀಶ ಜೊತೆ ಹಸು ಮೇಯಿಸಲು ಗ್ರಾಮದ ಹೊರವಲಯಕ್ಕೆ ಹೋಗಿದ್ದ. ನೀರಿನಲ್ಲಿ ಹಸು ಮೈ ತೊಳೆಯಲು ಸತೀಶ ನೀರಿಗೆ ಇಳಿದಿದ್ದಾನೆ. ಆಗ ಅಭಿಷೇಕ ನೀರಿನಲ್ಲಿ ಈಜಾಡಲು ಮುಂದಾಗಿದ್ದಾನೆ. ಆಗ ಬಾಲಕನ ಚಿಕ್ಕಪ್ಪ ಸತೀಶ, ಅಭಿಷೇಕನನ್ನು ನೀರಿನಲ್ಲಿ ಒದ್ದಿದ್ದಾನೆ. ಅದರಿಂದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನಂತರ ಜೊತೆಗಿದ್ದ ಮೃತ ಬಾಲಕನ ಸ್ನೇಹಿತ ಶ್ರೀನಿವಾಸ್ ಗೂ ಪ್ರಾಣ ಬೆದರಿಕೆ ಹಾಕಿ, ಸಾವಿನ ವಿಷಯ ತಿಳಿಸದಂತೆ ಮಾಡಿದ್ದಾನೆ. ಇತ್ತ ಮೃತ ಬಾಲಕನ ತಂದೆ ತಾಯಿ ಬಂಧು ಬಳಗ, ರಾತ್ರಿಯಿಡಿ ಹುಡುಕಾಡಿದ್ರೂ ಮೃತ ಬಾಲಕನ ಸುಳಿವು ಸಿಕ್ಕಿಲ್ಲ. ನಂತರ ಸತ್ಯ ತಿಳಿದು ಸತೀಶನನ್ನು ಹಿಡಿದು ಒದೆ ಕೊಟ್ಟಿದ್ದಾರೆ (Brother).
ಸ್ವಂತ ತಮ್ಮನ ವಿರುದ್ದವೇ… ತನ್ನ ಮಗನನ್ನೇ ಕೊಲೆ ಮಾಡಿದ ಆರೋಪವನ್ನು ಮುನೀಂದ್ರ ಮಾಡಿದ್ದಾನೆ. ರಾತ್ರಿಯಿಡಿ ಮಗನಿಗಾಗಿ ಹುಡುಕಾಡಿದ್ರೂ… ಜೊತೆಗಿದ್ದ ತನ್ನ ತಮ್ಮ ಸತೀಶ ಸತ್ಯ ಹೇಳಿಲ್ಲ, ಯಾರೋ ಫ್ರೆಂಡ್ ಜೊತೆ ಹೋದ ಅಂತ ಸುಳ್ಳು ಹೇಳಿದ್ನಂತೆ. ಇದ್ರಿಂದ ಸತೀಶನ ಮೇಲೆ ಬಲವಾದ ಅನುಮಾನ ವ್ಯಕ್ತವಾಗಿದೆ. ಆದ್ರೂ ಸತೀಶ ಹೇಳೋದೆ ಬೇರೆ, ತಾನು ನೀರಿನಲ್ಲೆ ಹಸು ಮೈ ತೊಳೆಯುತ್ತಿದ್ದೆ, ನೀರಿನಲ್ಲಿ ತನ್ನ ಮಗ ಜಂಪ್ ಹೊಡೆದ, ಆ ಮೇಲೆ ಏನಾಗಿದೆಯೊ ಗೊತ್ತಿಲ್ಲ ಎನ್ನುತ್ತಿದ್ದಾನೆ.
ಇನ್ನು… ಸತೀಶ್ ಸಹ ಅಣ್ಣ ಮುನೀಂದ್ರ ಮನೆಯಲ್ಲಿ ವಾಸವಾಗಿದ್ದನಂತೆ. ಆದ್ರೆ ಘಟನೆ ನಡೆದ ನಂತರ ಮನೆಗೆ ಬಂದ ಸತೀಶ್ ಯಾರಿಗೂ ವಿಷಯ ತಿಳಿಸಿರಲಿಲ್ಲ.. ಕೊನೆಗೆ ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಂದಿದ್ದ ಸತೀಶ್ ಮೇಲೆ ಸಂಬಂಧಿಕರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು ಒಂದೆಡೆಯಾದ್ರೆ… ಮತ್ತೊಂದೆಡೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಸತೀಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ