ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ, ಸಿಎಂಗೆ ಕೇಳಲು ಬಂದಿದ್ದೇವೆ: ಗ್ಯಾರಂಟಿ ಸಮಾವೇಶದಲ್ಲಿ ಮಹಿಳೆಯರ ಸಿಟ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 03, 2024 | 5:19 PM

ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ. ಹಣ ಏಕೆ ಬಂದಿಲ್ಲ ಎಂದು ಕೇಳಲು ಇಲ್ಲಿಗೆ ಬಂದಿದ್ದೇವೆ ಎಂದು ಫಲಾನುಭವಿ ಮಹಿಳೆಯರು ಸಿಟ್ಟಿಗೆದ್ದಿರುವಂತಹ ಘಟನೆ ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ಗ್ಯಾರಂಟಿ ಯೋಜನೆ ಸಮಾವೇಶ ನಡೆದಿದೆ. ನಮಗೆ ಹಣ ಬೇಕು, ಸಿದ್ದರಾಮಯ್ಯ ಬಳಿ ಕಳಿಸಿ ಎಂದಿದ್ದಾರೆ. ಸಮಾವೇಶದ ವೇದಿಕೆ ಬಳಿ ಬಿಡುವಂತೆ ಮಹಿಳೆಯರು ಪಟ್ಟುಹಿಡಿದಿದ್ದರು.

ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ, ಸಿಎಂಗೆ ಕೇಳಲು ಬಂದಿದ್ದೇವೆ: ಗ್ಯಾರಂಟಿ ಸಮಾವೇಶದಲ್ಲಿ ಮಹಿಳೆಯರ ಸಿಟ್ಟು
ಫಲಾನುಭವಿ ಮಹಿಳೆಯರ ಸಿಟ್ಟು
Follow us on

ಚಿಕ್ಕಮಗಳೂರು, ಮಾರ್ಚ್​ 3: ನಗರದ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ಗ್ಯಾರಂಟಿ ಯೋಜನೆ ಸಮಾವೇಶ ನಡೆದಿದೆ. ಈ ವೇಳೆ ಗ್ಯಾರಂಟಿ ಯೋಜನೆ ಸಮಾವೇಶಕ್ಕೆ ಬಂದ ಫಲಾನುಭವಿ ಮಹಿಳೆಯರು ಸಿಟ್ಟಿಗೆದ್ದಿದ್ದಾರೆ. ನಮಗೆ ಗೃಹಲಕ್ಷ್ಮೀ (Gruha Lakshmi) ಹಣ ಬಂದಿಲ್ಲ. ಹಣ ಏಕೆ ಬಂದಿಲ್ಲ ಎಂದು ಕೇಳಲು ಇಲ್ಲಿಗೆ ಬಂದಿದ್ದೇವೆ. ನಮಗೆ ಹಣ ಬೇಕು, ಸಿದ್ದರಾಮಯ್ಯ ಬಳಿ ಕಳಿಸಿ ಎಂದಿದ್ದಾರೆ. ಕಡೂರಿನಿಂದ ಸಮಾವೇಶಕ್ಕೆ ಮಹಿಳಾ ಫಲಾನುಭವಿಗಳು ಬಂದಿದ್ದು, ಸಮಾವೇಶದ ವೇದಿಕೆ ಬಳಿ ಬಿಡುವಂತೆ ಮಹಿಳೆಯರು ಪಟ್ಟುಹಿಡಿದಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಭಾಷಣ ಆರಂಭವಾಗುತ್ತಿದ್ದಂತೆ ಮಹಿಳೆಯರು ಸಿಟ್ಟಿಗೆದ್ದಿದ್ದಾರೆ.

ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್​​ 5 ಗ್ಯಾರಂಟಿಯಿಂದ ರಾಜ್ಯ ಸಮೃದ್ಧಿಯಾಗಿ ಬದುಕು ಹಸನಾಗಿದೆ. ಬಿಜೆಪಿಯವರು ಬರಲಿ, ಕರೆದೊಯ್ದು ಅಭಿವೃದ್ಧಿಯಾದ ಬಗ್ಗೆ ತೋರಿಸುವೆ. ಪ್ರಧಾನಮಂತ್ರಿ ಜನಧನ್ ಖಾತೆಗೆ ಹಣ ಬಂದಿದೆಯಾ. ಇನ್ನೂ ಹೆಚ್ಚು ಸೇವೆ ಮಾಡಲು ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಫಿನಾಡಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶ; ಖಾಕಿ ಹೈ ಅಲರ್ಟ್, ಹಲವೆಡೆ ಸಂಚಾರ ಬಂದ್

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ, ಬದಲಿಸಲ್ಲ. ನಮ್ಮ ಸರ್ಕಾರ ಇರುವವರೆಗೂ ಯೋಜನೆ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಗ್ಯಾರಂಟಿಗಳಿಗೆ ನಾನು ಗ್ಯಾರಂಟಿ ಕೊಡುತ್ತೇನೆ. ಐದು ಗ್ಯಾರಂಟಿ 5 ಬೆರಳು. ಕಮಲ ಉದುರಿ ಹೋಯ್ತು, ತೆನೆಹೊತ್ತ ಮಹಿಳೆ ಹೊರೆ ಇಳಿಸಿ ಹೋದಳು. ಬಿಎಸ್​ ಯಡಿಯೂರಪ್ಪ ಸರ್ಕಾರ ಹೊಟ್ಟೆ ತುಂಬಿಸುವ ಒಂದೇ ಒಂದು ಯೋಜನೆ ತಂದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಚಿಕ್ಕಮಗಳೂರಿನ ರೆಸಾರ್ಟ್​ನಲ್ಲಿ ಕುಮಾರಸ್ವಾಮಿ ವಾಸ್ತವ್ಯ, ಪಕ್ಷದ ಶಾಸಕರೊಂದಿಗೆ ಸಭೆ

ಬಿಜೆಪಿಯವರಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಗೊಂದಲವಿದೆ. ಆತ್ಮ ವಿಶ್ವಾಸವಿದ್ದರೆ ಗ್ಯಾರಂಟಿ ನಮಗೆ ಬೇಡ ಎಂದು ಬರೆದುಕೊಡಿ ಎಂದು ಬಿಜೆಪಿಗೆ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಶಾಸಕಿ ನಯನಾ ಮೋಟಮ್ಮ ಪ್ರತಿಕ್ರಿಯಿಸಿದ್ದು, ರಾಮ ಮೆಚ್ಚುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ. ಗ್ಯಾರಂಟಿ ಯೋಜನೆ ಮೂಲಕ ರಾಮ ಮೆಚ್ಚುವ ಕೆಲಸ ಮಾಡುತ್ತೇವೆ. ಎಲ್ಲಿಯವರೆಗೆ ನಮ್ಮ ಸರ್ಕಾರ, ನಮ್ಮ ಮುಖ್ಯಮಂತ್ರಿ ಇರುತ್ತಾರೋ ಅಲ್ಲಿವರೆಗೂ ಗ್ಯಾರಂಟಿ ಇರುತ್ತೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.