AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC ಡಿಪೋ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಹೇಳಿ ಪಂಗನಾಮ, ವಿದ್ಯಾವಂತ ನಿರುದ್ಯೋಗಿಗಳಿಂದ ಲಕ್ಷ-ಲಕ್ಷ ಹಣ ವಸೂಲಿ

KSRTC Recruitment: ತಾನು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರ ಬಳಿ ಚಾಲಕನಾಗಿದ್ದೇನೆ. ಹಾಗಾಗಿ, ಸಾಹೇಬರ ಖೋಟಾದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್‍ಗಳ ಹುದ್ದೆಗಳನ್ನು ಕೊಡಿಸುತ್ತೇನೆಂದು ನಂಬಿಸಿದ ವ್ಯಕ್ತಿಯೋರ್ವ ನಿರುದ್ಯೋಗಿಗಳಿಂದ ಲಕ್ಷ-ಲಕ್ಷ ಹಣ ಪೀಕಿ ಹುದ್ದೆಯೂ ಇಲ್ಲ... ಹಣವನ್ನು ವಾಪಸ್ಸು ಕೊಡದೇ ಪಂಗನಾಮ ಹಾಕಿರುವ ಪ್ರಕರಣ ನಡೆದಿದೆ.

KSRTC ಡಿಪೋ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಹೇಳಿ ಪಂಗನಾಮ, ವಿದ್ಯಾವಂತ ನಿರುದ್ಯೋಗಿಗಳಿಂದ ಲಕ್ಷ-ಲಕ್ಷ ಹಣ ವಸೂಲಿ
KSRTC ಡಿಪೋ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಹೇಳಿ ಪಂಗನಾಮ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​|

Updated on: Oct 30, 2023 | 5:21 PM

Share

ಚಿಕ್ಕಬಳ್ಳಾಪುರ, ಅಕ್ಟೋಬರ್​ 30: ತಾನು ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರ ಬಳಿ ಚಾಲಕನಾಗಿದ್ದೇನೆ. ಹಾಗಾಗಿ, ಸಾಹೇಬರ ಖೋಟಾದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್‍ಗಳ ಹುದ್ದೆಗಳನ್ನು (KSRTC Recruitment) ಕೊಡಿಸುತ್ತೇನೆಂದು ನಂಬಿಸಿದ ವ್ಯಕ್ತಿಯೋರ್ವ ವಿದ್ಯಾವಂತ ನಿರುದ್ಯೋಗಿಗಳಿಂದ (Youth) ಲಕ್ಷ-ಲಕ್ಷ ರೂಪಾಯಿ ಹಣ ಪೀಕಿ ಹುದ್ದೆಯೂ ಇಲ್ಲ… ಹಣವನ್ನು ವಾಪಸ್ಸು ಕೊಡದೇ ಪಂಗನಾಮ (Cheating) ಹಾಕಿರುವ ಘಟನೆ ನಡೆದಿದೆ.

ಯಾರು-ಯಾರಿಗೆ ಪಂಗನಾಮ ಹಾಕಿದ್ದಾರೆ?

ಬೆಂಗಳೂರಿನ ಕೋಗಿಲು ಕ್ರಾಸ್ ಬಳಿ ಇರುವ ಮಾರುತಿ ನಗರ, 1ನೇ ಮುಖ್ಯರಸ್ತೆ, 17ನೇ ಅಡ್ಡರಸ್ತೆ ಇಲ್ಲಿನ ವಾಸಿ ನರಸಿಂಹಪ್ಪ ಬಿನ್ ಸುಬ್ಬಣ್ಣ ಎನ್ನುವ ವ್ಯಕ್ತಿ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿಯ ದಲಿತ ಮುಖಂಡ ಎ.ಪಿ. ಪೂಜಪ್ಪ ಎಂಬುವವರ ಬಳಿ ಆಗಮಿಸಿ, ತಾನು ಕೆ.ಎಸ್.ಆರ್.ಟಿ.ಸಿ. ಕೇಂದ್ರ ಕಛೇರಿಯ ಎಂ.ಡಿ.ಯವರ ಕಾರು ಚಾಲಕನಾಗಿದ್ದು, ಸಾಹೇಬರ ಖೋಟದಲ್ಲಿ 20 ಜನರಿಗೆ ಡಿಪೋ ಮ್ಯಾನೇಜರ್ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿದ್ದಾನೆ. ಈತನ ಮಾತನ್ನು ನಂಬಿದ ಪೂಜಪ್ಪ ತನಗೆ ಬೇಕಾದ ಪರಿಚಯಸ್ಥರಿಂದ ಮುಂಗಡ ಹಣವಾಗಿ ತಲಾ 5 ಲಕ್ಷ ರೂಪಾಯಿಗಳಂತೆ ಹಣವನ್ನು ನರಸಿಂಹಪ್ಪನಿಗೆ ಕೊಡಿಸಿದ್ದಾನೆ.

Also Read: ದೇವರ ದರ್ಶನಕ್ಕೆ ಬಂದು ಸೆಲ್ಪಿಗೆ ಮುಗಿಬೀಳುತ್ತಿರುವ ಭಕ್ತರು, ಭಕ್ತರ ಉದ್ಧಟತನಕ್ಕೆ ಹೈರಾಣಾದ ಅರ್ಚಕರು, ಭಕ್ತರು!

ಯಾವಾಗ ಹಣ ಕೊಡಲಾಗಿದೆ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಎ.ವಿ. ಪೂಜಪ್ಪ ಚಿಂತಾಮಣಿ ನಿವಾಸಿಗಳಾದ ಎಂ. ಮನೋಜ್‍ಕುಮಾರ್ ಹಾಗೂ ಎಂ. ಸಂದೀರ್​​ ಅವರಿಂದ ಹಣ ಪಡೆದು ದಿನಾಂಕ 02-12-2021 ರಂದು ನರಸಿಂಹಪ್ಪ ಎನ್ನುವ ವ್ಯಕ್ತಿಗೆ 10 ಲಕ್ಷ ರೂಪಾಯಿಗಳನ್ನು ನೀಡಿದ್ದಾನೆ.

ಹುದ್ದೆಯೂ ಇಲ್ಲ ಹಣವೂ ಇಲ್ಲ ದೂರು ದಾಖಲು

ಕೆಎಸ್‍ಆರ್‍ಟಿಸಿ ಎಂ.ಡಿ. ಅವರ ಚಾಲಕನೆಂದಿರುವ ನರಸಿಂಹಪ್ಪ ಎ.ವಿ.ಪೂಜಪ್ಪನಿಂದ ಹಣ ಪಡೆದು ಒಂದೂವರೆ ವರ್ಷವಾಗಿದೆ. ಇದರಿಂದ ಅನುಮಾನಗೊಂಡ ಪೂಜಪ್ಪ ನರಸಿಂಹಪ್ಪನನ್ನು ಪ್ರಶ್ನಿಸಿದರೆ 2 ಡಿಪೋ ಮ್ಯಾನೇಜರ್ ಹುದ್ದೆಗಳಿಗೆ ನಿಮ್ಮ ಕಡೆಯವರು ಆಯ್ಕೆಯಾಗಿದ್ದಾರೆ. ನೇಮಕಾತಿ ಪತ್ರ ಬಂದ ತಕ್ಷಣ ತಿಳಿಸುತ್ತೇನೆ, ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ತಿಳಿಸಿ ಎಂದು ಕಾಲಹರಣ ಮಾಡಿದ್ದಾನೆ.

ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ FIR

ಇದರಿಂದ ಮತ್ತಷ್ಟು ಅನುಮಾನಗೊಂಡ ಎ.ವಿ.ಪೂಜಪ್ಪ ಇದೊಂದು ವಂಚನೆಯ ಪುರಾಣವೆಂದು ಹಣ ನೀಡಿದವರ ಪರವಾಗಿ ಸ್ವತಃ ತಾನೇ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ನರಸಿಂಹಪ್ಪ ವಿರುದ್ಧ ಐಪಿಸಿ ಸೆಕ್ಷನ್ 406, 420 ರಂತೆ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?