Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಶರಣಾದ ನಕ್ಸಲರು ಬಳಸುತ್ತಿದ್ದ AK 56 ಗನ್ ಸೇರಿದಂತೆ 6 ಶಸ್ತ್ರಾಸ್ತ್ರಗಳು ಪತ್ತೆ

ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಎದುರು 6 ನಕ್ಸಲರು ಶರಣಾಗತಿಯಾಗಿದ್ದಾರೆ. ಶರಣಾಗತಿಯಾದ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಎಲ್ಲಿವೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪೊಲೀಸ್​ ಇಲಾಖೆ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿದೆ.

ಚಿಕ್ಕಮಗಳೂರು: ಶರಣಾದ ನಕ್ಸಲರು ಬಳಸುತ್ತಿದ್ದ AK 56 ಗನ್ ಸೇರಿದಂತೆ 6 ಶಸ್ತ್ರಾಸ್ತ್ರಗಳು ಪತ್ತೆ
ನಕ್ಸಲ್​ರು ಬಳಸುತ್ತಿದ್ದ ಶಸ್ತ್ರಾಸ್ತ್ರ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ವಿವೇಕ ಬಿರಾದಾರ

Updated on:Jan 11, 2025 | 8:45 AM

ಚಿಕ್ಕಮಗಳೂರು, ಜನವರಿ 11: ಶರಣಾದ ಆರು ಮಂದಿ ನಕ್ಸಲರು (Naxal) ಬಳಸುತ್ತಿದ್ದ ಶಸ್ತ್ರಾಸ್ತ್ರಗಳು (Weapons) ಪತ್ತೆಯಾಗಿವೆ. ಕೊಪ್ಪ (Koppa) ತಾಲೂಕಿನ ಮೇಗೂರು ಅರಣ್ಯದಲ್ಲಿ ಹೂತು ಇಡಲಾಗಿದ್ದ AK 56 ಗನ್​​, ರಿವಾಲ್ವಾರ್, ಬಂದೂಕು​​​ ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು​ ಜಪ್ತಿ ಮಾಡಿದ್ದಾರೆ. ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು.

ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರವಾಗ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್ಸ್​ಪೆಕ್ಟರ್​​ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ. ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸ್​ ಮೂಲಗಳಿಂದ ಮಾಹಿತಿ ದೊರೆತಿದೆ.

ನಕ್ಸಲರ ಬಳಿ‌ ಇದ್ದ ಶಸ್ತ್ರಾಸ್ತ್ರ, ಮದ್ದು ಗುಂಡು ವಿವರ

ಒಂದು AK 56, ಮೂರು 303 ರೈಫಲ್, ಒಂದು 12 bore SBBL, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ AK ammunitions, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸ್ತ್ರಾಸ್ತ್ರ ಕಾಯ್ದೆ 1959 ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  6 ನಕ್ಸಲರ ಶರಣಾಗತಿ ಬೆನ್ನಲ್ಲೇ ನಕ್ಸಲರ ಪಟ್ಟಿಯಲ್ಲಿ ಉಳಿದ ಏಕೈಕ ನಕ್ಸಲ್

ಶಸ್ತ್ರಾಸ್ತ್ರ ಪ್ಯಾಕೇಜ್

ಇನ್ನು, ಕಾಂಗ್ರೆಸ್ ಸರ್ಕಾರ 2024ರಲ್ಲಿ ಹೊಸ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಲ್ಲಿ ಶರಣಾಗತಿಯಾಗುವ ನಕ್ಸಲರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನ ಸರ್ಕಾರಕ್ಕೆ ಒಪ್ಪಿಸಿದರೇ ಪ್ರತಿ ಶಸ್ತ್ರಕ್ಕೂ ಹಣ ನೀಡುವುದಾಗಿ ಹೇಳಿತ್ತು.

ಸರ್ಕಾರ ಘೋಷಣೆ ಮಾಡಿರುವ ಶಸ್ತ್ರಗಳಿಗೆ ಪರಿಹಾರ ಎಷ್ಟು?

  • ಒಂದು AK 47ಗೆ: 30 ಸಾವಿರ ರೂ.
  • UMG, GPM, RPJ, ಸ್ನೈಪರ್ ರೈಫಲ್ ಒಂದಕ್ಕೆ: 50 ಸಾವಿರ ರೂ.
  • SAM ಮಿಸೈಲ್ ಒಂದಕ್ಕೆ : 40 ಸಾವಿರ ರೂ.
  • ಒಂದು ಗ್ರೆನೇಡ್​​ಗೆ: 2 ಸಾವಿರ ರೂ.
  • ಎಲ್ಲ ವಿಧದ ಮದ್ದುಗುಂಡು ಒಂದಕ್ಕೆ‌: 100 ರೂ.
  • ಪಿಸ್ತೂಲ್, ರಿವಾಲ್ವರ್: 10 ಸಾವಿರ ರೂ.
  • ರಾಕೆಟ್: 3 ಸಾವಿರ ರೂ.
  • ಒಂದು ಕೆಜೆ ಸ್ಫೋಟಕ ವಸ್ತುಗಳಿಗೆ: 4 ಸಾವಿರ ರೂ.
  • ಸೆಟಲೈಟ್ ಫೋನ್ ಒಂದಕ್ಕೆ: 20 ಸಾವಿರ ರೂ. ಸರ್ಕಾರ ನೀಡುತ್ತದೆ.

ನಕ್ಸಲರಿಗೆ ಬಂದೂಕು, ಗುಂಡು ನೀಡಿದ್ದು ಯಾರು: ಸಿಟಿ ರವಿ

ಶಸ್ತ್ರಾಸ್ತ್ರ ಪತ್ತೆಯಾದ ವಿಚಾರವಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಶರಣಾಗತಿಯಾದವರು ಶಸ್ತ್ರಾಸ್ತ್ರಗಳ ಬಗ್ಗೆ ಸಮಗ್ರ ಮಾಹಿತಿ ಪೊಲೀಸರಿಗೆ ನೀಡಬೇಕು. ನಕ್ಸಲರು ಮಾಹಿತಿ ನೀಡದಿದ್ದರೇ ಸರ್ಕಾರ ಯಾಕೆ ಪ್ಯಾಕೇಜ್ ಕೊಡುತ್ತಿದೆ? ಶರಣಾಗತಿಯಾದ ನಕ್ಸಲರಿಗೆ ಬಂದೂಕು, ಗುಂಡು ನೀಡಿದ್ದು ಯಾರು? ಎಲ್ಲಾ ಮಾಹಿತಿ ನೀಡಿದರೆ ಮಾತ್ರ ಶರಣಾಗತಿ‌ ಪ್ಯಾಕೇಜ್​ಗೆ ಅರ್ಥವಿರುತ್ತೆ. ತನಿಖೆಗೆ ಪೂರ್ಣ ಸಹಕಾರ ನೀಡಿದರೆ ಮಾತ್ರ ಪ್ಯಾಕೇಜ್ ನೀಡಬೇಕು ಎಂದು ಹೇಳಿದರು.

ಶರಣಾಗತಿಯಾದ ನಕ್ಸಲರು ಪೊಲೀಸ್ ತನಿಖೆಗೆ ಸಹಕಾರ ನೀಡಬೇಕು. ಪೊಲೀಸರು, ಯೋಧರು, ಸಾರ್ವಜನಿಕರನ್ನು ನಕ್ಸಲರು ಕೊಂದಿದ್ದಾರೆ. ನಕ್ಸಲರಿಗೆ ಸಹಕಾರ ನೀಡಿದ್ದು ಯಾರು ಅಂತಾ ಮಾಹಿತಿ ನೀಡಬೇಕು. ನಕ್ಸಲರದ್ದು ಅಪಾಯಕಾರಿ ಸಿದ್ಧಾಂತವಾಗಿದೆ. ಒಂದು ತಂತ್ರಗಾರಿಕೆ ಭಾಗವಾಗಿ ನಕ್ಸಲರು ಶರಣಾಗಿದ್ದಾರೆ ಅನಿಸುತ್ತೆ. ಆರೂ ಮಂದಿ ನಕ್ಸಲ್ ಸಿದ್ಧಾಂತದಿಂದ ಹೊರಬಂದ ಬಗ್ಗೆ ಖಚಿತವಾಗಬೇಕು. ಕೇವಲ ಐಸೋಲೇಟೆಡ್ ಆಗಿ ನಲ್ಕು ಜನರಿಗೆ ಸೀಮಿತವಾಗಬಾರದು. ಇದರ ಹಿಂದೆ ಯಾರಿದ್ದಾರೆ ಎಂದು ಎನ್​ಐಎ ತನಿಖೆ ಮಾಡಬೇಕು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:45 am, Sat, 11 January 25

ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು