ಕನ್ನಡ ರಾಜ್ಯೋತ್ಸವದ ದಿನವೇ ಮನಕಲಕುವ ಘಟನೆ; ರೋಗಿಗಳನ್ನ ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ತಂದ ಹಳ್ಳಿಗರು

ಇಲ್ಲಿನ ಜನ ರಸ್ತೆ ಇಲ್ಲದ ಖಾಸಗಿ ಜಮೀನಿನಲ್ಲಿ ಆರೋಗ್ಯ ಹದಗೆಟ್ಟವರನ್ನು ಹೊತ್ತುಕೊಂಡು  ಓಡಾಡುತ್ತಿದ್ದಾರೆ. ಹೌದು, ಒಂದೂವರೆ ಕಿ.ಮೀ ವರೆಗೆ ರಸ್ತೆಗೆ ಜೋಳಿಗೆ ಮೂಲಕ ಹೊತ್ತುಕೊಂಡು ಬಂದು, ಬಳಿಕ ಬೇರೆ ವಾಹನದ ಮೂಲಕ 16 ಕಿ.ಮೀ ಸುತ್ತಿಕೊಂಡು ಬರಬೇಕು. ಇರುವ ರಸ್ತೆಗೆ ಆಟೋ ಕೇಳಿದರೆ 1500 ದಿಂದ 2000 ಬಾಡಿಗೆ ಕೇಳುತ್ತಾರಂತೆ.

ಕನ್ನಡ ರಾಜ್ಯೋತ್ಸವದ ದಿನವೇ ಮನಕಲಕುವ ಘಟನೆ; ರೋಗಿಗಳನ್ನ ಜೋಳಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ತಂದ ಹಳ್ಳಿಗರು
ಕಳಸ ತಾಲೂಕಿನಲ್ಲಿ ರಸ್ತೆ ಇಲ್ಲದೆ ಜನರ ಪರದಾಟ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 01, 2023 | 5:22 PM

ಚಿಕ್ಕಮಗಳೂರು, ನ.01: ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ, ಇನ್ನೂ ಕೂಡ ರಾಜ್ಯದ ಕೆಲ ಹಳ್ಳಿಗಳಿಗೆ ಸರಿಯಾದ ರಸ್ತೆ ಇರದೇ ಇರುವುದು ಶೋಕನೀಯ. ಹೌದು, ಕಾಫಿನಾಡು ಚಿಕ್ಕಮಗಳೂರು(Chikkamagalur) ಜಿಲ್ಲೆಯ ಕಳಸ ತಾಲೂಕಿನ ಹಿನಾರಿ ಗ್ರಾಮದಲ್ಲಿ ಜನ ರಸ್ತೆ ಇಲ್ಲದೆ ರೋಗಿಗಳನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುವಂತಹ ದುಸ್ಥಿತಿ ಇದೆ. ಕರ್ನಾಟಕದ ಸುವರ್ಣ ಸಂಭ್ರಮ ಮಹೋತ್ಸವದ ವೇಳೆಯೇ ಮನಕಲಕುವ ಘಟನೆ ನಡೆದಿದ್ದು, ಪಾರ್ಶ್ವವಾಯು ವೃದ್ದನನ್ನು ಜೋಳಿಗೆಯಲ್ಲಿ ಎತ್ತುಕೊಂಡು ಆಸ್ಪತ್ರೆಗೆ ತಂದಿದ್ದಾರೆ.

ಕಳಸ ತಾಲೂಕಿನಲ್ಲಿ ಜೋಳಿಗೆ ಜೀವನ ಜೀವಂತ

ಇಲ್ಲಿನ ಜನ ರಸ್ತೆ ಇಲ್ಲದ ಖಾಸಗಿ ಜಮೀನಿನಲ್ಲಿ ಆರೋಗ್ಯ ಹದಗೆಟ್ಟವರನ್ನು ಹೊತ್ತುಕೊಂಡು  ಓಡಾಡುತ್ತಿದ್ದಾರೆ. ಹೌದು, ಒಂದೂವರೆ ಕಿ.ಮೀ ವರೆಗೆ ರಸ್ತೆಗೆ ಜೋಳಿಗೆ ಮೂಲಕ ಹೊತ್ತುಕೊಂಡು ಬಂದು, ಬಳಿಕ ಬೇರೆ ವಾಹನದ ಮೂಲಕ 16 ಕಿ.ಮೀ ಸುತ್ತಿಕೊಂಡು ಬರಬೇಕು. ಇರುವ ರಸ್ತೆಗೆ ಆಟೋ ಕೇಳಿದರೆ 1500 ದಿಂದ 2000 ಬಾಡಿಗೆ ಕೇಳುತ್ತಾರಂತೆ. ರಸ್ತೆ ಇಲ್ಲದೆ ಜನ ಖಾಸಗಿಯವರ ಜಾಗದಲ್ಲಿ ಜೋಳಿಗೆ ಕಟ್ಟಿಕೊಂಡು ಕೂಡ ಬರಬೇಕು. ರಸ್ತೆಗಾಗಿ ಮನವಿ ಮಾಡಿದ್ರೆ, 3 ವರ್ಷದ ಹಿಂದೆಯೇ ಹಣ ಬಂದಿದೆ, ರಸ್ತೆ ಮಾಡುತ್ತೇವೆ ಎನ್ನುತ್ತಿದ್ದಾರಂತೆ.

ಇದನ್ನೂ ಓದಿ:ರಸ್ತೆಗಳಿಲ್ಲದೆ ಪರದಾಟ: ಜೋಳಿಗೆಯಲ್ಲಿ ಹೊತ್ತು ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ ಜನ, ರಸ್ತೆಗಾಗಿ ಎಷ್ಟೇ ಮನವಿ ಮಾಡಿದರೂ ಸಿಗದ ಪರಿಹಾರ

ಇನ್ನು ಇದು ಒಂದು ಜಿಲ್ಲೆಯ ಕಥೆಯಲ್ಲ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕೆಂದಗಿ ಗ್ರಾಮದಲ್ಲೂ ಇಂತಹುದೆ ಪರಿಸ್ಥಿತಿ ಇದೆ. ಕಳೆದ ಆಗಸ್ಟ್​ 27 ರಂದು ಈ ಗ್ರಾಮದ ಓರ್ವ ವ್ಯಕ್ತಿ, ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲಿಗೆ ಗಂಭೀರ ಗಾಯವಾಗಿತ್ತು. ಆದರೆ, ಭಾರೀ ಮಳೆಯಿಂದಾಗಿ ಗ್ರಾಮದ ಬಳಿ ಹರಿಯುವ ನಾಲ್ಕು ಹಳ್ಳಗಳಿಂದ ಜಲದಿಗ್ಭಂದನ ಉಂಟಾಗಿತ್ತು. ನಾಲ್ಕೈದು ದಿನಗಳ ಬಳಿಕ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನಲೆ  ಗ್ರಾಮಸ್ಥರು ಒಟ್ಟಾಗಿ ಜೋಳಿಗೆ ಮೂಲಕ ಗಾಯಗೊಂಡಿದ್ದ ಉಮೇಶ್ ಎಂಬಾತನನ್ನು​​ ಹೆಗಲ ಮೇಲೆ ಹೊತ್ತುಕೊಂಡು ಸುಮಾರು 15 ಕಿಮೀ ದೂರ ಕಾಡಿನ ಹಾದಿಯಲ್ಲಿ ನಡೆದುಕೊಂಡು ಬಂದು ಆಸ್ಪತ್ರೆ ಸೇರಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Wed, 1 November 23