Karnataka Rain: ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಇಲ್ಲಿವರೆಗೆ 44 ಮನೆಗಳು ನೆಲಸಮ; ಮಳೆ ವಿವರ ಹೀಗಿದೆ

| Updated By: ವಿವೇಕ ಬಿರಾದಾರ

Updated on: Jul 10, 2022 | 9:14 PM

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜುಲೈ 1ರಿಂದ ಜುಲೈ 10ರವರೆಗೆ ಒಟ್ಟು 44 ಮನೆಗಳು ಕುಸಿದಿವೆ.

Karnataka Rain: ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಇಲ್ಲಿವರೆಗೆ 44 ಮನೆಗಳು ನೆಲಸಮ;  ಮಳೆ ವಿವರ ಹೀಗಿದೆ
ಸಾಂಧರ್ಬಿಕ ಚಿತ್ರ
Image Credit source: AskGif
Follow us on

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ವರುಣನ (Rain) ಆರ್ಭಟ ಮುಂದುವರೆದಿದ್ದು, ಜುಲೈ 1ರಿಂದ ಜುಲೈ 10ರವರೆಗೆ ಒಟ್ಟು 44 ಮನೆಗಳು (House) ಕುಸಿದಿವೆ. ಸಂಪೂರ್ಣವಾಗಿ  8 ಮನೆಗಳು ಕುಸಿದಿವೆ. ಭಾಗಶಃ 36 ಮನೆಗಳು ಕುಸಿದಿವೆ. 132 ವಿದ್ಯುತ್ ಕಂಬಗಳು (Street light) ಮುರಿದು ಬಿದ್ದಿವೆ. 22 ವರ್ಷದ ಪ್ರಿಯಾಂಕ  ಎಂಬುವರು ಸಾವನ್ನಪ್ಪಿದ್ದಾರೆ.‌ ಹಳ್ಳದಲ್ಲಿ 6 ವರ್ಷದ ಬಾಲಕಿ ಕೊಚ್ಚಿ ಹೋಗಿದ್ದು,  ಬಾಲಕಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಅಂದಾಜು  ಸಣ್ಣ ಹಾಗೂ ದೊಡ್ಡ ಪ್ರಮಾಣದಲ್ಲಿ  35ಕ್ಕೂ ಹೆಚ್ಚು ಬೆಟ್ಟಗುಡ್ಡಗಳು ಕುಸಿದಿವೆ.

ಚಿಕ್ಕಮಗಳೂರು ಮಳೆ ವಿವರ, ಜುಲೈ 1ರಿಂದ ಇಂದಿನವರೆಗೆ 

1. ಚಿಕ್ಕಮಗಳೂರು ತಾಲೂಕು:  ವಾಡಿಕೆ ಮಳೆ 334.1 ಮಿ.ಮೀ ಆಗಿರುವ ಮಳೆ  867.1 ಮಿ.ಮೀ

ಇದನ್ನೂ ಓದಿ
Karnataka Rain: ಕೊಡಗು ಜಿಲ್ಲೆಯಲ್ಲಿ 12 ಕ್ಕೂ ಅಧಿಕ ಕಡೆಗಳಲ್ಲಿ ಭೂ ಕುಸಿತ; 50 ಮನೆಗಳಿಗೆ ಹಾನಿ
Karnataka Rain: ಯಾವೆಲ್ಲಾ ಜಿಲ್ಲೆಗಳಿಗೆ ಅಲರ್ಟ್​​ ಘೋಷಣೆ; ಇಲ್ಲಿದೆ ನೋಡಿ
Karnataka Rain: ಆಗುಂಬೆ ಘಾಟ್​ನ 11ನೇ ತಿರುವಿನಲ್ಲಿ ಗುಡ್ಡ ಕುಸಿತ: ಬದಲಿ ಮಾರ್ಗ ಸೂಚಿಸಿದ ಜಿಲ್ಲಾಡಳಿತ
Karnataka Rain: ಚಿಕ್ಕಮಗಳೂರು ಜಿಲ್ಲೆಯ ವರುಣನ ಆರ್ಭಟಕ್ಕೆ ಮಹಿಳೆ ಸಾವು

2. ಮೂಡಿಗೆರೆ ತಾಲೂಕು : ವಾಡಿಕೆ ಮಳೆ  882.1 ಮಿ.ಮೀ ಆಗಿರುವ ಮಳೆ  1406.9 ಮಿ.ಮೀ

3. ಶೃಂಗೇರಿ ತಾಲೂಕು : ವಾಡಿಕೆ ಮಳೆ  1314.0 ಮಿ.ಮೀ  ಆಗಿರುವ ಮಳೆ  1983.6 ಮಿ.ಮೀ

4. ಕೊಪ್ಪ ತಾಲೂಕು : ವಾಡಿಕೆ ಮಳೆ  961.8 ಮಿ.ಮೀ  ಆಗಿರುವ ಮಳೆ  1703.2 ಮಿ.ಮೀ

5. ಎನ್.ಆರ್.ಪುರ ತಾಲೂಕು : ವಾಡಿಕೆ ಮಳೆ  532.4 ಮಿ.ಮೀ  ಆಗಿರುವ ಮಳೆ  1011.8 ಮಿ.ಮೀ

6. ತರೀಕೆರೆ ತಾಲೂಕು : ವಾಡಿಕೆ ಮಳೆ  279.0 ಮಿ.ಮೀ  ಆಗಿರುವ ಮಳೆ  553.4 ಮಿ.ಮೀ

7. ಕಡೂರು ತಾಲೂಕು : ವಾಡಿಕೆ ಮಳೆ  222.6 ಮಿ.ಮೀ  ಆಗಿರುವ ಮಳೆ 441.4 ಮಿ.ಮೀ

8. ಅಜ್ಜಂಪುರ ತಾಲೂಕು : ವಾಡಿಕೆ ಮಳೆ   223.5 ಮಿ.ಮೀ  ಆಗಿರುವ ಮಳೆ 447.5 ಮಿ.ಮೀ

ವಿವಿಧ ಜಿಲ್ಲೆಗಳಲ್ಲಿ ಆಗಿರುವ ಮಳೆ 

ಕಾರವಾರ: ವಾಡಿಕೆ ಮಳೆ 913 ಮಿ.ಮೀ  ಆಗಿರುವ ಮಳೆ  1058.5 ಮಿ.ಮೀ

ಶಿವಮೊಗ್ಗ ಜಿಲ್ಲೆ:  ವಾಡಿಕೆ ಮಳೆ 764 ಮಿ.ಮೀ  ಆಗಿರುವ ಮಳೆ 291.57 ಮಿ.ಮೀ

ಮಂಗಳೂರು: ವಾಡಿಕೆ ಮಳೆ 1560.8 ಮಿ.ಮೀ ಆಗಿರುವ ಮಳೆ 2007.1 ಮಿ.ಮೀ

ಉಡುಪಿ ಜಿಲ್ಲೆ: ವಾಡಿಕೆ ಮಳೆ 372 ಮಿ.ಮೀ  ಆಗಿರುವ ಮಳೆ 885 ಮಿ.ಮೀ

ಕೊಡಗು: ವಾಡಿಕೆ ಮಳೆ 951.61 ಮಿ.ಮೀ  ಆಗಿರುವ ಮಳೆ 1081.9 ಮಿ.ಮೀ
ಮಡಿಕೇರಿ: 1399.64 ಮಿ.ಮೀ  ಆಗಿರುವ ಮಳೆ 1588.02 ಮಿ.ಮೀ

ಹಾಸನ ಜಿಲ್ಲೆ: ವಾಡಿಕೆ ಮಳೆ 73 ಮಿ.ಮೀ ಆಗಿರುವ ಮಳೆ 130 ಮಿ.ಮೀ

Published On - 9:09 pm, Sun, 10 July 22