AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಡಿಗೆರೆಯಲ್ಲಿ ಮುಂದುವರಿದ ಬೀಟಮ್ಮ ಗ್ಯಾಂಗ್ ದಾಂಧಲೆ; ಲಕ್ಷಾಂತರ ಮೌಲ್ಯದ ಬಳೆ ನಾಶ

ದಾಂಧಲೆ‌ ಎಬ್ಬಿಸಿ ಆತಂಕ ಸೃಷ್ಟಿ ಮಾಡುತ್ತಿರುವ ಕಾಡಾನೆ ಬೀಟಮ್ಮ ಗ್ಯಾಂಗ್. ದಿನಕ್ಕೊಂದು ಗ್ರಾಮದಲ್ಲಿ ಕಣಿಸಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಇದೀಗ ಮೂಡಿಗೆರೆ ತಾಲೂಕಿನಲ್ಲಿ ಬೀಟಮ್ಮ ಗ್ಯಾಂಗ್ ಉಪಟಳ ಹೆಚ್ಚಾಗುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಗೊಂಡಿದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೂಡಿಗೆರೆಯಲ್ಲಿ ಮುಂದುವರಿದ ಬೀಟಮ್ಮ ಗ್ಯಾಂಗ್ ದಾಂಧಲೆ; ಲಕ್ಷಾಂತರ ಮೌಲ್ಯದ ಬಳೆ ನಾಶ
ಬೀಟಮ್ಮ ಗ್ಯಾಂಗ್
TV9 Web
| Updated By: Rakesh Nayak Manchi|

Updated on: Feb 29, 2024 | 9:05 AM

Share

ಚಿಕ್ಕಮಗಳೂರು, ಫೆ.29: ಜಿಲ್ಲೆಯಲ್ಲಿ ಇತ್ತೀಚೆಗೆ ದಾಂಧಲೆ‌ ಎಬ್ಬಿಸಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಬೀಟಮ್ಮ ಗ್ಯಾಂಗ್ (Beetamma Gang) ದಿನಕ್ಕೊಂದು ಗ್ರಾಮದಲ್ಲಿ ಕಣಿಸಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಇದೀಗ ಮೂಡಿಗೆರೆ (Mudigere) ತಾಲೂಕಿನಲ್ಲಿ ಬೀಡುಬಿಟ್ಟಿರುವ ಈ ಗ್ಯಾಂಗ್​ನ ದಾಂಧಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶಗೊಂಡಿದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಾಸನ ಚಿಕ್ಕಮಗಳೂರು ಗಡಿ ಭಾಗದಲ್ಲಿ ಬೀಡುಬಿಟ್ಟಿರುವ ಬೀಟಮ್ಮ ತನ್ನ 20ಕ್ಕೂ ಹೆಚ್ಚು ಕಾಡಾನೆಗಳೊಂದಿಗೆ ದಾಂಧಲೆ ನಡೆಸುತ್ತಿದ್ದಾಳೆ. ಕಳೆದ ನಾಲ್ಕು ದಿನಗಳಲ್ಲಿ ಮೂಡಿಗೆರೆ ತಾಲೂಕಿನ ಐದು ಗ್ರಾಮಗಳಿಗೆ ಈ ಗ್ಯಾಂಗ್ ಲಗ್ಗೆ ಇಟ್ಟಿದ್ದು, ಲಕ್ಷಾಂತರ ಮೌಲ್ಯದ ಕಾಫಿ, ಮೆಣಸು, ಬಾಳೆ ಬೆಳೆ ನಾಶಗೊಂಡಿದೆ.

ಇದನ್ನೂ ಓದಿ: ಮುಂದುವರೆದ ಬೀಟಮ್ಮ ಗ್ಯಾಂಗ್ ಉಪಟಳ; ಛತ್ರಿಮರ ದೇಗುಲ ಬಳಿ ಬೀಡುಬಿಟ್ಟ 26 ಕಾಡಾನೆಗಳು

ಕಾರ್ ಬೈಲು, ನಂದಿಪುರ, ಮಾಕೋನಹಳ್ಳಿ, ಚಂದ್ರಾಪುರದಲ್ಲಿ ಸಂಚಾರ ಮಾಡುತ್ತಿರುವ ಬೀಟಮ್ಮ ಗ್ಯಾಂಗ್, ಮಾಕೋನಹಳ್ಳಿ ಹಾಗೂ ಕಾರ್ ಬೈಲು ಗ್ರಾಮಗಳಲ್ಲಿ 10 ಎಕರೆಗೂ ಅಧಿಕ ಪ್ರದೇಶದಲ್ಲಿ ಕಾಫಿ ತೋಟ ನಾಶಗೊಳಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕಾಡಾನೆ ಹಿಂಡನ್ನು ಕಾಡಿಗಟ್ಟುವಂತೆ ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆ ವಿರುದ್ಧವೇ ಸಿಬ್ಬಂದಿ ಅಸಮಾಧಾನ

ನಾನು ನಡೆದಿದ್ದೇ ದಾರಿ ಎಂದು ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಹಲವು ಗ್ರಾಮಗಳಿಗೆ ಲಗ್ಗೆ ಇಡುತ್ತಿದೆ. ಈ ಗ್ಯಾಂಗ್ ನಗರ ಪ್ರದೇಶಕ್ಕೆ ಎಂಟ್ರಿ ಕೊಡದಂತೆ ನೋಡಿಕೊಳ್ಳಲು ಇಟಿಎಫ್ ಸಿಬ್ಬಂದಿ ಕಾವಲು ನಿಂತಿದ್ದರು. ಆದರೆ, ಈ ಸಿಬ್ಬಂದಿಗೆ ಸರಿಯಾದ ಸಮಯಕ್ಕೆ ಸಂಬಳವಿಲ್ಲ, ಕಾರ್ಯಚರಣೆ ವೇಳೆ ಊಟ-ತಿಂಡಿಯೂ ನಿಡುತ್ತಿಲ್ಲವೆಂದು ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿ ಅರಣ್ಯ ಇಲಾಖೆ ವಿರುದ್ಧ ಅಸಾಮಾಧಾನ ಹೊರಹಾಕಿದ್ದರು. ಅಲ್ಲದೆ, ಕೆಲಸಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಬೀಟಮ್ಮ ಗ್ಯಾಂಗ್ ಬಲಿಷ್ಠವಾಗಿದೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ದಾಳಿ ನಡೆಸಿ ಸಿಕ್ಕ ಆಹಾರ ತಿನ್ನುತ್ತಿವೆ. ಇವುಗಳ ಕಾರ್ಯಚರಣೆಗೆ ಕರೆಸಿದ್ದ ಕುಮ್ಕಿ ಆನೆಗಳ ಮೇಲೂ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಕುಮ್ಕಿ ಕ್ಯಾಂಪ್‌ನಲ್ಲಿದ್ದ ಅಭಿಮನ್ಯು, ಮಹೇಂದ್ರ, ಭೀಮ, ಧನಂಜಯ, ಸುಗ್ರೀವ, ಹರ್ಷ, ಅಶ್ವತ್ಥಾಮ, ಪ್ರಶಾಂತ ಹೆಸರಿನ ಆನೆಗಳು ಮತ್ತಾವರ ಗ್ರಾಮದ ಅರಣ್ಯ ಇಲಾಖೆಯ ಗೆಸ್ಟ್ ಹೌಸ್​ನಲ್ಲಿ ಇರಿಸಲಾಗಿತ್ತು. ಆಗ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಇದರಿಂದ ಭಯಗೊಂಡ ಅರಣ್ಯ ಸಿಬ್ಬಂದಿ ಅಭಿಮನ್ಯ ಟೀಮನ್ನು ಮೂಡಿಗೆರೆಗೆ ಶಿಫ್ಟ್ ಮಾಡಿದ್ದರು.

ಅನಾವಶ್ಯಕವಾಗಿ ಯಾರೂ ರಸ್ತೆಗೆ ಇಳಿಯಬೇಡಿ ಎಂದು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಕೆಲಸವಿದ್ದರೆ ಬೆಳಗ್ಗೆ ಮಾಡಿಕೊಳ್ಳಿ ಎಂಬ ಮಾತುಗಳನ್ನು ಮೈಕ್ ಮೂಲಕ ಅನೌನ್ಸ್ ಮಾಡಿಸಿದ್ದಾರೆ. ಕಾಫಿ ತೋಟ ಹಾಗೂ ಇತರೆ ಕೆಲಸಗಳಿಗೆ ಅನಾವಶ್ಯಕವಾಗಿ ಹೋಗಬೇಡಿ ಎಂದು ಹೇಳಿದ್ದಾರೆ. ಆದರೆ ಇಲ್ಲಿನ ಜನರಲ್ಲಿ ಆನೆ ಭೀತಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ