Chikkamagaluru:ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ, ಪ್ರಾಣಿಗಳ‌ ಶಿಕಾರಿ ಶಂಕೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಬಂದೂಕಿನ ಖಾಲಿ ಕಾಟ್ರೇಜ್ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Chikkamagaluru:ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ,  ಪ್ರಾಣಿಗಳ‌ ಶಿಕಾರಿ ಶಂಕೆ
ಖಾಲಿ ಕಾಟ್ರೇಜ್​ ಪತ್ತೆ

Updated on: Mar 08, 2023 | 3:43 PM

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ (Mudgere) ತಾಲೂಕಿನ ಸಾರಗೋಡು ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ (Forest area) ಬಂದೂಕಿನ (Gun) ಖಾಲಿ ಕಾಟ್ರೇಜ್ (Cartridges) ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಪೊಲೀಸರು (Police) ಬಂದೂಕುಗಳನ್ನು ಪತ್ತೆ ಹಚ್ಚಿದ ಬೆನ್ನೆಲ್ಲೇ ಸಾರಗೋಡು ತತ್ಕೋಳ ಅರಣ್ಯ ಪ್ರದೇಶದ ವಗೇರ್​​​​-ಕನ್ನಗದ್ದೆಗೆ ಸಂಪರ್ಕಿಸುವ ರಸ್ತೆ ಬಳಿ ದಲ್ಲಿ 60ಕ್ಕೂ ಹೆಚ್ಚು ಖಾಲಿ ಕಾಟ್ರೇಜ್ ಪತ್ತೆಯಾಗಿವೆ. ಈ ಕಾಟ್ರೇಜ್​​ಗಳನ್ನು ಕಾಡು ಪ್ರಾಣಿಗಳ ಬೇಟೆಗಾಗಿ ಬಳೆಕೆ ಮಾಡುತ್ತಿದ್ದರಾ ಎಂಬ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಸಾರಗೋಡು ತತ್ಕೋಳ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಹೆಚ್ಚಾಗಿದ್ದು, ಅನಧಿಕೃತ ಬಂದೂಕುಗಳ ವಶದ ಬೆನ್ನಲ್ಲೆ ಖಾಲಿ‌ ಕಾಟ್ರೆಜ್​ಗಳು ಪತ್ತೆಯಾಗಿದ್ದು ಆಂತಕ ಮೂಡಿಸಿದೆ.

ಹಲವು ಅನುಮಾನಗಳನ್ನು ಮೂಡಿಸಿದ ಕಾಟ್ರೇಜ್ ಪತ್ತೆ

ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಫಿ ಬೆಳೆಯುವುದರಿಂದ, ಬೆಳಗಾರರು ಕಾಡು ಪ್ರಾಣಿಗಳು ಹಾಗೂ ಕಳ್ಳ-ಕಾಕರಿಂದ ಬೆಳೆ ಹಾಗೂ ಆತ್ಮರಕ್ಷಣೆಗೆ ಬಂದೂಕಗಳನ್ನು ಮನೆಯಲ್ಲಿಟ್ಟುಕೊಂಡಿರುತ್ತಾರೆ. ಈ ಬಂದೂಕುಗಳು ಅಕ್ರಮ ಮತ್ತು ಸಕ್ರಮದಿಂದ ಕೂಡಿರುತ್ತವೆ. ಈ ಬಂದೂಕುಗಳ ಮೂಲಕ ಕೆಲವರು ಪ್ರಾಣಿ ಭೇಟೆಯನ್ನು ಆಡುತ್ತಾರೆ. ಈಗ ಅರಣ್ಯ ಮೀಸಲು ಪ್ರದೇಶದಲ್ಲಿ ಪತ್ತೆಯಾಗಿರುವ 60 ಕಾಟ್ರೇಜ್​ಗಳು ಪ್ರಾಣಿ ಬೇಟೆಗಾಗಿ ಬಳಸಿದ್ದಾರಾ? ಎಂಬ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಬಂದೂಕುಗಳು ಪತ್ತೆಯಾದ ಬೆನ್ನಲ್ಲೇ ಕಾಟ್ರೇಜ್​ಗಳು ಪತ್ತೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಂಗಳೂರಿನ ಬಲ್ಮಠ ಸಿಎಸ್ಐ ಬಿಷಪ್ ಹೌಸ್​​ನ ಮಹಿಳಾ ಸೆಕ್ರೆಟರಿಗೆ ಲೈಂಗಿಕ ಕಿರುಕುಳ ಆರೋಪ, ಮಧ್ಯೆ ಪ್ರವೇಶಿಸಿದ ಒಡನಾಡಿ ಸಂಸ್ಥೆ

ಇನ್ನು ಪಕ್ರರಣವನ್ನು ದಾಖಲಿಸಿಕೊಂಡ ಪೊಲೀಸರು ಇಷ್ಟೊಂದು ಕಾಟ್ರೇಜ್​ಗಳು ಎಲ್ಲಿಂದ ಬಂದವು. ಯಾವುದಕ್ಕೆ ಬಳಕೆ ಮಾಡಿದ್ದಾರೆ. ಇದರ ಹಿಂದಿರುವ ಕೈಗಳು ಯಾರದ್ದು ಎಂದು ಹಲವು ಆಯಾಮಗಳಿಂದ ತನಿಗೆ ಮಾಡುತ್ತಿದ್ದಾರೆ. ಹಾಗೆ ಮಲೆನಾಡಲ್ಲಿ 12 ಸಾವಿರಕ್ಕೂ ಅಧಿಕ ಸಕ್ರಮ ಬಂದೂಕಗಳಿದ್ದರೇ, ಅದರರ್ಧದಷ್ಟು ಅಕ್ರಮ ಬಂದೂಕುಗಳು ಇರುವ ಮಾಹಿತಿ ಇದ್ದು, ಬಂದೂಕುಗಳು ಬೆಳೆ-ಪ್ರಾಣ ಉಳಿಸಿಕೊಳ್ಳುವುದರ ಜೊತೆ ಪ್ರಾಣಿಬೇಟೆ ಹಾಗೂ ಸಮಾಜದಲ್ಲಿ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಕೆಯಾಗಿದ್ದು ಉಂಟು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Wed, 8 March 23