AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಚಿಕ್ಕಬ್ಬಳ್ಳಾಪುರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ; ನಂದಿಗಿರಿಧಾಮ, ಸ್ಕಂದಗಿರಿ ಬೆಟ್ಟಕ್ಕೆ ನಿರ್ಬಂಧ

ಇಂದು (ಜು.03) ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಇಂದು ನಂದಿಬೆಟ್ಟ, ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.

ಇಂದು ಚಿಕ್ಕಬ್ಬಳ್ಳಾಪುರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ; ನಂದಿಗಿರಿಧಾಮ, ಸ್ಕಂದಗಿರಿ ಬೆಟ್ಟಕ್ಕೆ ನಿರ್ಬಂಧ
ರಾಷ್ಟ್ರಪತಿ ದ್ರೌಪದಿ ಮುರ್ಮು
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ವಿವೇಕ ಬಿರಾದಾರ|

Updated on:Jul 03, 2023 | 9:10 AM

Share

ಚಿಕ್ಕಬಳ್ಳಾಪುರ: ಇಂದು (ಜು.03) ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಇಂದು ನಂದಿಗಿರಿಧಾಮ, ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ. ಭದ್ರತೆಯ ಕಾರಣಕ್ಕೆ ನಂದಿಗಿರಿಧಾಮ ಮತ್ತು ಸ್ಕಂದಗಿರಿ ಬೆಟ್ಟಗಳಿಗೆ ಸಾರ್ವಜನಿಕರ ಪ್ರವೇಶವನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 144(3)ರ ಅಡಿಯಲ್ಲಿ ನಿಷೇಧಿಸಲಾಗಿದೆ.

ಅಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ  ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ವ್ಯಾಪ್ತಿಯ  ಗಣಿಗಾರಿಕೆ ಸ್ಥಗಿತಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್​​ಪಿ​​​​ ವಿ.ಕೆ.ವಾಸುದೇವ್ ಸೂಚನೆ ನೀಡಿದ್ದಾರೆ. ರಾಷ್ಟ್ರಪತಿಗಳ ಭದ್ರತೆಗಾಗಿ ಎಸ್​ಪಿ ಡಿ.ಎಲ್.ನಾಗೇಶ ನೇತೃತ್ವದಲ್ಲಿ ಮೂವರು ಎಸ್​ಪಿ, 10 ಡಿವೈಎಸ್​ಪಿ, 28 ಇನ್ಸ್​ಪೆಕ್ಟರ್​ಗಳು, 60 ಸಬ್ ಇನ್ಸ್​ಪೆಕ್ಟರ್, 7 ಡಿಎಆರ್ ತುಕಡಿ, 3 KSRP ತುಕಡಿ ಒಟ್ಟು 700 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಮಧ್ಯಾಹ್ನ  ಹೆಲಿಕಾಪ್ಟರ್​ ಮೂಲಕ ಮುದ್ದೇನಹಳ್ಳಿಗೆ ಭೇಟಿ

ದ್ರೌಪದಿ ಮುರ್ಮು ಅವರು ದೆಹಲಿಯಿಂದ ಐಎಎಫ್​​ಎಂಐ-17 ವಿಶೇಷ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 3.55ಕ್ಕೆ ಹೆಲಿಕಾಪ್ಟರ್​ ಮೂಲಕ ಮುದ್ದೇನಹಳ್ಳಿಗೆ ತೆರಳುತ್ತಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: 112 ಅಡಿ ಎತ್ತರದ ಆದಿಯೋಗಿ ನೋಡಲು ವೀಕೆಂಡ್​ನಲ್ಲಿ ಹರಿದು ಬಂದ ಜನಸಾಗರ

ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ (University Convocation Program) ಭಾಗಿಯಾಗಲಿದ್ದಾರೆ. ಘಟಿಕೋತ್ಸವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರೊ.ಅಜಯ್ ಕೆ.ಸೂದ್​, ಸಂಗೀತ ಮತ್ತು ಕಲೆ ವಿಭಾಗದಲ್ಲಿ ಡಾ.ಆರ್.ಕೆ.ಪದ್ಮನಾಭ, ಕ್ರೀಡೆ ಮತ್ತು ದೇಹದಾರ್ಢ್ಯತೆ ವಿಭಾಗದಲ್ಲಿ ಪುಲ್ಲೇಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಡಾ.ಪ್ರತಿಮಾ ಮೂರ್ತಿ, ಶಿಕ್ಷಣ ವಿಭಾಗದಲ್ಲಿ ಪ್ರೊ.ವಿಜಯ್ ಶಂಕರ್ ಶುಕ್ಲಾ, ಸಮಾಜಸೇವೆ ವಿಭಾಗದಲ್ಲಿ ತುಳಸಿಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:00 am, Mon, 3 July 23