ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿದ್ದಕ್ಕೆ ಡೆತ್ನೋಟ್ ಬರೆದಿಟ್ಟು ಪ್ರಿಯಕರ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ N.R ಪುರ ತಾಲೂಕಿನ ಮುತ್ತಿನಕೊಪ್ಪ ಬಳಿಯ ಶಂಕರಪುರದಲ್ಲಿ ನಡೆದಿದೆ. ಚೇತನ್(31) ಆತ್ಮಹತ್ಯೆ ಮಾಡಿಕೊಂಡ ಯುವಕ.
ಯುವತಿ ಮೋಸ ಮಾಡಿದ್ದಾಳೆಂದು ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಗಾನವಿ ಒಂಬತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೀವಿ. ನನ್ನಿಂದ ಗಾನವಿ ನಾಲ್ಕು ಲಕ್ಷ ಹಣವನ್ನು ಕಿತ್ತುಕೊಂಡಿದ್ದಾಳೆ ಎಂದು ಮೃತ ಚೇತನ್ ವಾಯ್ಸ್ ಮೆಸೇಜ್ನಲ್ಲಿ ಆರೋಪ ಮಾಡಿದ್ದಾರೆ. ಅಲ್ಲದೆ ಡೆತ್ ನೋಟ್ ಕೂಡ ಬರೆದಿಟ್ಟು ಚೇತನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನ್ಯಾಯ ಸಿಗಬೇಕೆಂದರೆ ಆಕೆಗೆ ಶಿಕ್ಷೆಯಾಗಬೇಕು. ನನ್ನ ಚಿತೆಗೆ ಗಾನವಿ ಬೆಂಕಿ ಇಡಬೇಕು, ಆಕೆ ಬರುವತನಕ ಹೆಣವನ್ನು ಕೆಳಗಿಳಿಸಬೇಡಿ. ನನಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಮೃತ ಚೇತನ್ ಆತ್ಮಹತ್ಯೆಗೂ ಮುನ್ನ ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಠ್ಯ ಪರಿಷ್ಕರಣೆ ಮುಂದೇನಾಗುವುದು? ಯಾವ ಪಠ್ಯ ಬೋಧಿಸಬೇಕು ಎಂಬ ಧರ್ಮ ಸಂಕಟದಲ್ಲಿ ಶಾಲೆಗಳು! -ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಳೆ ಕ್ಲಿಕ್ ಮಾಡಿ
ಅವರಿಬ್ಬರದ್ದು ಒಂಬತ್ತು ವರ್ಷದ ಪ್ರೀತಿ. ನಾವಿಬ್ಬರು ಅಮರ ಪ್ರೇಮಿಗಳು ಅಂತಾ ಆತ ಆಕೆಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಿ ಮದುವೆಯಾಗಲು ತಯಾರಾಗಿದ್ದ. ಆದ್ರೆ ಮದುವೆ ವಿಷ್ಯವೇ ಆ ಪ್ರೀತಿಯನ್ನ ಛಿದ್ರ ಮಾಡಿದೆ. ಹತ್ತಾರು ಕನಸು ಕಂಡವ ಇವತ್ತು ನೇಣಿಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್‌ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪದ ಶಂಕರಪುರ ಅನ್ನೋ ಗ್ರಾಮದ ಯುವಕ ಚೇತನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಕ್ಕದ ಗ್ರಾಮದ ಯುವತಿಯನ್ನ ಕಳೆದ 9 ವರ್ಷದಿಂದ ಚೇತನ್ ಪ್ರೀತಿಸುತ್ತಿದ್ದರು. ಹೀಗೆ ಇಬ್ಬರು ಪ್ರೇಮಲೋಕದಲ್ಲೇ ಸುತ್ತಾಡಿದ್ರು. ಗೂಡ್ಸ್ ವಾಹನ ಇಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದ ಚೇತನ್, ತನ್ನ ಪ್ರಿಯತಮೆ ಮುಂದೆ ಮದುವೆ ವಿಷ್ಯ ಪ್ರಸ್ತಾಪಿಸಿದ್ದರು. ಆದ್ರೆ ಯುವತಿ ಮಾತ್ರ ಮದುವೆ ಆಗಲ್ಲ ಎಂದಿದ್ದಳಂತೆ. ಇದೇ ಮಾತು ಚೇತನ್‌ನ ಹೃದಯ ಸೀಳಿತ್ತು. ಅದೇ ನೋವಿನಲ್ಲಿ ಇವತ್ತು ಬೆಳಗ್ಗೆ ಮನೆ ಎದುರುಗಡೆಯ ಕಾರ್ ಶೆಡ್‌ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: Relationship: ತಾವೇ ಇಷ್ಟಪಟ್ಟು ಪಡೆದ ಪ್ರೀತಿಯಿಂದ ದೂರವಾಗೋದೇಕೆ? ಸಂಬಂಧ ಉಳಿಸಿಕೊಳ್ಳೋದು ಹೇಗೆ?
ಇನ್ನು ಆತ್ಮಹತ್ಯೆಗೂ ಮುನ್ನ ತನ್ನ ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಯುವತಿ ಮಾಡಿರೋ ಮೋಸವನ್ನ ಎಳೆಎಳೆಯಾಗಿ ವಿವರಿಸಿದ್ದಾರೆ. ಪ್ರತೀ ತಿಂಗಳು ಐದು ಸಾವಿರ ಹಣದಂತೆ ಆಕೆಗಾಗಿ ನಾಲ್ಕು ಲಕ್ಷ ಹಣ ಖರ್ಚು ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಆಕೆಯನ್ನ ಜೈಲಿಗೆ ಕಳಿಸಿ ನನ್ನ ಸಾವಿಗೆ ನ್ಯಾಯಕೊಡಿಸಿ ಅಂತಾ ಮನವಿ ಮಾಡಿದ್ದಾರೆ.
ಸದ್ಯ ಹುಡುಗಿ ವಿರುದ್ಧ ಆಕ್ರೋಶಗೊಂಡಿರೋ ಪೋಷಕರು ಕೇಸ್ ದಾಖಲು ಮಾಡಿಕೊಂಡು ಅರೆಸ್ಟ್ ಮಾಡ್ಬೇಕು ಅಂತಾ ಆಗ್ರಹಿಸಿದ್ದಾರೆ. ಅದೇನೇ ಇರ್ಲಿ, ಚೇತನ್‌ನ 9 ವರ್ಷದ ಪ್ರೀತಿ ಹೀಗೆ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ದುರಂತ.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
Published On - 3:42 pm, Mon, 30 May 22