KRIDL Scam: ಟಿವಿ 9 ಕನ್ನಡ ಡಿಜಿಟಲ್ ಫಲಶೃತಿ: ಕೆಆರ್‌ಐಡಿಎಲ್ ಹಗರಣಗಳ ಸಮಗ್ರ ತನಿಖೆಗೆ ಆದೇಶ
ಇದು ಟಿವಿ 9 ಕನ್ನಡ ಡಿಜಿಟಲ್ ಸರಣಿ ವರದಿ ಫಲಶೃತಿ. ಕೆಆರ್‌ಐಡಿಎಲ್ ಹಗರಣಗಳ ಬಗ್ಗೆ ಸರಣಿ ವರದಿ ಪ್ರಸಾರ ಹಿನ್ನೆಲೆ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರು ಸಮಗ್ರ ತನಿಖೆ ನಡೆಸಿ ವರದಿ ನೀಡಲು ಇಂದು ಸೋಮವಾರ ಆದೇಶ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಕೆಆರ್‌ಐಡಿಎಲ್ (KRIDL) ಕೇಂದ್ರ ಕಛೇರಿಯ ಮುಖ್ಯ ಅಭಿಯಂತರರಿಗೆ ಆದೇಶ ನೀಡಲಾಗಿದೆ.
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 4: ಇದು ಟಿವಿ 9 ಕನ್ನಡ ಡಿಜಿಟಲ್ ಸರಣಿ ವರದಿ ಫಲಶೃತಿ. ಕೆಆರ್‌ಐಡಿಎಲ್ ಹಗರಣಗಳ ಬಗ್ಗೆ ಸರಣಿ ವರದಿ ಪ್ರಸಾರ ಹಿನ್ನೆಲೆ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರು ಸಮಗ್ರ ತನಿಖೆ ನಡೆಸಿ ವರದಿ ನೀಡಲು ಇಂದು ಸೋಮವಾರ ಆದೇಶ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಕೆಆರ್‌ಐಡಿಎಲ್ (KRIDL) ಕೇಂದ್ರ ಕಛೇರಿಯ ಮುಖ್ಯ ಅಭಿಯಂತರರಿಗೆ ಆದೇಶ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ (Sidlaghatta) ನಡೆದಿರುವ ಕಾಮಗಾರಿ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು (Inquiry report) ಆದೇಶಿಸಲಾಗಿದೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಕೆಆರ್‌ಐಡಿಎಲ್‌ನಲ್ಲಿ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದ ಲೆಕ್ಕಶೀರ್ಷಿಕೆ 50:54ರ ಯೋಜನೆಯಡಿಯಲ್ಲಿ ನಡೆದಿರುವ ಹಗರಣಗಳು ಇವಾಗಿವೆ. ಕಳೆದ ಒಂದು ವಾರದಿಂದ ದಾಖಲೆಗಳ ಸಮೇತ ಟಿವಿ 9 ಈ ಕುರಿತು ಸಮಗ್ರ ವರದಿ ಪ್ರಸಾರ ಮಾಡಿತ್ತು.
ವರದಿಗಳ ವಿವರ ಇಲ್ಲಿದೆ: