AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಚಿಕ್ಕಮಗಳೂರು ಜಿಲ್ಲೆಯ ವರುಣನ ಆರ್ಭಟಕ್ಕೆ ಮಹಿಳೆ ಸಾವು

ಚಿಕ್ಕಮಗಳೂರು ಜಿಲ್ಲೆಯ  ವರುಣನ ಆರ್ಭಟಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕಳಸ ತಾಲೂಕಿನ ಹೊರನಾಡಿನ ಹೂವಿನ ಹಿತ್ತಲು ಕಾಫಿ ತೋಟದಲ್ಲಿ ನಡೆದಿದೆ.

Karnataka Rain: ಚಿಕ್ಕಮಗಳೂರು ಜಿಲ್ಲೆಯ ವರುಣನ ಆರ್ಭಟಕ್ಕೆ ಮಹಿಳೆ ಸಾವು
ಕಳಸ ತಾಲೂಕು ಆರೋಗ್ಯ ಕೇಂದ್ರ
TV9 Web
| Edited By: |

Updated on:Jul 10, 2022 | 4:37 PM

Share

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ಜಿಲ್ಲೆಯ  ವರುಣನ (Rain) ಆರ್ಭಟಕ್ಕೆ ಮಹಿಳೆಯೊಬ್ಬರು (Woman) ಸಾವನ್ನಪ್ಪಿರುವ ಘಟನೆ ಕಳಸ ತಾಲೂಕಿನ ಹೊರನಾಡಿನ ಹೂವಿನ ಹಿತ್ತಲು ಕಾಫಿ ತೋಟದಲ್ಲಿ (Coffee estate) ನಡೆದಿದೆ. ಪ್ರಿಯಾಂಕಾ (22) ಮೃತ  ದುರ್ದೈವಿ. ಹರಪನಹಳ್ಳಿ ಮೂಲದ ಕಾರ್ಮಿಕ  ಮಹಿಳೆ ಪ್ರಿಯಂಕಾ, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮರ ಬಿದ್ದು ಸಾವನ್ನಪ್ಪಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಳೆಯ ಅಬ್ಬರಕ್ಕೆ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಮಾಗುಂಡಿ-ಕಳಸ ನಡುವೆ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಜನರು ಪರದಾಡುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಕೆಲವೊಂದು ನಿರ್ಬಂಧ ಹೇರಿದೆ.  ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ಸ್ಥಳಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಝರಿ ಫಾಲ್ಸ್ , ಮಾಣಿಕ್ಯಧಾರ ಸ್ಥಳಕ್ಕೆ ಹೋಗುವ ಪ್ರವಾಸಿಗರಿಗೆ ಕೆಲವೊಂದು ನಿರ್ಭಂದ ಹೇರಿದೆ.1200 ಕೆಜಿ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ನಿಷೇಧ, ಬೆಳಗ್ಗೆ 6 ರಿಂದ 9 ಹಾಗೂ ಸಂಜೆ 2 ರಿಂದ 4 ಗಂಟೆವರೆಗೆ ಮಾತ್ರ ಪ್ರವೇಶ, ತಲಾ 150 ವಾಹನಗಳಂತೆ ದಿನಕ್ಕೆ 300 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅಧಿಕೃತ ಹೊಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.ಗಿರಿಸಾಲಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೆಲ ನಿರ್ಬಂಧ ಹೇರಲಾಗಿದೆ. ಆದರೆ ಗಿರಿ ಭಾಗದ ಸ್ಥಳೀಯರಿಗೆ ಯಾವುದೇ ನಿರ್ಬಂಧವಿಲ್ಲ.

ನಿರಂತರ ಮಳೆಯಿಂದ ತುಂಗಾ ನದಿಯಲ್ಲಿ ಒಳಹರಿವು ಹೆಚ್ಚಳಾದ ಹಿನ್ನೆಲೆ ಶೃಂಗೇರಿ ಶಾರದಾಂಬೆ ದೇಗುಲದ ಪ್ಯಾರಲ್ ರಸ್ತೆ, ಪಾರ್ಕಿಂಗ್​ ಪ್ರದೇಶಕ್ಕೆ ನೀರು ನುಗ್ಗಿದೆ. ನದಿ ಪಕ್ಕದ ಅಂಗಡಿಗಳಿಗೂ ತುಂಗಾ ನದಿಯ ನೀರು ನುಗ್ಗಿದೆ.

ಮಳೆಯ ಆರ್ಭಟಕ್ಕೆ ಜಿಲ್ಲೆಯ  6 ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ ಶೃಂಗೇರಿ ತಾಲೂಕಿನ ಶಾಲೆ-ಕಾಲೇಜುಗಳಿಗೆ ಜುಲೈ 11 ಮತ್ತು 12 ರಂದು ಎರಡು ರಜೆ ಘೋಷಿಸಿ ಚಿಕ್ಕಮಗಳೂರು ಡಿಸಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

Published On - 4:34 pm, Sun, 10 July 22