30 ಮಂಗಗಳ ಮಾರಣ ಹೋಮ: ಮತ್ತುಬರಿಸಿ ಹೊಡೆದು ಕೊಂದ ವಿಕೃತಿ ಮನಸ್ಸಿನ ಅಟ್ಟಹಾಸ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಳೆಹಣ್ಣಿಗೆ ಜ್ಞಾನ ತಪ್ಪುವ ಔಷಧವಿಟ್ಟು ಬಳಿಕ 30 ಮಂಗಗಳನ್ನ ಕೊಂದ ಹಾಕಿರುವ ಅಮಾನವೀಯ ಘಟನೆ ನಡೆದಿದೆ.

30 ಮಂಗಗಳ ಮಾರಣ ಹೋಮ: ಮತ್ತುಬರಿಸಿ ಹೊಡೆದು ಕೊಂದ ವಿಕೃತಿ ಮನಸ್ಸಿನ ಅಟ್ಟಹಾಸ
ಚಿಕ್ಕಮಗಳೂರಿನಲ್ಲಿ ಮತ್ತುಬರಿಸಿ 30 ಮಂಗಗಳನ್ನು ಹೊಡೆದು ಕೊಂದ ಕಿಡಿಗೇಡಿಗಳು
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 07, 2024 | 4:36 PM

ಚಿಕ್ಕಮಗಳೂರು, ಜೂ.07: ಬಾಳೆಹಣ್ಣಿಗೆ ಜ್ಞಾನ ತಪ್ಪುವ ಔಷಧವಿಟ್ಟು 30 ಮಂಗಗಳನ್ನ(Monkey) ಕೊಂದ ಹಾಕಿದ ಅಮಾನವೀಯ ಘಟನೆಯ ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಎನ್​​.ಆರ್​.ಪುರ ತಾಲೂಕಿನ ದ್ಯಾವಣ ಗ್ರಾಮದ ನಡೆದಿದೆ. ಬಳಿಕ ಅವುಗಳನ್ನು ತಂದು ರಸ್ತೆಗೆ ಎಸೆದು ಹೋಗಿದ್ದಾರೆ. ಹೌದು, ಬಾಳೆಹಣ್ಣು ತಿಂದು ಮಂಗಗಳು ಜ್ಞಾನ ತಪ್ಪಿದ ಬಳಿಕ ತಲೆಗೆ ಹೊಡೆದು 16 ಗಂಡು, 14 ಹೆಣ್ಣು ಹಾಗೂ 4 ಮರಿಗಳನ್ನು ಹತ್ಯೆ ಮಾಡಲಾಗಿದೆ.

ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ಕಿಡಿ

ಇನ್ನು 30 ಮಂಗಗಳ ತಲೆಯಲ್ಲೂ ಒಂದೇ ರೀತಿಯ ಗಾಯವಾಗಿ ರಕ್ತಸುರಿದು ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನಿಡಿದ್ದು, ಡಿ.ಎಫ್.ಓ, ಆರ್.ಎಫ್.ಓ, ಪಿ.ಎಸ್.ಐ, ಪಶುಸಂಗೋಪನೆ, ಪಶುವೈದ್ಯ, ಪಂಚಾಯಿತಿ ಅಧಿಕಾರಿಗಳು ಹಾಗೂ ಆಶಾಕಾರ್ಯರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಗಳ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತ ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ಕಿಡಿಕಾರಿದ್ದಾರೆ. ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ವಿಡಿಯೋ ನೋಡಿ: ಗ್ರಾ ಪಂ ಮಹಿಳಾ ಅಧಿಕಾರಿಯ ಆ ಒಂದು ಉಪಾಯದಿಂದ ಮಂಗಗಳ ಕಾಟ ದೂರವಾಯಿತು! ಏನದು?

ಈ ಬಾರಿಯ ರಣಬಿಸಿಲಿಗೆ ಕೋತಿಯೊಂದು ಆಹಾರ ಹುಡುಕಾಡುವ ದೃಶ್ಯ ಕರಳು ಹಿಂಡುವಂತಿತ್ತು

ಈ ಬಾರಿಯ ರಣ ಬಿಸಿಲಿಗೆ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳು ಕೂಡ ಹೈರಾಣವಾಗಿತ್ತು. ಗದಗ ಜಿಲ್ಲೆಯಲ್ಲಿ ಕೋತಿಯೊಂದು ಆಹಾರ ಹುಡುಕಾಡುವ ದೃಶ್ಯ ಕರಳು ಚುರ್ ಎನ್ನುವಂತಿತ್ತು. ಬೈಕ್ ಮೇಲೆ ಹತ್ತಿದ ಕೋತಿ ಬ್ಯಾಗ್​ನಲ್ಲಿ ಏನಾದರೂ ಇದ್ರೆ ತಿಂದು ಬಿಡೋಣ ಎಂದು ಹುಡುಕಾಡುತ್ತಿರೋ ದೃಶ್ಯ ಮನಕಲುಕುವಂತಿತ್ತು. ಕೋತಿಗಳ ಸ್ಥಿತಿ ನೋಡಿ ಟಿವಿ9 ತಂಡ ಬಾಳೆ ಹಣ್ಣುಗಳ ನೀಡುವ ಮೂಲಕ ಪ್ರಾಣಿಗಳ ಸ್ವಲ್ಪ ಮಟ್ಟಿನ ಹಸಿವು ನೀಗಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Fri, 7 June 24