ಚಿಕ್ಕಮಗಳೂರು: ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ಎಸ್ಟೇಟ್ ಮಾಲಿಕ, ಅಂಗವಿಕಲ ಮಹಿಳೆ ಕಂಗಾಲು

ಅಂಗವಿಕಲ ಪತ್ನಿಗಾಗಿ ಪತಿ ಕಾಫಿ ತೋಟದ ಎದರಿನ ರಸ್ತೆ ಬದಿಯಲ್ಲಿ ಪೆಟ್ಟಿಗೆ ಅಂಗಡಿ ಹಾಕಿಕೊಂಡಿದ್ದರು. ಕಳೆದ 15 ದಿನಗಳ ಹಿಂದೆ ಅಂಗಡಿ ಹಾಕಲಾಗಿದ್ದು, ಚೆನ್ನಾಗಿ ನಡೆಯುತ್ತಿತ್ತು. ಮತ್ತು ಈ ಅಂಗಡಿಯನ್ನು ಹಾಕಲು ಗಾಮ ಪಂಚಾಯಿತಿಯ ಅನುಮತಿ ಕೂಡ ಪಡೆಯಲಾಗಿತ್ತು. ಪೆಟ್ಟಿಗೆ ಅಂಗಡಿ ಇಟ್ಟಿದ್ದಕ್ಕೆ ಎಸ್ಟೇಟ್​ ಮಾಲಿಕ ಆಕ್ರೋಶಗೊಂಡು ಏನು ಮಾಡಿದ? ಇಲ್ಲಿದೆ ಓದಿ...

ಚಿಕ್ಕಮಗಳೂರು: ಪೆಟ್ಟಿಗೆ ಅಂಗಡಿ ಧ್ವಂಸಗೊಳಿಸಿದ ಎಸ್ಟೇಟ್ ಮಾಲಿಕ, ಅಂಗವಿಕಲ ಮಹಿಳೆ ಕಂಗಾಲು
ಧ್ವಂಸಗೊಂಡ ಪೆಟ್ಟಿಗೆ ಅಂಗಡಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 09, 2024 | 9:19 AM

ಚಿಕ್ಕಮಗಳೂರು, ಫೆಬ್ರವರಿ 09: ಕಾಫಿ ತೋಟದ (Coffe Estate) ಎದುರು ರಸ್ತೆ ಬದಿ ಪೆಟ್ಟಿಗೆ ಅಂಗಡಿ (Shop) ತೆರದಿದ್ದಕ್ಕೆ ಆಕ್ರೋಶಗೊಂಡ ಮಾಲಿಕ ಅಂಗಡಿಯನ್ನು ಧ್ವಂಸ ಮಾಡಿರುವ ಘಟನೆ ಮೂಡಿಗೆರೆ (Mudigere) ತಾಲೂಕಿನ ಬಕ್ಕಿ ಗ್ರಾಮದಲ್ಲಿ ನಡೆದಿದೆ. ಅಂಗವಿಕಲ ಮಹಿಳೆ ಅಂಗಡಿಯನ್ನು ನಡೆಸುತ್ತಿದ್ದರು. ಅಂಗವಿಕಲವಿರುವ ಪತ್ನಿಗಾಗಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಪತಿ ರಾಜು 15 ದಿನಗಳ ಹಿಂದೆ ರಸ್ತೆ ಬದಿ ಅಂಗಡಿ ತೆರದಿದ್ದರು. ಮಹಿಳೆ ಅಂಗಡಿಯನ್ನು ನಡೆಸುತ್ತಿದ್ದರು. ಇದೀಗ ಕಾಫಿ ತೋಟದ​ ಮಾಲೀಕ ವಿದ್ಯಾಶ್ರೀ ಸತ್ಯೇಂದ್ರ ಅಂಗಡಿಯಲ್ಲಿನ ಸಾಮಾಗ್ರಿಗಳನ್ನು ಮತ್ತು ಆಹಾರವನ್ನು ಹೊರಗೆ ಚೆಲ್ಲಿ ದರ್ಪ ಮೆರೆದಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ವಿದ್ಯಾಶ್ರೀ ಸತ್ಯೇಂದ್ರ ಅವರ ಈ ವರ್ತನೆಯಿಂದ ಬಡ ಅಂಗವಿಕಲ ಮಹಿಳೆ ಕಂಗಾಲು ಆಗಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಿಡಿಗೇಡಿಗಳ ಕೃತ್ಯಕ್ಕೆ ಹೊತ್ತಿ ಉರಿದ ಗುಜರಿ ಅಂಗಡಿ

ಬೆಳಗಾವಿ: ವಡಗಾಂವನ ಡೊರ್ ಗಲ್ಲಿಯಲ್ಲಿರುವ ಗುಜರಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಗುಜರಿ ಅಂಗಡಿ ರಿಯಾಜ್ ಮುರಗೋಡ ಎಂಬುವರಿಗೆ ಸೇರಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಉಡುಪಿ: ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ; ಚಿನ್ನದ ಅಂಗಡಿಯಲ್ಲಿದ್ದ ಮೂವರು ಬಾಲಕಾರ್ಮಿಕರ ರಕ್ಷಣೆ

ದೇಸವಸ್ಥಾನದ ಹುಂಡಿ ಕದ್ದ ಕಳ್ಳರು

ಮೈಸೂರು: ಹುಣಸೂರು ತಾಲೂಕಿನ ಮಲ್ಲಿನಾಥಪುರ ಗ್ರಾಮದ ಹೊಸಿಲು ಮಾರಮ್ಮ ದೇವಸ್ಥಾನದ ಹುಂಡಿ ಕಳುವಾಗಿದೆ. ಕಳ್ಳರು ಹುಂಡಿಯಲ್ಲಿದ್ದ ನಾಣ್ಯ ಬಿಟ್ಟು ನೋಟುಗಳನ್ನು ಕದ್ದು ಪರಾರಿಯಾಗಿದ್ದಾರೆ. ಹುಂಡಿಗಳನ್ನು ಸಮೀಪದ ಜಮೀನಿನಲ್ಲಿ ಬಿಸಾಡಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಸರಣಿ ಮನೆ ಕಳ್ಳತನ

ಯಾದಗಿರಿ: ಸುರಪುರ ನಗರದ ಗಜಾನನ ನಗರ, ಟೀಚರ್ಸ್ ಕಾಲೋನಿಯಲ್ಲಿನ ಎರಡು ಮನೆಗಳಲ್ಲಿ ಕಳ್ಳತನವಾಗಿದೆ. ಎರಡು ಮನೆಗಳ ಬೀಗ ಮುರಿದು ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ  ಬಾಬುಮಿಯ್ಯಾ ಹಾಗೂ ಲಕ್ಮೀನಾರಾಯಣ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಫಿ ಕಳವು ಮಾಡಿದ್ದ ಆರೋಪಿಗಳ ಬಂಧನ

ಮಡಿಕೇರಿ: ಕಾಫಿ ಕಳವು ಮಾಡಿದ್ದ ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಯ (45), ಶರತ್ (31), ಸಾಜು(44), ಅಬ್ದುಲ್ ಅಜೀಜ್ (49) ಬಂಧಿತ ಆರೋಪಿಗಳು. ಆರೋಪಿಗಳು ಜನವರಿ 31 ರಂದು ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಚಿದಾನಂದ ಪೈ ಎಂಬುವರಿಗೆ ಸೇರಿದ 350 ಕೆಜಿ ಕಾಫಿ‌ ಕಾಫಿ ಕಳ್ಳತನ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:11 am, Fri, 9 February 24

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ