ನಾಪತ್ತೆಯಾಗಿದ್ದ ಚಿಕ್ಕಮಗಳೂರು ವಸತಿ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆ

| Updated By: ವಿವೇಕ ಬಿರಾದಾರ

Updated on: Mar 15, 2025 | 10:58 AM

ಚಿಕ್ಕಮಗಳೂರಿನ ತೇಗೂರು ಗ್ರಾಮದ ಡಾ. ಅಬ್ದುಲ್ ಕಲಾಂ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಯಶ್ವಿತ್ ಮತ್ತು ತರುಣ್ ಎಂಬ ಇಬ್ಬರು 9ನೇ ತರಗತಿ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಾರ್ಚ್ 3 ರಂದು ಶಾಲೆಯಿಂದ ಹೊರಟ ಈ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ದರು. ಪೊಲೀಸರ ತೀವ್ರ ಹುಡುಕಾಟದ ನಂತರ ಅವರು ಪತ್ತೆಯಾಗಿದ್ದು, ಸುರಕ್ಷಿತವಾಗಿದ್ದಾರೆ.

ನಾಪತ್ತೆಯಾಗಿದ್ದ ಚಿಕ್ಕಮಗಳೂರು ವಸತಿ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆ
ನಾಪತ್ತೆಯಾಗಿದ್ದ ಚಿಕ್ಕಮಗಳೂರು ವಸತಿ ಶಾಲೆಯ ವಿದ್ಯಾರ್ಥಿಗಳು ಪತ್ತೆ
Follow us on

ಚಿಕ್ಕಮಗಳೂರು, ಮಾರ್ಚ್​ 15: ಚಿಕ್ಕಮಗಳೂರು (Chikkamagaluru) ಹೊರವಲಯದ ತೇಗೂರು ಗ್ರಾಮದ ಬಳಿ ಇರುವ ಡಾ. ಅಬ್ದುಲ್​ ಕಲಾಂ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು (Students) ಶುಕ್ರವಾರ (ಮಾ.14) ರಾತ್ರಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಬಾಳೆಹೊನ್ನೂರು ಮೂಲದ ಯಶ್ವಿತ್ ಸಾಲಿಯಾನ್​​​ ಮತ್ತು ಬೆಂಗಳೂರು ಮೂಲದ ತರುಣ್ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮಾರ್ಚ್​ 3ರಂದು ವಸತಿ ಶಾಲೆಯಿಂದ‌ ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಏನಿದು ಘಟನೆ

ಯಶ್ವಿತ್, ತರುಣ್ ಉತ್ತಮ ಸ್ನೇಹಿತರಾಗಿದ್ದಾರೆ. ಓದಿನಲ್ಲಿ ಆಸಕ್ತಿ ಇಲ್ಲದೆ ಇದ್ದರೂ ವಸತಿ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರು.‌ 9 ನೇ ತರಗತಿ ಪರೀಕ್ಷೆ ಮುಗಿಸಿದ ಬಳಿಕ 10 ನೇ ತರಗತಿಯ ಸಿದ್ದತೆಗಾಗಿ ವಿಶೇಷ ತರಗತಿಗಳು ನಡೆಯುತ್ತಿದ್ದು, ಇದರಿಂದ ಪರೀಕ್ಷೆ ಮುಗಿದರೂ ರಜೆ ಮಾತ್ರ ಸಿಕ್ಕಿರಲಿಲ್ಲ. ವಿಶೇಷ ತರಗತಿ ಮುಗಿಸಿ ರೂಮ್ ಸೇರಿದ ಇಬ್ಬರು ಮೊದಲೇ ಮಾಡಿದ ಪ್ಲಾನ್​ನಂತೆ ವಸತಿ ಶಾಲೆಯ ಕಾಂಪೌಂಡ್ ಹಾರಿದ್ದಾರೆ. ಬಳಿಕ 5 ಕಿಮೀ ನಡೆದು ಇಬ್ಬರೂ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದ ಬಸ್​ ಹತ್ತಿ ಮಂಗಳೂರಿಗೆ ತೆರಳಿದ್ದಾರೆ.

ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರು ದಾಖಲಿಸಿಕೊಂಡ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು, ವಿದ್ಯಾರ್ಥಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.

ಇದನ್ನೂ ಓದಿ
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
ಬೆಂಕಿಯಿಂದ ಅರಣ್ಯ ನಾಶ ತಡೆಗೆ ಚಂದ್ರದ್ರೋಣ ಪರ್ವತಕ್ಕೆ ಡ್ರೋನ್ ಕಣ್ಗಾವಲು
ಚಿಕ್ಕಮಗಳೂರು: ಸರ್ಕಾರಿ ಶಾಲೆಗೆ ಕಾಫಿ ಉದ್ಯಮಿಯಿಂದ 2.18 ಕೋಟಿ ರೂ. ದೇಣಿಗೆ!
ಸರ್ವೇ ಅಧಿಕಾರಿ ಸಾವಿನ ಹಿಂದೆ ಮಹಿಳೆಯ ಕರಿನೆರಳು: ಮೊಬೈಲ್​ ರಹಸ್ಯ ಬಯಲು

ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: ಚಂದ್ರದ್ರೋಣ ಪರ್ವತ ಸಾಲಿನ ಪ್ರವಾಸಿ ತಾಣಗಳಿಗೆ ನಿರ್ಬಂಧ

ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿದಾಗ, ಚಿಕ್ಕಮಗಳೂರು ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್​ಗಾಗಿ ಕಾಯುತ್ತಿರುವ ದೃಶ್ಯ ಕಂಡಿದೆ. ಬಳಿಕ, ಇಬ್ಬರೂ ಬೆಂಗಳೂರು ಬಸ್​ ಹತ್ತಿರುವ ಮಾಹಿತಿ ಆಧಾರದ ಮೇಲೆ ಪೊಲೀಸರು ಬೆಂಗಳೂರಿನ ಹುಡುಕಾಟ ನಡೆಸಿದ್ದಾರೆ. ಅದೇರೀತಿ ಅನುಮಾನಗೊಂಡು ಮಂಗಳೂರಿನಲ್ಲೂ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಪೊಲೀಸರು ಇಬ್ಬರೂ ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ