ಶೃಂಗೇರಿ: ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಾಲೂಕು ಆಸ್ಪತ್ರೆ ಮುಂದೆ ಕುಟುಂಬಸ್ಥರಿಂದ ಪ್ರತಿಭಟನೆ ನಡೆಸಲಾಗಿದೆ. ತನಿಖೆಗೆ ಆಗ್ರಹಿಸಿ ಮೃತನ ಕುಟುಂಬಸ್ಥರು, ಸ್ಥಳೀಯರು ಧರಣಿ ನಡೆಸಿದ್ದಾರೆ. ಅಮಾಯಕನ ಸಾವಿಗೆ ತಹಶೀಲ್ದಾರ್ ಅಂಬುಜಾ, ಉನ್ನತ ಅಧಿಕಾರಿಗಳೇ ಹೊಣೆ ಎಂದು ಪ್ರತಿಭಟನೆ ನಡೆಸಲಾಗಿದೆ. ಅಮಾಯಕನ ಸಾವಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯ ಕೇಳಿಬಂದಿದೆ.
ತಹಶೀಲ್ದಾರ್ ಕಾರು ಚಾಲಕ ವಿಜೇತ್ (26) ನೇಣಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹೆಗ್ತೂರು ಗ್ರಾಮದಲ್ಲಿ ವಿಜೇತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಜನವರಿ 6 ರಂದು ತಹಶೀಲ್ದಾರ್ ಅಂಬುಜಾ ಎಸಿಬಿ ಬಲೆಗೆ ಬಿದ್ದಿದ್ದರು. ಅಮಾಯಕರಿಗೆ ಬೋಗಸ್ ಹಕ್ಕುಪತ್ರ ನೀಡಿ ವಂಚಿಸಿದ್ದರು. ಎಸಿಬಿ ದಾಳಿ ಬಳಿಕ ಜೈಲುಪಾಲಾಗಿದ್ದ ತಹಶೀಲ್ದಾರ್ ಅಂಬುಜಾ ಸಿಕ್ಕಿಬಿದ್ದಿದ್ದರು. ಬೆಳವಣಿಗೆ ಮಧ್ಯೆಯೇ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೋಗಸ್ ಹಕ್ಕುಪತ್ರ ನೀಡಿ ಕೋಟ್ಯಂತರ ರೂ. ಅವ್ಯವಹಾರ ಮಾಡಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಬ್ರೋಕರ್ಸ್ ಹಾವಳಿ ಮಿತಿಮೀರಿದೆ. ಬ್ರೋಕರ್‌ಗಳ ಬೆದರಿಕೆಯಿಂದಲೇ ವಿಜೇತ್ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಕೋಲಾರ: ದೇವರಾಜ ಅರಸು ಎಜುಕೇಷನ್ ಟ್ರಸ್ಟ್ನಲ್ಲಿ ಜಟಾಪಟಿ; ಜಾಲಪ್ಪ ಮೊಮ್ಮಗನಿಂದ ಠಾಣೆಗೆ ದೂರು
ದೇವರಾಜ ಅರಸು ಎಜುಕೇಷನ್ ಟ್ರಸ್ಟ್ನಲ್ಲಿ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿ ಆರ್.ಎಲ್. ಜಾಲಪ್ಪ ಮೊಮ್ಮಗ ಅರವಿಂದ್ನಿಂದ ಠಾಣೆಗೆ ದೂರು ನೀಡಲಾಗಿದೆ. ಕೋಲಾರ ನಗರ ಪೊಲೀಸ್ ಠಾಣೆಗೆ ಅರವಿಂದ್ ದೂರು ನೀಡಿದ್ದಾರೆ. ಜಾಲಪ್ಪ ಕುಟುಂಬಸ್ಥರು, ಜಿ.ಹೆಚ್.ನಾಗರಾಜ್ ಮಧ್ಯೆ ಜಟಾಪಟಿ ನಡೆದಿತ್ತು. ನಕಲಿ ವಿಲ್, ಸೀಲ್ಡ್ ಕವರ್ ದಾಖಲೆ ಸುಳ್ಳು ಎಂದು ದೂರು ನೀಡಲಾಗಿದೆ.
ಎಲ್ಲಾ ದಾಖಲೆಗಳು ನಕಲಿ ಇವೆ ಪರಿಶೀಲಿಸಿ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಜಿ.ಹೆಚ್. ನಾಗರಾಜ್, ಹೊಸ ಕಮಿಟಿಯವರು ಸುಳ್ಳು ದಾಖಲೆ ನೀಡಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಮಾಡಿರುವ ಆರೋಪದಡಿ ದೂರು ಸಲ್ಲಿಕೆ ಮಾಡಲಾಗಿದೆ. ಕೋಲಾರ ನಗರ ಠಾಣೆಗೆ ಜಾಲಪ್ಪ ಮೊಮ್ಮಗ ಅರವಿಂದ್ ದೂರು ನೀಡಿದ್ದಾರೆ. ಜ.24ರಂದು ಜಾಲಪ್ಪ ಕುಟುಂಬಸ್ಥರು ಈ ಸಂಬಂಧ ಜಾಲಪ್ಪ ಮೆಡಿಕಲ್ ಕಾಲೇಜು ಎದುರು ಪ್ರತಿಭಟನೆ ಮಾಡಿದ್ದರು.
ಬೆಂಗಳೂರು: ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಭುವನೇಶ್ವರ್- ಬೆಂಗಳೂರು ಪ್ರಶಾಂತಿ ಎಕ್ಸ್ಪ್ರೆಸ್ನಲ್ಲಿ ಗಾಂಜಾ ಸಾಗಣೆ ಮಾಡಲಾಗುತ್ತಿತ್ತು. ಬೆಂಗಳೂರಿಗೆ ಬರ್ತಿದ್ದಂತೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 15.5 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಯಾದಗಿರಿ: ಶಾರ್ಟ್ ಸರ್ಕ್ಯೂಟ್ನಿಂದ 10 ಎಕರೆ ಕಬ್ಬು ಬೆಳೆ ಹಾನಿ
ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ 10 ಎಕರೆ ಕಬ್ಬು ಬೆಳೆ ಹಾನಿ ಆಗಿರುವ ದುರ್ಘಟನೆ ನಡೆದಿದೆ. ರಮೇಶ್ ಎಂಬ ರೈತನಿಗೆ ಸೇರಿದ 10 ಎಕರೆ ಕಬ್ಬು ಬೆಳೆ ಬೆಂಕಿಗಾಹುತಿ ಆಗಿದೆ. ಕಾರ್ಮಿಕರ ಸಮಸ್ಯೆ ಎಂದು ಕಬ್ಬು ಕೊಂಡೊಯ್ಯಲು ಕಾರ್ಖಾನೆ ವಿಳಂಬ ಮಾಡಿದ್ದಕ್ಕೆ ಕಾರ್ಖಾನೆ ವಿರುದ್ಧ ರೈತನ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಎಸಿಬಿ ಬಲೆಗೆ ಶೃಂಗೇರಿ ತಹಶೀಲ್ದಾರ್, ಗಾಂಜಾ ಮಾರುತ್ತಿದ್ದವರ ಬಂಧನ, ಶಾಸಕ ಬೋಪಯ್ಯಗೆ ಬ್ಲಾಕ್ಮೇಲ್
ಇದನ್ನೂ ಓದಿ: Crime News: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಲಾಯ್ಡ್ ಡಿಸೋಜ ಸಾವು; ಘಟನೆಯ ವಿವರ ನೀಡಿದ ಪೊಲೀಸ್ ಆಯುಕ್ತ