ಕಾಫಿನಾಡಲ್ಲಿ ಕಬ್ಬೆಕ್ಕುಗಳ ಸರಣಿ ಸಾವು, ಕಾರಣ ಏನು..?
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಬ್ಬೆಕ್ಕುಗಳ (Brown palm civet) ಸರಣಿ ಸಾವು ಸಂಭವಿಸುತ್ತಿದೆ. ಇದರಿಂದ ಸ್ಥಳೀಯರಿಗೆ ಆತಂಕ ಹುಟ್ಟಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇಕೋಟೆಯಲ್ಲಿ ಹರ್ಷ ಎಂಬುವರ ಕಾಫಿ ತೋಟದಲ್ಲಿ ಕಳೆದ 20 ದಿನಗಳಲ್ಲಿ ಮೂರು ಕಬ್ಬೆಕ್ಕುಗಳು ಸಾವನ್ನಪ್ಪಿವೆ. ನರಳಾಟದ ನಂತರ ಅಸುನೀಗುತ್ತಿವೆ ಕಬ್ಬೆಕ್ಕುಗಳು 20 ದಿನಗಳ ಹಿಂದೆ ಒಂದು ಕಬ್ಬೆಕ್ಕು ಸಾವನ್ನಪ್ಪಿತ್ತು. ಆ ಬಳಿಕ ವಾರದ ಹಿಂದೆ ಮತ್ತೊಂದು ಕಬ್ಬೆಕ್ಕಿನ ಮೃತದೇಹ ಪತ್ತೆಯಾಗಿತ್ತು. ಇಂದು ಕೂಡ ಮತ್ತೊಂದು ಕಬ್ಬೆಕ್ಕು ಸಾವನ್ನಪ್ಪಿದೆ ಎಂದು ಹರ್ಷ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ […]
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಬ್ಬೆಕ್ಕುಗಳ (Brown palm civet) ಸರಣಿ ಸಾವು ಸಂಭವಿಸುತ್ತಿದೆ. ಇದರಿಂದ ಸ್ಥಳೀಯರಿಗೆ ಆತಂಕ ಹುಟ್ಟಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇಕೋಟೆಯಲ್ಲಿ ಹರ್ಷ ಎಂಬುವರ ಕಾಫಿ ತೋಟದಲ್ಲಿ ಕಳೆದ 20 ದಿನಗಳಲ್ಲಿ ಮೂರು ಕಬ್ಬೆಕ್ಕುಗಳು ಸಾವನ್ನಪ್ಪಿವೆ.
ನರಳಾಟದ ನಂತರ ಅಸುನೀಗುತ್ತಿವೆ ಕಬ್ಬೆಕ್ಕುಗಳು 20 ದಿನಗಳ ಹಿಂದೆ ಒಂದು ಕಬ್ಬೆಕ್ಕು ಸಾವನ್ನಪ್ಪಿತ್ತು. ಆ ಬಳಿಕ ವಾರದ ಹಿಂದೆ ಮತ್ತೊಂದು ಕಬ್ಬೆಕ್ಕಿನ ಮೃತದೇಹ ಪತ್ತೆಯಾಗಿತ್ತು. ಇಂದು ಕೂಡ ಮತ್ತೊಂದು ಕಬ್ಬೆಕ್ಕು ಸಾವನ್ನಪ್ಪಿದೆ ಎಂದು ಹರ್ಷ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜೊತೆಗೆ ಸಾಯೋ ಮೊದಲು ಮಂಕಾಗೋ ಕಬ್ಬೆಕ್ಕುಗಳು, ನರಳಾಡಿ ಸಾಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ನಾಚಿಕೆ ಸ್ವಭಾವದ ಪ್ರಾಣಿಯಾದ ಕಬ್ಬೆಕ್ಕುಗಳು ಮನುಷ್ಯನ ಕಣ್ಣಿಗೆ ಬೀಳೋದೇ ಅಪರೂಪ. ಅಂಥದ್ರಲ್ಲಿ ಕಾಫಿ ತೋಟದಲ್ಲಿ ಕಬ್ಬೆಕ್ಕುಗಳ ಸರಣಿ ಸಾವು ಸ್ಥಳೀಯರಿಗೆ ಅಚ್ಚರಿ ಉಂಟುಮಾಡಿದೆ. ಸ್ಥಳಕ್ಕೆ ಬಂದು ಕಬ್ಬೆಕ್ಕಿನ ಮೃತದೇಹವನ್ನ ತೆಗೆದುಕೊಂಡು ಹೋಗಿರೋ ಅರಣ್ಯ ಇಲಾಖೆ ಸಿಬ್ಬಂದಿ, ಪರೀಕ್ಷೆಗೆ ಮುಂದಾಗಿದ್ದಾರೆ. (ಕಪ್ಪಗಿರುವ ಕಾಡಿನ ಬೆಕ್ಕು, ಮರದಿಂದ ಮರಕ್ಕೆ ನೆಗೆಯುತ್ತದೆ. ಇದಕ್ಕೆ ಪುನುಗು ಬೆಕ್ಕು ಎಂದೂ ಕರೆಯುತ್ತಾರೆ)
Published On - 2:48 pm, Wed, 24 June 20