AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಧರ್ಮ ಸಂಘರ್ಷಕ್ಕೆ ಕಾರಣವಾಯ್ತು ಕ್ರಿಸ್ಮಸ್ ಶಾಲಾ ರಜೆ

ಕ್ರಿಶ್ಚಿಯನ್ ಒಡೆತನದ ಶಾಲೆಗಳಲ್ಲಿ ಕ್ರಿಸ್ಮಸ್​ಗೆ ನೀಡುವ 10 ದಿನದ ರಜೆ ಸದ್ಯ ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಶ್ರೀರಾಮಸೇನೆ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಿಸ್ಮಸ್​​ಗೆ ಒಂದೇ ದಿನ ರಜೆ ನೀಡುವಂತೆ ಪಟ್ಟುಹಿಡಿದೆ. ಇಲ್ಲಾಂದ್ರೆ ರಾಜ್ಯಾದ್ಯಂತ ಹೋರಾಟ ಮಾಡುವ ‌ಎಚ್ಚರಿಕೆ‌ ನೀಡಿದೆ. ಏನಿದು ಹೊಸ ವಿವಾದ?

ಚಿಕ್ಕಮಗಳೂರು: ಧರ್ಮ ಸಂಘರ್ಷಕ್ಕೆ ಕಾರಣವಾಯ್ತು ಕ್ರಿಸ್ಮಸ್ ಶಾಲಾ ರಜೆ
ಕ್ರಿಸ್ಮಸ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 12, 2025 | 8:40 PM

Share

ಚಿಕ್ಕಮಗಳೂರು, ಡಿಸೆಂಬರ್​ 12: ಕ್ರಿಸ್ಮಸ್ ಹಬ್ಬಕ್ಕೆ (Christmas festival) ದಿನಗಣನೆ ಆರಂಭವಾಗುತ್ತಿದ್ದಂತೆ ವಿವಾದವೊಂದು ಮುನ್ನೆಲೆಗೆ ಬಂದಿದೆ. ಕ್ರಿಶ್ಚಿಯನ್ ಆಡಳಿತದ ಶಾಲೆಗಳಲ್ಲಿ  ನೀಡುವ ರಜೆ ವಿವಾದಕ್ಕೆ ಕಾರಣವಾಗಿದ್ದು, 10 ದಿನಗಳ ಕಾಲ ಶಾಲೆಗಳಿಗೆ ನೀಡುವ ರಜೆಯ (Schools Holidays) ವಿರುದ್ಧ ಧರ್ಮ ಸಂಘರ್ಷಕ್ಕೆ ಶ್ರೀ ರಾಮಸೇನೆ ಸಿದ್ದತೆ ನಡೆಸಿದೆ.

ಕಳೆದ ಕೆಲ‌ ವರ್ಷಗಳ ಹಿಂದೆ ರಾಜ್ಯದ ಕೆಲ ಶಾಲೆಗಳಲ್ಲಿ ಕಿಚ್ಚು ಹತ್ತಿಸಿದ್ದ ಹಿಜಾಬ್ ವರ್ಸಸ್ ಕೆಸರಿ ಶಾಲು ವಿವಾದ ಇನ್ನೂ ವಿವಾದವಾಗಿಯೇ ಉಳಿದಿದೆ. ಇದೀಗ ಶಾಲೆಯ ರಜೆ ‌ವಿಚಾರವಾಗಿ ಮತ್ತೊಂದು ವಿವಾದ ಭುಗಿಲೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

10 ದಿನಗಳ ಕಾಲ ಶಾಲೆಗಳಿಗೆ ರಜೆ: ಪ್ರಮೋದ್ ಮುತಾಲಿಕ್ ಆಕ್ರೋಶ

ರಾಜ್ಯದಲ್ಲಿ ಕ್ರಿಶ್ಚಿಯನ್ ಒಡೆತನದ ಶಾಲೆಗಳಲ್ಲಿ ಕ್ರಿಸ್ಮಸ್​ಗೆ ನೀಡುವ 10 ದಿನದ ರಜೆ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ನೀಡುವ ರಜೆಯನ್ನು ಮಾತ್ರ ನೀಡಬೇಕು. ಒಂದು‌ ದಿನ‌ ನೀಡುವ ರಜೆಯನ್ನ 10 ದಿನಗಳ ಕಾಲ ನೀಡುವ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಶ್ರೀರಾಮಸೇನೆ ಆಕ್ರೋಶ ವ್ಯಕ್ತಪಡಿಸಿದೆ. ರಜೆಯ ವಿವಾದಕ್ಕೆ ಧರ್ಮ ಸುತ್ತಿಕೊಂಡಿದ್ದು, ದಸರಾಕ್ಕೆ ರಜೆ ನೀಡದೆ ಶಾಲೆ ನಡೆಸಿ ಕ್ರಿಸ್ಮಸ್​​ಗೆ 10 ದಿನಗಳ ಕಾಲ‌‌ ರಜೆ‌ ನೀಡಲಾಗುತ್ತಿದೆ. ಹೆಚ್ಚಾಗಿ ಹಿಂದೂ ವಿಧ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳೇ ಇರುವ ಕ್ರಿಶ್ಚಿಯನ್ ಆಡಳಿತದ ಶಾಲೆಗಳಲ್ಲಿ ದಸರಾಕ್ಕೆ ರಜೆ ನೀಡದೆ, ಕ್ರಿಸ್ಮಸ್​ಗೆ ರಜೆ ನೀಡುವ ಮೂಲಕ ಬಲವಂತವಾಗಿ ಕ್ರಿಶ್ಚಿಯನ್ ಧರ್ಮ ಆಚರಣೆಯನ್ನ ಹಿಂದೂಗಳ ಮೇಲೇರುವ ಪ್ರಯತ್ನವಾಗುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ  ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಯ್ಯಪ್ಪ ಮಾಲೆ ಧರಿಸಿಬಂದ ವಿದ್ಯಾರ್ಥಿಗಳನ್ನ ಕಾಲೇಜಿನಿಂದ ಹೊರಹಾಕಿದ ಪ್ರಿನ್ಸಿಪಾಲ್: ಭುಗಿಲೆದ್ದ ಆಕ್ರೋಶ

ಕ್ರಿಶ್ಚಿಯನ್ ಶಾಲೆಗಳಲ್ಲಿ ಕ್ರಿಸ್ಮಸ್ ರಜೆ ನೀಡುವ ಮೂಲಕ ಹಿಂದೂಗಳ ಮೇಲೆ ಕ್ರಿಶ್ಚಿಯನ್ ಧಾರ್ಮಿಕ ಆಚರಣೆಯನ್ನ ಹೇರಲು ಸಂಚು ಮಾಡಲಾಗುತ್ತಿದೆ ಎಂದು ಶ್ರೀ ರಾಮಸೇನೆ ಸಂಘಟನೆ ಆಕ್ರೋಶ ಹೊರ ಹಾಕಿದ್ದು, ಹೋರಾಟಕ್ಕೆ ಪ್ಲಾನ್ ಮಾಡಿದೆ‌. ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಮವಾರದಿಂದ ಪ್ರತಿಭಟನೆಗೆ ಪ್ಲಾನ್ ರೂಪಿಸಲಾಗಿದೆ.

ಇಂದು ಬೆಂಗಳೂರಿನ ಶಿಕ್ಷಣಾಧಿಕಾರಿಗಳನ್ನ ಭೇಟಿ ಮಾಡಿರುವ ಶ್ರೀರಾಮಸೇನೆ ನಿಯೋಗ ಮನವಿ ಮಾಡಿದೆ‌. 1 ದಿನ ಬಿಟ್ಟು ಹೆಚ್ಚು ದಿನ ರಜೆ ನೀಡಿದರೆ ಅಂತಹ ಶಾಲೆಗಳ ಮೇಲೆ‌ ಸರ್ಕಾರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದತ್ತ ಜಯಂತಿ ಶೋಭಾಯಾತ್ರೆ: ಚಿಕ್ಕಮಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್, ಬಿಗಿ ಬಂದೋಬಸ್ತ್

ಇದೀಗ ರಾಜ್ಯದ ಕ್ರಿಶ್ಚಿಯನ್ ಒಡೆತನದ ಶಾಲೆಗಳಲ್ಲಿ ನೀಡುತ್ತಿರುವ ಕ್ರಿಸ್ಮಸ್ ಹಬ್ಬದ ರಜೆ‌ ವಿವಾದಕ್ಕೆ ಕಾರಣವಾಗಿದ್ದು, ಕ್ರಿಸ್ಮಸ್ ರಜೆಯ ವಿವಾದ ಯಾವ ಸ್ವರೂಪ ಪಡೆಯುತ್ತೆ ಅಥವಾ ಸರ್ಕಾರ ಮಧ್ಯಪ್ರವೇಶಿಸಿ ಹೊಸ ನಿಯಮಗಳನ್ನ ಜಾರಿ ಮಾಡುತ್ತಾ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:39 pm, Fri, 12 December 25

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!