ಅಜ್ಜ ನಿದ್ರೆಗೆ ಜಾರಿದಾಗ ಬಸ್ ಇಳಿದು ತಪ್ಪಿಸಿಕೊಂಡಿದ್ದ ಮೂರು ವರ್ಷದ ಮಗು ಪತ್ತೆ

| Updated By: ವಿವೇಕ ಬಿರಾದಾರ

Updated on: Dec 27, 2023 | 9:36 AM

ಎರಡು ಪ್ರತ್ಯೇಕ ಘಟನೆ: ಬಸ್ ಇಳಿದು ತಪ್ಪಿಸಿಕೊಂಡಿದ್ದ ಮೂರು ವರ್ಷದ ಮಗು ಮತ್ತೆ ಪೋಷಕರ ಮಡಿಲು ಸೇರಿದೆ. ಪತಿ ನಿಧನ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ನಡೆದಿದೆ.

ಅಜ್ಜ ನಿದ್ರೆಗೆ ಜಾರಿದಾಗ ಬಸ್ ಇಳಿದು ತಪ್ಪಿಸಿಕೊಂಡಿದ್ದ ಮೂರು ವರ್ಷದ ಮಗು ಪತ್ತೆ
ಪೋಷಕರ ಮಡಿಲು ಸೇರಿದ ಮಗು
Follow us on

ಚಿಕ್ಕಮಗಳೂರು, ಡಿಸೆಂಬರ್​ 27: ಬಸ್ (Bus) ಇಳಿದು ತಪ್ಪಿಸಿಕೊಂಡಿದ್ದ ಮೂರು ವರ್ಷದ ಮಗು ಮತ್ತೆ ಪೋಷಕರ ಮಡಿಲು ಸೇರಿದೆ. ತರೀಕೆರೆ (Tarikere) ತಾಲೂಕಿನ ತಣಿಗೇಬೈಲು ಗ್ರಾಮದ ನಿವಾಸಿಗಳಾದ ಅಜ್ಜ ಮತ್ತು ಮೂರು ವರ್ಷದ ಮೊಮ್ಮಗ ಶ್ರೇಯಸ್​ ತರಿಕೇರೆಗೆ ಹೊರಟಿದ್ದ ಖಾಸಗಿ ಬಸ್​ ಹತ್ತುತ್ತಾರೆ. ಬಸ್​​ನಲ್ಲಿ ಶ್ರೇಯಸ್​ ಅಜ್ಜ ನಿದ್ರೆಗೆ ಜಾರಿದ್ದಾರೆ. ಖಾಸಗಿ ಬಸ್ ಲಿಂಗದಹಳ್ಳಿ ನಿಲ್ದಾಣದ ಬಳಿ ಬಸ್​ ​ಬಂದು ನಿಂತಿದೆ. ಈ ವೇಳೆ ಶ್ರೇಯಸ್​ ಕೆಳೆಗೆ ಇಳಿದಿದ್ದಾನೆ. ನಿಲ್ದಾಣದ ಬಳಿ ತರೀಕೆರೆಗೆ ಹೊರಟಿದ್ದ ಮತ್ತೊಂದು ಬಸ್​ ಹತ್ತಿದ್ದಾನೆ.

ನಂತರ ಬಸ್​ ತರೀಕೆರೆ ಕಡೆಗೆ ಹೊರಡುತ್ತದೆ. ಆಗ ಬಸ್ಸಿನಲ್ಲಿದ್ದ ಶ್ರೇಯಸ್​ ತನ್ನ ಅಜ್ಜ ಕಾಣದೆ ಅಳಲು ಆರಂಭಿಸುತ್ತಾನೆ. ಆಗ ಪ್ರಯಾಣಿಕರು ಮಗುವನ್ನು ವಿಚಾರಿಸಿ, ಠಾಣೆಗೆ ಕರೆದೊಯ್ಯುತ್ತಾರೆ. ನಂತರ ಸಾರ್ವಜನಿಕರು ಬಾಲಕನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಇದು ಪೋಷಕರ ಗಮನಕ್ಕೆ ಬರತುತ್ತದೆ. ಕೂಡಲೆ ಪೋಷಕರು ಪೊಲೀಸ್ ಠಾಣೆಗೆ ಬಂದು ಮಗುವನ್ನು ಕರೆದುಕೊಂಡು ಹೋಗುತ್ತಾರೆ. ಪೊಲೀಸರು ಹಾಗೂ ಸಾರ್ವಜನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಠಾಣೆಯಿಂದಲೇ ಕಾಣೆಯಾದ ವ್ಯಕ್ತಿ; ಪೋಲಿಸರ ವಿರುದ್ದ ಪೋಷಕರ ಆಕ್ರೋಶ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಆತ್ಮಹತ್ಯೆಗೆ ಶರಣು

ನೆಲಮಂಗಲ: ಪತಿ ನಿಧನ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ನಡೆದಿದೆ. ಅನ್ನಪೂರ್ಣ (42) ಮೃತ ಮಹಿಳೆ. ಪತಿ ಶ್ರೀನಿವಾಸ್ ಮೂರು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಪತಿ ನಿಧನದ ಬಳಿಕ ಅನ್ನಪೂರ್ಣ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಮೃತ ಅನ್ನಪೂರ್ಣ ತಡರಾತ್ರಿ ಒಂದು ಘಂಟೆ ಸುಮಾರಿಗೆ ಮಹಡಿ ಮೇಲಿರುವ ಕೋಣೆಯಲ್ಲಿ ಪ್ಯಾನ್​ಗೆ ಸೀರೆಯಿಂದ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಗೆ 20 ವರ್ಷದ ಹಾಗೂ 22 ವರ್ಷದ ಮಕ್ಕಳು ಇದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ