Chikmagalur News: ದಶಕಗಳಿಂದ ಮನವಿ ಮಾಡಿದ್ರು ಸ್ಪಂದಿಸದ ಜನಪ್ರತಿನಿಧಿಗಳು: ತಮ್ಮೂರಿನ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡ ಗ್ರಾಮಸ್ಥರು
ನಿತ್ಯ ಸಾವಿರಾರು ಜನ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಹನಗಳು ಸಂಚಾರ ಮಾಡಲು ಕಷ್ಟವಾಗಿದ್ದ ರಸ್ತೆಗೆ ಗ್ರಾಮಸ್ಥರು ಸೇರಿ ಮಣ್ಣನ್ನ ಹಾಕಿದ್ದಾರೆ. ಕೊಪ್ಪ ಪಟ್ಟಣಕ್ಕೆ ಸಂಪರ್ಕಿಸುವ ಮೂರು ಕಿಮೀ ವರೆಗೂ ಮಣ್ಣನ್ನ ಹಾಕಿ ದುರಸ್ತಿ ಕಾರ್ಯವನ್ನ ಗ್ರಾಮಸ್ಥರೇ ಮಾಡಿದ್ದಾರೆ. ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಮಗಳೂರು, ನ.05: ಒಂದು ಸಾವಿರ ಜನಸಂಖ್ಯೆ ಇರುವ ಗ್ರಾಮದ ರಸ್ತೆ ದುರಸ್ತಿ ಮಾಡುವಂತೆ ದಶಕಗಳಿಂದ ಮನವಿ ಮಾಡಿದರೂ ಗ್ರಾಮಸ್ಥರಿಗೆ ಸ್ಪಂದಿಸದ ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಎರಡು ಗ್ರಾಮಗಳ ಗ್ರಾಮಸ್ಥರೇ (Villagers) ಸೇರಿ ಹಣ ಸಂಗ್ರಹ ಮಾಡಿ ತಮ್ಮೂರಿನ ರಸ್ತೆಗೆ ಮಣ್ಣನ್ನ ಹಾಕಿ ರಸ್ತೆ ದುರಸ್ತಿ ಕಾರ್ಯ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ N.R ಪುರ ತಾಲೂಕಿನ ಕರ್ಕೇಶ್ವರ, ಗಬ್ಬೂರು ಗ್ರಾಮಸ್ಥರು ಸೇರಿಕೊಂಡು ರಸ್ತೆ ದುರಸ್ಥಿ ಕಾರ್ಯ ಮಾಡಿದ್ದಾರೆ.
ಎರಡು ದಶಕಗಳಿಂದ ಗ್ರಾಮಸ್ಥರು ಮನವಿ ಮಾಡಿದ್ರು ಸ್ಪಂದಿಸದ ಜನಪ್ರತಿನಿಧಿಗಳು, ಜಿಲ್ಲಾಡಳಿತ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಅದೆಷ್ಟೋ ಗ್ರಾಮಗಳಿಗೆ ಇನ್ನು ಸರಿಯಾದ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ. ಒಂದು ಸಾವಿರ ಜನ ಸಂಖ್ಯೆ ಇರುವ N.R ಪುರ ತಾಲೂಕಿನ ಕರ್ಕೇಶ್ವರ ಮತ್ತು ಗಬ್ಬೂರು ಗ್ರಾಮದಿಂದ ಕೊಪ್ಪ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು 20 ವರ್ಷಗಳೇ ಕಳೆದ್ರೂ ಇನ್ನೂ ರಸ್ತೆ ದುರಸ್ತಿಯ ಭಾಗ್ಯ ಮಾತ್ರ ಗ್ರಾಮಸ್ಥರಿಗೆ ಸಿಕ್ಕಿಲ್ಲ. ರಸ್ತೆ ದುರಸ್ತಿಗಾಗಿ ನೂರಾರು ಬಾರಿ ಮನವಿ ಮಾಡಿದ್ರು ಸ್ಪಂದಿಸದ ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಪ್ರತಿನಿತ್ಯ ಸಾವಿರಾರು ಜನ ಸಂಚಾರ ಮಾಡುವ ರಸ್ತೆಯ ದುರಸ್ತಿಗಾಗಿ ಕರ್ಕೇಶ್ವರ ಗಬ್ಬೂರು ಗ್ರಾಮದ ಗ್ರಾಮಸ್ಥರು ಸೇರಿ ಗ್ರಾಮಸ್ಥರ ಬಳಿ ಹಣ ಸಂಗ್ರಹ ಮಾಡಿ ಸ್ವತಃ ತಮ್ಮೂರಿನ ರಸ್ತೆಗೆ ಮಣ್ಣನ್ನ ಹಾಕಿ ರಸ್ತೆ ದುರಸ್ತಿ ಮಾಡಿದ್ದಾರೆ.
3 K.M ರಸ್ತೆಗೆ ಮಣ್ಣು ಹಾಕಿ ದುರಸ್ತಿ ಕಾರ್ಯ ಮಾಡಿದ ಗ್ರಾಮಸ್ಥರು
ನಿತ್ಯ ಸಾವಿರಾರು ಜನ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಾಹನಗಳು ಸಂಚಾರ ಮಾಡಲು ಕಷ್ಟವಾಗಿದ್ದ ರಸ್ತೆಗೆ ಗ್ರಾಮಸ್ಥರು ಸೇರಿ ಮಣ್ಣನ್ನ ಹಾಕಿದ್ದಾರೆ. ಕೊಪ್ಪ ಪಟ್ಟಣಕ್ಕೆ ಸಂಪರ್ಕಿಸುವ ಮೂರು ಕಿಮೀ ವರೆಗೂ ಮಣ್ಣನ್ನ ಹಾಕಿ ದುರಸ್ತಿ ಕಾರ್ಯವನ್ನ ಗ್ರಾಮಸ್ಥರೇ ಮಾಡಿದ್ದು ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಶೃಂಗೇರಿ ಕ್ಷೇತ್ರದ ಜನ ಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:03 pm, Mon, 6 November 23