AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devanahalli-Chikkaballapur Accidents: ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ನಿರಂತರ ಅಪಘಾತಗಳು: ಸಮಸ್ಯೆ ಏನು? ಬ್ರೇಕ್​ ಹಾಕುವವರು ಯಾರು?

ಸಂಚಾರ ದಟ್ಟಣೆ ಜೊತೆಗೆ ಹೆದ್ದಾರಿ ಬದಿಯಲ್ಲೆ ಬೃಹತ್ ಲಾರಿಗಳನ್ನು ನಿಲ್ಲಿಸುತ್ತಿದ್ದಾರೆ. ಹಿಂದಿನಿಂದ ಬರುವ ವಾಹನ ಸವಾರರು ಹೀಗೆ ನಿಂತ ಲಾರಿಗಳಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗುತ್ತಿದ್ದಾರೆ. ಸಂಚಾರಿ ಪೊಲೀಸರಾಗಲಿ, ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಯಾಗಲಿ ಎಚ್ಚೆತ್ತುಕೊಂಡಿಲ್ಲ. ಒಟ್ಟಾರೆ ನೂರಾರು ರೂಪಾಯಿ ಟೋಲ್ ಶುಲ್ಕ ಕಟ್ಟಿ ವಾಹನ ಸವಾರರು ಹೆದ್ದಾರಿಗಿಳಿಯುತ್ತಿದ್ರು ಅವೈಜ್ಞಾನಿಕವಾಗಿ ರಸ್ತೆಯಲ್ಲೇ ನಿಲ್ಲುತ್ತಿರುವ ವಾಹನಗಳಿಂದ ಜನ ಜೀವ ಕಳೆದುಕೊಳ್ತಿದ್ದಾರೆ.

Devanahalli-Chikkaballapur Accidents: ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ನಿರಂತರ ಅಪಘಾತಗಳು: ಸಮಸ್ಯೆ ಏನು? ಬ್ರೇಕ್​ ಹಾಕುವವರು ಯಾರು?
ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ನಿರಂತರ ಅಪಘಾತಗಳು: ಸಮಸ್ಯೆ ಏನು?
ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​|

Updated on: Oct 30, 2023 | 9:15 AM

Share

ಆ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೆ ನಿಂತಿದ್ದ ಲಾರಿಗೆ ಸುಮೋ ಡಿಕ್ಕಿ ಹೊಡೆದು 13 ಜನ ಜೀವ ಕಳೆದುಕೊಂಡಿದ್ರು. ಆದ್ರೆ ಇಷ್ಟಾದರೂ ಅಧಿಕಾರಿಗಳು, ಪೊಲೀಸರು ಮಾತ್ರ ಎಚ್ಚೆತ್ತುಕೊಳ್ಳದೆ ಹಾಗೆ ಗಾಢ ನಿದ್ದೆಯಲ್ಲಿದ್ದು ಇದೀಗ ಆ ಹೆದ್ದಾರಿಯಲ್ಲಿ (Highway) ಸಂಚಾರ ಮಾಡಬೇಕು ಅಂದ್ರೆ ಜೀವ ಕೈಯಲ್ಲಿಹಿಡಿದು ಸಂಚರಿಸುವಂತಹ ಸ್ಥಿತಿ ವಾಹನ ಸವಾರರಿಗೆ ನಿರ್ಮಾಣವಾಗಿದೆ. ಅದು ಯಾಕೆ ಅನ್ನೋದನ್ನ ನೀವೇ ನೋಡಿ. ಅಪಘಾತ, ಅಪಘಾತ, ಅಪಘಾತ… ವೀಕೆಂಡ್ ಬಂತು ಅಂದ್ರೆ ಸಾಕು ಈ ಹೆದ್ದಾರಿಯಲ್ಲಿ ಇತ್ತೀಚೆಗೆ ಕಾಣಿಸುವ ರಣಭೀಕರ ದೃಶ್ಯಗಳಿವು. ಅಂದಹಾಗೆ ಇಂತಹ ಡೆಡ್ಲಿ ಅಪಘಾತ ಹಾಗೂ ಅಮಾಯಕ ಜೀವಗಳ ಬಲಿಗೆ ಕಾರಣವಾಗಿರುವುದು ನಮ್ಮದೆ ಸಿಲಿಕಾನ್ ಸಿಟಿ ಹೊರವಲಯದ ಕೆಂಪೇಗೌಡ ಏರ್ಪೋಟ್ ಮೂಲಕ ಹಾದು ಹೋಗಿರುವ ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ (Devanahalli-Chikkaballapur Road Accidents).

ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರ ಮಾರ್ಗವಾಗಿ ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ ಹಾದು ಹೋಗಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಆದ್ರೆ ಸಾವಿರಾರು ವಾಹನಗಳು ಸಂಚಾರ ಮಾಡ್ತಿದ್ರು ಒಂದು ಬದಿಯ ರಸ್ತೆಯಲ್ಲಿ 2 ಪಥಗಳು ಮಾತ್ರ ಇರುವ ಕಾರಣ ವೀಕೆಂಡ್ ಬಂದ್ರೆ ಸಾಕು ಹೈವೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತೆ.

ಈ ಸಂಚಾರ ದಟ್ಟಣೆ ಜೊತೆಗೆ ಹೆದ್ದಾರಿ ಬದಿಯಲ್ಲೆ ಬೃಹತ್ ಸಿಮೆಂಟ್ ಹಾಗೂ ಸರಕು ಸಾಗಾಣಿಕೆ ಲಾರಿಗಳನ್ನು ನಿಲ್ಲಿಸುತ್ತಿದ್ದಾರೆ. ಆದರೆ ಹಿಂದಿನಿಂದ ಬರುವ ವಾಹನ ಸವಾರರು ಹೀಗೆ ನಿಂತ ಲಾರಿಗಳಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗುತ್ತಿದ್ದಾರೆ. ಇದೇ ರೀತಿ ಮೊನ್ನೆಯಷ್ಟೆ ಚಿಕ್ಕಬಳ್ಳಾಪುರ ಬಳಿ 13 ಜನ ಹೆದ್ದಾರಿಯಲ್ಲಿ ಸಾವನ್ನಪಿದರೂ ಸಂಚಾರಿ ಪೊಲೀಸರಾಗಲಿ, ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಯಾಗಲಿ ಎಚ್ಚೆತ್ತುಕೊಂಡಿಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಚಿಕ್ಕಬಳ್ಳಾಪುರ ಬಳಿ 13 ಜನ ಸಾವನ್ನಪಿದ ನಂತರ ಇದೇ ರಸ್ತೆಯಲ್ಲಿ ಕಳೆದ ಶುಕ್ರವಾರ ನಿಂತಿದ್ದ ಲಾರಿಗೆ ಬೈಕ್ ಮತ್ತು ಗೂಡ್ಸ್ ವಾಹನ ಡಿಕ್ಕಿಯಾಗಿ ಇಬ್ಬರು ದುರ್ಮಾರಣಕ್ಕೀಡಾಗಿದ್ರು. ಜೊತೆಗೆ ಕೆಲವೊಮ್ಮೆ ಅತಿವೇಗದಲ್ಲಿ ಬರುವ ಖಾಸಗಿ ಬಸ್ಗಳು ಸಹ ಒವರ್ ಟೇಕ್ ಮಾಡುವ ಭರದಲ್ಲಿ ಹೆದ್ದಾರಿ ಬದಿಯಲ್ಲಿನ ಲಾರಿಗಳಿಗೆ ಟಚ್ ಆಗಿ ಪಲ್ಟಿಯಾಗಿವೆ. ಹೀಗಾಗಿ ಈಗಾಗಲೆ ಕಳೆದ ಕೆಲ ತಿಂಗಳುಗಳಲ್ಲೆ 20 ಕ್ಕೂ ಅಧಿಕ ಜನ ಅಪಘಾತಗಳಿಂದ ಪ್ರಾಣ ಕಳೆದುಕೊಂಡಿದ್ದು ಏರ್ಪೋಟ್ ಸಂಚಾರಿ ಪೊಲೀಸರು ಕ್ರಮ ಕೈಗೊಳ್ತಿಲ್ಲ ಅಂತ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read: ಬಸ್ ಲೇಟಾಗತ್ತೆ ಅಂತಾ ಸುಮೋ ಗಾಡಿ ಹತ್ತಿದ್ದೇ ಬಂತು, ಅದು ಯಮ ಧರ್ಮರಾಯನ ವಾಹನವಾಗಿತ್ತು! ಏನೆಲ್ಲಾ ನಡೆಯಿತು ಅಲ್ಲಿ? ಸಮಗ್ರ ಚಿತ್ರಣ ಇಲ್ಲಿದೆ

ಒಟ್ಟಾರೆ ನೂರಾರು ರೂಪಾಯಿ ಟೋಲ್ ಶುಲ್ಕ ಕಟ್ಟಿ ವಾಹನ ಸವಾರರು ಹೆದ್ದಾರಿಗಿಳಿಯುತ್ತಿದ್ರು ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ನಿಲ್ಲುತ್ತಿರುವ ವಾಹನಗಳಿಂದ ಅಮಾಯಕರು ಜೀವ ಕಳೆದುಕೊಳ್ತಿದ್ದಾರೆ. ಇನ್ನಾದ್ರು ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಸಂಚಾರಿ ಪೊಲೀಸರು ಎಚ್ಚೆತ್ತು ಹೆದ್ದಾರಿ ಬದಿಯಲ್ಲಿನ ಲಾರಿಗಳನ್ನ ತೆರವುಗೊಳಿಸುವ ಮೂಲಕ ಅಪಘಾತಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಬೇಕಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!