ಚಿಕ್ಕಮಗಳೂರು: ಬಟ್ಟೆ ಬದಲಿಸುವಾಗ ಅಪ್ರಾಪ್ತೆಯ ವಿಡಿಯೋ ಮಾಡಿ ಬೆದರಿಸಿ 2 ತಿಂಗಳು ನಿರಂತರ ಅತ್ಯಾಚಾರ; ಇಬ್ಬರ ಬಂಧನ

TV9 Digital Desk

| Edited By: guruganesh bhat

Updated on: Sep 13, 2021 | 11:00 PM

ವಿಡಿಯೋ ನೋಡಿದ್ದ ಬಾಲಾಜಿ, ಅಖಿಲೇಶ್ ಎಂಬ ಯುವಕರು ಅಪ್ರಾಪ್ತೆಗೆ ರಸ್ತೆಯಲ್ಲಿ ಕೀಟಲೆ ಕೊಡುತ್ತಿದ್ದರು ಎಂದು ಸಂತೃಸ್ತೆ ದೂರು ದಾಖಲಿಸಿದ್ದಾಳೆ.

ಚಿಕ್ಕಮಗಳೂರು: ಬಟ್ಟೆ ಬದಲಿಸುವಾಗ ಅಪ್ರಾಪ್ತೆಯ ವಿಡಿಯೋ ಮಾಡಿ ಬೆದರಿಸಿ 2 ತಿಂಗಳು ನಿರಂತರ ಅತ್ಯಾಚಾರ; ಇಬ್ಬರ ಬಂಧನ
ಸಾಂಕೇತಿಕ ಚಿತ್ರ
Follow us


ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯೋರ್ವಳನ್ನು ಬೆದರಿಸಿ ನಿರಂತರ ಅತ್ಯಾಚಾರ ನಡೆದ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಅನಿಲ್ ಎಂಬ ಯುವಕ ಬಾಲಕಿ ಬಟ್ಟೆ ಬದಲಿಸುವ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡಿದ್ದ. ವಿಡಿಯೋ ಮುಂದಿಟ್ಟುಕೊಂಡು ಬಾಲಕಿಗೆ ಬೆದರಿಸಿ 2 ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದ ಎಂದು ದೂರು ದಾಖಲಾಗಿದೆ. ಅನಿಲನ ಹೀನ ಕೃತ್ಯಕ್ಕೆ ಗ್ರಾಮದ ಕಾರ್ತಿಕ್ ಎಂಬಾತ ಬೆಂಬಲ ನೀಡಿದ್ದ. ಅಲ್ಲದೇ ವಿಡಿಯೋ ನೋಡಿದ್ದ ಬಾಲಾಜಿ, ಅಖಿಲೇಶ್ ಎಂಬ ಯುವಕರು ಅಪ್ರಾಪ್ತೆಗೆ ರಸ್ತೆಯಲ್ಲಿ ಕೀಟಲೆ ಕೊಡುತ್ತಿದ್ದರು ಎಂದು ಸಂತೃಸ್ತೆ ದೂರು ದಾಖಲಿಸಿದ್ದಾಳೆ.

ಗಣಪತಿ ವಿಸರ್ಜನೆ ವೇಳೆ ವಿಡಿಯೋ ಬಗ್ಗೆ ಯುವಕರು ಚರ್ಚೆ ನಡೆಸಿದ್ದರು.ಅಪ್ರಾಪ್ತ ಸಂತೃಸ್ತೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳಲ್ಲಿ ಅನಿಲ್ ನಾಯ್ಕ, ಬಾಲಾಜಿ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೊಲೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಗಜಾನನ ಚೌಕದ ಜನನಿಬಿಡ ಪ್ರದೇಶದಲ್ಲೇ ಚಾಕುವಿನಿಂದ ಇರಿದು ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿದೆ. ಟಿಪ್ಪು ನಗರದ ಮುಸ್ತಾಕ್(32) ಎಂಬಾತನನ್ನು ಹತ್ಯೆಗೈದು ನವೀದ್ ಎಂಬಾತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಸ್​ಪಿ ಮಿಥುನ್ ಕುಮಾರ್, ಡಿವೈಎಸ್​ಪಿ ಲಕ್ಷ್ಮಯ್ಯ ಭೇಟಿ ನೀಡಿದ್ದು, ಚಿಂತಾಮಣಿ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಚಿಕ್ಕಮಗಳೂರು: ಬೆಳೆ ಉಳಿಸುವಂತೆ ಕೋರಿ ಗಣೇಶನಿಗೆ ಜೀವಂತ ಇಲಿ ಸಮರ್ಪಿಸಿದ ಭಕ್ತ

ಮುಂಬೈ ಅತ್ಯಾಚಾರ ಪ್ರಕರಣದ ಸಂತೃಸ್ತೆಯ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಉದ್ಧವ್ ಠಾಕ್ರೆ ಸರ್ಕಾರ

(Chikkamagaluru 2 arrested for minor girl rape case who recorded video when girl changes the dress)

ತಾಜಾ ಸುದ್ದಿ

Related Stories

Click on your DTH Provider to Add TV9 Kannada